ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

ಬೆಂಗಳೂರು, ಅಕ್ಟೋಬರ್ 12, (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Department of Information and Public Relations) ಇಲಾಖೆಯ ಮಾಧ್ಯಮ ಪಟ್ಟಿ (Media List) ಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ  ಪತ್ರಕರ್ತರು (Journalists)  ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ (Free Bus Pass) ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ  ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್/ಸಂಭಾವನೆ/ಕಮೀಷನ್ ಪಡೆದಿರುವ ದಾಖಲೆ)ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟ್ ಮೆಂಟ್ ಲಗತ್ತಿಸಿ “ಸೇವಾಸಿಂಧು” ಪೋರ್ಟಲ್ https://sevasindhu.karnataka.gov.in  ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಆನ್‍ಲೈನ್‍ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ.

ರಾಜ್ಯದ ಎಲ್ಲ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ “ಸೇವಾಸಿಂಧು” ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸುವುದರ ಮೂಲಕ  ಈ ಸದುಪಯೋಗ ಪಡೆದುಕೊಳ್ಳಬಹುದು  ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:

ದೇವನಹಳ್ಳಿ: ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಜಾರಿಗೆ ಬಂದ ಮಾಹಿತಿ ಕ್ಕು...

ಜನಿವಾರ ತೆಗೆಸಿದ ಕೃತ್ಯ ‘ಪೆಹಲ್ಗಾಂ’ ಮಾದರಿಯ ದಬ್ಬಾಳಿಕೆ:

ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ​ಇತ್ತೀಚೆಗೆ ನಡೆದ ಸಿಇಟಿ (CET) ಪರೀಕ್ಷಾ ಸಮಯದಲ್ಲಿ...

ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*

ಬೆಂಗಳೂರು,ಮೇ.1: ವಿಶ್ವ ಕಾರ್ಮಿಕರ ದಿನಾಚರಣೆ (Vishva Karmikara dinacharane)  ಪ್ರಯುಕ್ತ ಸದಾಶಿವನಗರ...

ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ

ಭಾರತೀಯ ಶಾಸ್ತ್ರೀಯ ನೃತ್ಯದ ಲೋಕದಲ್ಲಿ ರಂಗಪ್ರವೇಶ ಎಂದರೆ ಕೇವಲ ಒಂದು ಪ್ರದರ್ಶನವಲ್ಲ—ಅದು ಒಂದು ಘೋಷಣೆ....

Topics

“ವಿಶ್ವ ನೃತ್ಯ ದಿನಾಚರಣೆ”

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಅಂಬಿಕಾ ಸಿ(Ambika .c)...

ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಬೆಂಗಳೂರು : ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ...

ತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಬೆಂಗಳೂರು : ತ್ಯಾಗರಾಜನಗರದ 11ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Related Articles