ಜಯನಗರ ಪೊಲೀಸ್ ಠಾಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಭೇಟಿ ಸುಳ್ಳು ಎಫ್‍ಐಆರ್ ಹಿಂಪಡೆಯಲು ಆಗ್ರಹ

ಬೆಂಗಳೂರು: ಜಯನಗರ ಕ್ಷೇತ್ರದಲ್ಲಿ ವೋಟರ್ ಐಡಿ (ಮತದಾರರ ಪಟ್ಟಿ) ಪರಿಶೀಲನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗಿರುವ ಸುಳ್ಳು ಎಫ್‍ಐಆರ್(FIR) ಅನ್ನು ಖಂಡಿಸಿ ಹಾಗೂ ಇದನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ(C.K.Ramamurthy) ಅವರ ನೇತೃತ್ವದಲ್ಲಿ ಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು.

ಪ್ರಮುಖ ಮುಖಂಡರ ಭೇಟಿ ಹಾಗೂ ಆಕ್ರೋಶ:
ಜಯನಗರ ಪೊಲೀಸ್ ಠಾಣೆಗೆ ತೆರಳಿದ ನಿಯೋಗವು ಪೊಲೀಸ್ರ ಏಕಪಕ್ಷೀಯ ಧೋರಣೆ ಮತ್ತು ಸುಳ್ಳು ಪ್ರಕರಣ ದಾಖಲಿಸಿರುವುದರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಶಾಸಕ ಸಿ.ಕೆ. ರಾಮಮೂರ್ತಿ, ಗೋವಿಂದರಾಜನಗರ ಕ್ಷೇತ್ರದ ಮುಖಂಡ ಹಾಗೂ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಬೆಂಗಳೂರು ದಕ್ಷಿಣ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೃಷ್ಣ ಹಾಗೂ ಜಯನಗರ ಕ್ಷೇತ್ರದ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಫಾರ್ಮ್-7 ಸಲ್ಲಿಕೆ ವಿವಾದ: ನಕಲಿ ಹಾಗೂ ಡಬಲ್ ಎಂಟ್ರಿ ಮತದಾರರ ಹೆಸರುಗಳ ಪರಿಶೀಲನೆಗೆ ಬಿಜೆಪಿ ಕಾರ್ಯಕರ್ತರು ಕಾನೂನುಬದ್ಧವಾಗಿ ಫಾರ್ಮ್-7 ಸಲ್ಲಿಸಿದ್ದರೂ, ಅದನ್ನು ರಾಜಕೀಯ ದುರುದ್ದೇಶದಿಂದ ತಿರುಚಿ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗಿದೆ ಎಂದು ಮುಖಂಡರು ಆರೋಪಿಸಿದರು.

ಚುನಾವಣಾಧಿಕಾರಿ ಹಾಗೂ ಪೊಲೀಸ್ರ ವಿರುದ್ಧ ಅಸಮಾಧಾನ: ಗೌಪ್ಯವಾಗಿಡಬೇಕಾದ ಅರ್ಜಿಗಳನ್ನು ಕಾಂಗ್ರೆಸ್ ಕಾರ್ಯಕರ್ತರ ಕೈಗೆ ತಲುಪಿಸಿ, ತರಾತುರಿಯಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿರುವುದು ಖಂಡನೀಯ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈ ಸುಳ್ಳು ಎಫ್‍ಐಆರ್ ಅನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

Hot this week

ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಿಸ್ತರಣೆಗೆ ₹10,000 ಕೋಟಿ ನಿಧಿ

ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗೆ ನೆರವಾಗಲು ಕೇಂದ್ರ ಸಚಿವ ಸಂಪುಟವು...

ಷೇರು ಮಾರುಕಟ್ಟೆಗೆ ಬಡ್ಡಿದರ ಮತ್ತು ತೈಲ ಬೆಲೆಗಳ ಒತ್ತಡ — ತಂತ್ರಜ್ಞಾನ ವಲಯಕ್ಕೆ ಬೆಂಬಲ

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲಿ ಕುಸಿತ ದಾಖಲಿಸಿವೆ...

ತೈಲ ಸಾಗಣೆ ಹಡಗಿಗೆ ಕ್ಷಿಪಣಿ ರೀತಿಯ ಉತ್ಕ್ಷೇಪಕ ಅಪ್ಪಳಿಸಿ 12 ಸಿಬ್ಬಂದಿಗೆ ಗಾಯ

ಮಸ್ಕಟ್/ನವದೆಹಲಿ: ಒಮಾನ್‌ ಕರಾವಳಿಯ ಸಮೀಪ ಹೋರ್ಮುಜ್ ಜಲಸಂಧಿ (Strait of Hormuz)...

ವಿಜಯವಾಡ: ಪಾಕಿಸ್ತಾನಕ್ಕೆ ಸಂಪರ್ಕ ಹೊಂದಿರುವ ಶಂಕಿತ ಗೂಢಚರ್ಯೆ ಜಾಲದ ವಿರುದ್ಧ ಆಂಧ್ರಪ್ರದೇಶದ...

Topics

ನವದೆಹಲಿ: “ಎನರ್ಜಿ ಡ್ರಿಂಕ್‌”(Energy Drink) ಎಂಬ ಲೇಬಲ್‌ ಬಳಕೆಗೆ ಸಂಬಂಧಿಸಿದ ವಿವಾದದ...

ಬುಧವಾರ ಭಾರತೀಯ ರೂಪಾಯಿ ಮೌಲ್ಯ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ

ನವದೆಹಲಿ: ಭಾರತೀಯ ರೂಪಾಯಿ ಮೌಲ್ಯವು((Indian Rupees Value) ಬುಧವಾರ ಅಮೆರಿಕ ಡಾಲರ್‌...

Related Articles