ದೇಶ, ವಿದೇಶಗಳ ವಿಭಿನ್ನ ಉಡುಪುಗಳ ಬಿ-ಮೋರ್” ಮಳಿಗೆ ಜಯನಗರದಲ್ಲಿ ಆರಂಭ

ಬೆಂಗಳೂರು,ಡಿ.6: ದೇಶ, ವಿದೇಶಗಳ ವೈವಿಧ್ಯಮಯ, ಆಕರ್ಷಕ ವಿನ್ಯಾಸಗಳನ್ನೊಳಗೊಂಡ ವಿಭಿನ್ನ ಉಡುಪುಗಳ ಬ್ರ್ಯಾಂಡ್ ಹೊಂದಿರುವ “ಬಿ-ಮೋರ್” (B-More) ಮಳಿಗೆಯನ್ನು ಜಯಗರದಲ್ಲಿಂದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ (BJP Yuva Morcha) ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi Surya) ಉದ್ಘಾಟಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್‌, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ,ಜಯನಗರ ವಿಧಾನಸಭಾ ಕ್ಷೇತ್ರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜು, ಮಾಲೀಕರಾದ ಪ್ರಕಾಶ್‌ ಬಾಫ್ನಾ, ಅಕ್ಷಯ್, ಮನೀಶ್ ಮತ್ತಿತರರು ಉಪಸ್ಥಿತರಿದ್ದರು.

ನಂತರ ಮಾತನಾಡಿದ ತೇಜಸ್ವಿ ಸೂರ್ಯ, ಬೆಂಗಳೂರು ನಗರದಲ್ಲಿ ಅದರಲ್ಲೂ ದಕ್ಷಿಣ ಬೆಂಗಳೂರು ಭಾಗದಲ್ಲಿ ಈ ಮಳಿಗೆ ಮೈಲಿಗಲ್ಲು ಸ್ಥಾಪಿಸಲಿದೆ. ಮದುವೆಗೆ ಬೇಕಾದ ಬಟ್ಟೆಗಳನ್ನು ಇಲ್ಲಿ ಒಂದೇ ವೇದಿಕೆಯಲ್ಲಿ ಖರೀದಿಸಬಹುದು. ದಕ್ಷಿಣ ಬೆಂಗಳೂರು ಭಾಗದಲ್ಲಿ ಇದು ಅತ್ಯುತ್ತಮ ಶಾಪಿಂಗ್‌ ತಾಣವಾಗಲಿದೆ. ಇಲ್ಲಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ನುರಿತ ಸಿಬ್ಬಂದಿ ಇದ್ದು, ಈ ಮಳಿಗೆ ವೃತ್ತಿಪರತೆಗೆ ಹೆಸರಾಗಿದೆ. ಇಲ್ಲಿ ದೇಶ, ವಿದೇಶಗಳ ಎಲ್ಲಾ ಬ್ರ್ಯಾಂಡ್ ಗಳು ದೊರೆಯಲಿವೆ ಎಂದು ಹೇಳಿದರು.

ಮಳಿಗೆಯ ಮಾಲೀಕ ಅಕ್ಷಯ್‌ ಮಾತನಾಡಿ, ಬಿ ಮೋರ್‌ ನಲ್ಲಿ ಪ್ರಮುಖ 30 ಬ್ರ್ಯಾಂಡ್ ಗಳು ದೊರೆಯಲಿದ್ದು, ನಮ್ಮಲ್ಲಿ 30 ಶ್ರೇಷ್ಠ ವಿನ್ಯಾಸಕಾರರಿದ್ದಾರೆ.

ಇಲ್ಲಿ ಆಯ್ಕೆಗೆ ಮಿತಿಯೇ ಇಲ್ಲ. ಇಂಡೋ ವೆಸ್ಟ್ರನ್‌, ಶರ್ಟ್‌ ಗಳು, ವಿವಿಧ ವಿನ್ಯಾಸಗಳು, ಕ್ಯಾಶುಯಲ್‌ ವೇರ್‌ ಗಳು, ಡೆನಿಮ್, ಟ್ರೌಷರ್ಸ್‌, ಟೀ ಶರ್ಟ್ಸ್‌ ಸೇರಿ ಎಲ್ಲಾ ಆಯ್ಕೆಗಳೂ ಇವೆ. ಕಾಟನ್‌, ವುಲ್ಸ್‌, ಲನನ್ಸ್‌, ಲಿನನ್ ಸಿಲ್ಕ್‌, ಅಂತಾರಾಷ್ಟ್ರೀಯ ಬ್ರ್ಯಾಂಡ್‌ ಗಳನ್ನು ಒಂದೇ ವೇದಿಕೆಗೆ ತರಲಾಗಿದೆ. ಇಟಲಿ, ಜಪಾನ್‌ ಸೇರಿ ವಿವಿಧ ದೇಶಗಳ ಬಟ್ಟೆಗಳ ಸಹ ಇವೆ. ಇಲ್ಲಿನ ಶಾಪಿಂಗ್‌ ಅನುಭವವೇ ವಿಭಿನ್ನವಾದದ್ದು. ಕೆಲವು ಬ್ರ್ಯಾಂಡ್ ಗಳನ್ನು ರಿಯಾಯಿತಿ ದರದಲ್ಲಿಸಹ ಮಾರಾಟ ಮಾಡಲಾಗುತ್ತಿದೆ ಎಂದರು. ಮಾಲೀಕರಾದ ಪ್ರಾಕಾಶ್‌ ಬಾಫ್ನಾ ಮಾತನಾಡಿ, ದಕ್ಷಿಣ ಬೆಂಗಳೂರಿನಲ್ಲಿ ಇದು ಅತ್ಯಂತ ವಿನೂತನ ಮಳಿಗೆಯಾಗಿದ್ದು, ಬಟ್ಟೆಗಳಿಗಾಗಿ ಬೇರೆ ಬೇರೆ ಕಡೆ ಅಲೆದಾಡುವ ಅಗತ್ಯವಿಲ್ಲ. ಇಲ್ಲಿ ಎಲ್ಲಾ ರೀತಿಯ ಬ್ರ್ಯಾಂಡ್‌ ಗಳು ಇಲ್ಲಿ ದೊರೆಯಲಿವೆ ಎಂದರು.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles