ಮಹಿಳೆಯರ ಪಾತ್ರವು ದೇಶದ ಅಭಿವೃದ್ಧಿ‌ ಮತ್ತು ಪ್ರಗತಿಗೆ ಭದ್ರ ಬುನಾದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕರ್ನಾಟಕ ವಾರ್ತೆ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ(In all fields) ಶಕ್ತಿಶಾಲಿಗಳಾಗಿ ಬೆಳೆದಾಗ ನಮ್ಮ ದೇಶ ಬಲಗೊಳ್ಳಲು ಸಾಧ್ಯ. ಹಾಗಾಗಿ ಮಹಿಳೆಯರ ಪಾತ್ರವು ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಭದ್ರ ಬುನಾದಿಯಾಗಲಿದೆ(Strong Foundation) ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(CM D.K.Shivakumar) ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ನವೆಂಬರ್ 17 ಹಾಗೂ 18 ರಂದು ಹಮ್ಮಿಕೊಳ್ಳಲಾಗಿರುವ ಕಾಮನ್ ವೆಲ್ತ್ ಮಹಿಳಾ ಸಂಸದರ ಭಾರತೀಯ ಪ್ರಾದೇಶಿಕ ಸಮ್ಮೇಳನದ ಲೋಗೋವನ್ನು ಇಂದು   ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೆಣ್ಣು ಕುಟುಂಬದ ಕಣ್ಣು, ಹಾಗಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು ಶಕ್ತಿಯನ್ನು ನೀಡಬೇಕು.  ಹೆಣ್ಣು ಗಟ್ಟಿಯಾದರೆ ದೇಶವೂ ಗಟ್ಟಿಯಾಗುತ್ತದೆ” ಎಂದು ಬಲವಾಗಿ  ನಂಬಿರುವ ನಾವು, ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಸದಾಕಾಲ ಬದ್ಧರಾಗಿರುತ್ತೇವೆ ಎಂದರು.

ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದ  ಕಾಲದಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಕಲ್ಪಿಸುವ ಕಾನೂನನ್ನು ತಂದರು. ಈಗ ಅದೇ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ನಮ್ಮ ರಾಜ್ಯದ ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು,  ವಿಧಾನಸಭೆ ಹಾಗೂ  ಪರಿಷತ್ತಿನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ತಿನ ಉಪಸಭಾಪತಿಯಂತಹ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಇರುವುದು ಹೆಮ್ಮೆಯ ವಿಚಾರ. ಹೆಣ್ಣು ಮಕ್ಕಳು ಸಂಸಾರವನ್ನು ಸರಿಯಾಗಿ ನಡೆಸಿಕೊಂಡು ಹೋಗುವುದಲ್ಲದೆ, ಎಲ್ಲಾ ವಿಚಾರದಲ್ಲೂ ಲೆಕ್ಕಚಾರದಿಂದ ಇರುತ್ತಾರೆ. ಈಗ ಹೆಣ್ಣು ಮಕ್ಕಳು ದೇಶಕ್ಕೆ ಸಲಹೆ ನೀಡುವ ಹಂತಕ್ಕೆ ಬೆಳೆದಿದ್ದಾರೆ.

ಇಂದಿರಾಗಾಂಧಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡ ಮುಖ್ಯಮಂತ್ರಿಗಳು, ವೀರ ಮಹಿಳೆಯಾದ ಇಂದಿರಾಗಾಂಧಿಯವರು ದೇಶಕ್ಕೆ ಹೊಸ ಅಧ್ಯಾಯವನ್ನು ನೀಡಿದ್ದಾರೆ. ಅದೇ ರೀತಿಯಲ್ಲಿ ನಮ್ಮ ದೇಶದಲ್ಲಿ ಹಲವು ಮಹಿಳೆಯವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತವನ್ನು ನೀಡಿರುವ ಉದಾಹರಣೆಗಳಿವೆ ಎಂದು ತಿಳಿಸಿದರು.

ಈ ಸಮಾವೇಶದಲ್ಲಿ ಪಾಲ್ಗೊಂಡು ಚರ್ಚೆ ನಡೆಸಲಿರುವ ವಿವಿಧ ರಾಜ್ಯಗಳು ಮತ್ತು ವಿದೇಶದ ಮಹಿಳಾ ಜನಪ್ರತಿನಿಧಿಗಳು, ದೇಶವು ಯಾವ ಮಾರ್ಗದಲ್ಲಿ ನಡೆಯಬೇಕು ಎಂದು  ಸಲಹೆ ನೀಡುವ ಜೊತೆಗೆ  ಮಹಿಳಾ ಸಬಲೀಕರಣ ಹಾಗೂ ಇಂದಿನ ರಾಜಕೀಯ ಮತ್ತು ಸಂಸದೀಯ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಮಹತ್ವವನ್ನು ತಿಳಿಸಿಕೊಡಬೇಕೆಂದರು.

ನಮ್ಮ ದೇಶದಲ್ಲಿ ನಡೆಯುತ್ತಿರುವ ಮೊಟ್ಟಮೊದಲ  ಕಾಮನ್‌ ವೆಲ್ತ್‌ ಮಹಿಳಾ ಸಂಸದೆಯರ  ಪ್ರಾದೇಶಿಕ ಸಮ್ಮೇಳನ-2026 ನಮ್ಮ ರಾಜ್ಯದಲ್ಲಿ ನಡೆಯುತ್ತಿರುವುದು ಅತ್ಯಂತ ಹೆಮ್ಮೆ ಸಂಗತಿ. ಈ ಸಮ್ಮೇಳನವು ಕರ್ನಾಟಕದ ಇತಿಹಾಸಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಲಿದೆ. ಸಿಡಬ್ಲ್ಯುಪಿ ಭಾರತ ಪಾದೇಶಿಕ ಘಟಕದ ಅಧ್ಯಕ್ಷೆ ಡಾ. ಡಿ. ಪುರಂದರೇಶ್ವರಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರವು ಸಂಪೂರ್ಣ ಬೆಂಬಲ ಹಾಗೂ ಸಹಕಾರವನ್ನು ನೀಡಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಮನ್ ವೆಲ್ತ್ ಮಹಿಳಾ ಸಂಸದೀಯ ಪಟುಗಳ ಭಾರತ ವಿಭಾಗದ ಅಧ್ಯಕ್ಷರಾದ ಡಾ.ಡಿ.ಪುರಂದರೇಶ್ವರಿ ಅವರು ಮಾತನಾಡಿ, ನಾವು ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದ್ದೇವೆ. ಕಾಮನ್‌ವೆಲ್ತ್‌ ಮಹಿಳಾ ಸಂಸದರ ಸಂಘಟನೆಯು 1948ರಲ್ಲಿ ಆರಂಭವಾಯಿತು. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಚರ್ಚಿಸಲು 1989ರಲ್ಲಿ ಮಹಿಳರಿಗೆ ಪ್ರತ್ಯೇಕ ವೇದಿಕೆ ಬೇಕೆಂದು ನಿರ್ಧರಿಸಲಾಯಿತು.

ಕರ್ನಾಟಕದಲ್ಲಿ ಈ ತಿಂಗಳ 17 ಮತ್ತು 18ರಂದು ನಡೆಯಲಿರುವ ಸಮ್ಮೇಳನದಲ್ಲಿ ಭಾರತ ಪ್ರದೇಶದ ಕಾಮನ್‌ವೆಲ್ತ್‌ ಮಹಿಳಾ ಸಂಸದರ ಮೊದಲ ಸಮ್ಮೇಳನವನ್ನು ನಾವು ಆಯೋಜಿಸುತ್ತಿದ್ದೇವೆ. ಈ ಸಮ್ಮೇಳನಕ್ಕೆ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಗಳು, ವಿಧಾನಾಸಭೆಯ ಸಭಾಧ್ಯಕ್ಷರು ಹಾಗೂ ವಿಧಾನಪರಿಷತ್ತಿನ ಸಭಾಪತಿಗಳು ಸಂಪೂರ್ಣ ಬೆಂಬಲ ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಈ ಸಮ್ಮೇಳನವನ್ನು ಪ್ರಮುಖವಾಗಿ ಎರಡು ಉಪ-ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ  ಸೈಬರ್ ಜಗತ್ತಿನಲ್ಲಿ ಮಹಿಳೆಯರು ಎದುರಿಸುತ್ತಿರುವ ಸೈಬರ್ ಬೆದರಿಕೆಗಳು, ಸುಳ್ಳು ಸುದ್ದಿಗಳು ಮತ್ತು ಅವುಗಳನ್ನು ಮೆಟ್ಟಿ ನಿಲ್ಲುವ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ಹಾಗೂ  ಸಕ್ರಿಯ ರಾಜಕಾರಣಕ್ಕೆ ಬರುವ ಮಹಿಳೆಯರಿಗೆ ಮತ್ತು ಹೊಸ ಮಹಿಳಾ ನಾಯಕಿಯರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಾಂಸ್ಥಿಕ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ, ವಿಧಾನಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್,  ಸಭಾಪತಿಗಳಾದ ಉಮಾಶ್ರೀ, ವಿಧಾನ ಪರಿಷತ್ ಸದಸ್ಯರಾದ ಕೆ. ಗೋವಿಂದರಾಜು, ವಿಧಾನಸಭೆ ಕಾರ್ಯದರ್ಶಿಗಳಾದ ವಿಶಾಲಾಕ್ಷಿ ಹಾಗೂ ವಿಧಾನ ಪರಿಷತ್ ಕಾರ್ಯದರ್ಶಿಗಳಾದ ಜ್ಯೋತಿ ಉಪಸ್ಥಿತರಿದ್ದರು.

 

ಸಾವರ್ಕರ್‌ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಡಾ. ಎಸ್‌.ಆರ್‌. ಲೀಲಾ ಆಯ್ಕೆ

Hot this week

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bangalore) ಹಾಡಹಗಲೇ ಮತ್ತೊಂದು ಭೀಕರ ಕೊಲೆ ನಡೆದಿದೆ....

ನವದೆಹಲಿ: ಡಿಜಿಟಲ್ ಅರೆಸ್ಟ್(Digital Arrest) ಹೆಸರಿನಲ್ಲಿ ಸೈಬರ್ ವಂಚಕರು ನಡೆಸುತ್ತಿರುವ ಜಾಲಕ್ಕೆ...

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ...

ಹೈದರಾಬಾದ್: ಗಿಗ್ ಕಾರ್ಮಿಕರ (Gig Workers) ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ...

ಕಾನ್ಪುರ: ನಕಲಿ ಇ-ಮೇಲ್ ಖಾತೆಗಳನ್ನು(Duplicate email a/c) ಸೃಷ್ಟಿಸಿ ವಿದೇಶಗಳಿಗೆ ಮಾರಾಟ...

Topics

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bangalore) ಹಾಡಹಗಲೇ ಮತ್ತೊಂದು ಭೀಕರ ಕೊಲೆ ನಡೆದಿದೆ....

ನವದೆಹಲಿ: ಡಿಜಿಟಲ್ ಅರೆಸ್ಟ್(Digital Arrest) ಹೆಸರಿನಲ್ಲಿ ಸೈಬರ್ ವಂಚಕರು ನಡೆಸುತ್ತಿರುವ ಜಾಲಕ್ಕೆ...

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ...

ಹೈದರಾಬಾದ್: ಗಿಗ್ ಕಾರ್ಮಿಕರ (Gig Workers) ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ...

ಕಾನ್ಪುರ: ನಕಲಿ ಇ-ಮೇಲ್ ಖಾತೆಗಳನ್ನು(Duplicate email a/c) ಸೃಷ್ಟಿಸಿ ವಿದೇಶಗಳಿಗೆ ಮಾರಾಟ...

ಸಾವರ್ಕರ್‌ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಡಾ. ಎಸ್‌.ಆರ್‌. ಲೀಲಾ ಆಯ್ಕೆ

ಬೆಂಗಳೂರು: ಸಾವರ್ಕರ್‌ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಸಂಸ್ಕೃತ ವಿದ್ವಾಂಸರು, ಚಲನಚಿತ್ರ...

Related Articles