ವೃದ್ದ ದಂಪತಿಗಳ ಅನ್ಯೋನ್ಯ ಪ್ರೇಮಕಥೆ(Love Story). ವೃದ್ದಪ್ಯರ ಒಂಟಿತನ ಹಾಗೂ ಮಾನವೀಯ ಸಂಬಂಧಗಳ ಕುರಿತಂತೆ ಹೃದಯಸ್ಪರ್ಶಿ ಸನ್ನಿವೇಶಗಳನ್ನು ಒಳಗೊಂಡಿರುವ ’ಪೈರ್’ ಚಿತ್ರವು(Pair Film) ಈಗಾಗಲೇ 18 ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ 15 ಅತ್ಯುತ್ತಮ ಚಲನ ಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು, ಅಪಾರ ಮೆಚ್ಚುಗೆ ಗಳಿಸಿದೆ. ಪ್ರಶಸ್ತಿ ವಿಜೇತ ನಿರ್ದೇಶಕ ವಿನೋದ್ ಕಾಪ್ರಿ(Vinod Kaapri) ಕಥೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಅರಿಂದ್ರರೈ ಚೌದರಿ ಹಾಗೂ ಸುರೇಶ್ ಜೋಶಿ ಬಂಡವಾಳ ಹೂಡಿದ್ದಾರೆ.
ಉತ್ತರಾಖಂಡದ ಹಿಮಾಲಯ ಪರ್ವತಗಳ ತಪ್ಪಲಲ್ಲಿ ಇರುವ ಪುಟ್ಟ ಹಳ್ಳಿಯೊಂದರ ವೃದ್ದ ದಂಪತಿಯ ಬದುಕಿನ ಸುತ್ತ ಚಿತ್ರವು ಸಾಗುತ್ತದೆ. ಮಕ್ಕಳಿಗಾಗಿ ಕಾಯುತ್ತಾ, ತಮ್ಮ ಕೊನೆಯ ದಿನಗಳಲ್ಲಿ ಪರಸ್ಪರ ಆಸರೆಯಾಗಿ ಬದುಕುವ ಇಬ್ಬರು ಹಿರಿಯ ಜೀವಿಗಳ ಪ್ರೀತಿ, ನೆನಪುಗಳು ಮತ್ತು ಭಾವನೆಗಳನ್ನು ಸಹಜವಾಗಿ ತೋರಿಸಲಾಗಿದೆ.
80 ವರ್ಷದ ಪದಮ್ ಸಿಂಗ್ ಮತ್ತು 70 ವರ್ಷದ ಹೀರಾದೇವಿ ಅಭಿನಯಿಸಿರುವುದು ವಿಶೇಷ. ಆಸ್ಕರ್ ಪ್ರಶಸ್ತಿ ವಿಜೇತ ಮೈಕೆಲ್ ಡನ್ನಾ ಮತ್ತು ಸಾರ್ ಸಿಂಘಾಲ್ ಸಂಗೀತ, ಗುಲ್ಜಾರ್ ಸಾಹಿತ್ಯದಲ್ಲಿ ಶುತಿ ಸದೋಲಿಕರ್ ಗಾಯನ ಚಿತ್ರಕ್ಕಿದೆ. ಅಂದ ಹಾಗೆ ಸಿನಿಮಾವು ಇದೇ ೩೦ರಂದು ಕನ್ನಡ, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.

