‘ಮೇಕ್ ಇನ್ ಇಂಡಿಯಾ’ Make in India ಬದ್ಧತೆಗೆ ದಶಕದ ಸಂಭ್ರಮ; ರಫ್ತು ವಹಿವಾಟು ಬಲಪಡಿಸಲು ಒತ್ತು

ಚೆನ್ನೈ, ಅ. 26: ಜಪಾನ್ (Japan) ಮೂಲದ ಇಸುಜು (Isuzu Motors) ಮೋಟಾರ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಇಸುಜು ಮೋಟಾರ್ಸ್ ಇಂಡಿಯಾ, ಆಂಧ್ರಪ್ರದೇಶದ ಶ್ರೀ ಸಿಟಿಯಲ್ಲಿರುವ (SriCity) ತನ್ನ ಉತ್ಪಾದನಾ ಘಟಕದಲ್ಲಿ ವಾಹನ ತಯಾರಿಕೆಯ ಹತ್ತು ವರ್ಷಗಳನ್ನು ಪೂರೈಸಿದೆ. 2016ರ ಏಪ್ರಿಲ್‌ನಲ್ಲಿ ಆರಂಭಗೊಂಡ ಈ ಘಟಕವು ದೇಶೀಯ ಮಾರುಕಟ್ಟೆಯ ಜತೆಗೆ ಮಧ್ಯಪ್ರಾಚ್ಯ ಮತ್ತು ಏಷ್ಯಾದ ವಿವಿಧ ದೇಶಗಳಿಗೆ ವಾಹನ (Vehicles) ಹಾಗೂ ಎಂಜಿನ್‌ಗಳನ್ನು (Engines) ರಫ್ತು (Export) ಮಾಡುವ ಪ್ರಮುಖ ಕೇಂದ್ರವಾಗಿ ಬೆಳೆದಿದೆ.

‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಭಾರತೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸಿರುವ ಕಂಪನಿಯು, ಜಪಾನ್‌ನ ‘ಮೊನೊಜುಕುರಿ’ ಉತ್ಪಾದನಾ ತತ್ವದ ಆಧಾರದಲ್ಲಿ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ಉತ್ಕೃಷ್ಟತೆಗೆ ಆದ್ಯತೆ ನೀಡುತ್ತಿದೆ. ‘ಮೇಡ್ ಇನ್ ಇಂಡಿಯಾ, ಭಾರತಕ್ಕಾಗಿ ಮತ್ತು ವಿಶ್ವಕ್ಕಾಗಿ’ ಎಂಬ ಆಶಯದೊಂದಿಗೆ ಜಾಗತಿಕ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಪೂರೈಸುತ್ತಿದೆ.

ಈ ಮೈಲಿಗಲ್ಲಿನ ಅಂಗವಾಗಿ ನಡೆದ ಸಮಾರಂಭದಲ್ಲಿ ಇಸುಜು ಮೋಟಾರ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಸಿಇಒ ನವೋಹಿರೊ ಯಮಗುಚಿ, ಮಿತ್ಸುಬಿಷಿ ಕಾರ್ಪೊರೇಷನ್‌ನ ಮೊಬಿಲಿಟಿ ಗ್ರೂಪ್ ಸಿಇಒ ಶಿಗೆರು ವಾಕಾಬಯಾಶಿ, ಆಂಧ್ರಪ್ರದೇಶ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಯುವರಾಜ್, ಶ್ರೀ ಸಿಟಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರವೀಂದ್ರ ಸನ್ನಾರೆಡ್ಡಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಕಳೆದ ದಶಕದಲ್ಲಿ ಕಂಪನಿಯು ಸಾಧಿಸಿರುವ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನವೋಹಿರೊ ಯಮಗುಚಿ, 2022ರ ಹಣಕಾಸು ವರ್ಷದಿಂದ ಇಸುಜು ಮೋಟಾರ್ಸ್ ಇಂಡಿಯಾ ನಿರಂತರ ಲಾಭದಾಯಕತೆಯನ್ನು ಕಾಯ್ದುಕೊಂಡಿದ್ದು, ರಫ್ತು ವಹಿವಾಟಿನಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದರು.

“ಇಸುಜುವಿನ ಜಾಗತಿಕ ಕಾರ್ಯಾಚರಣೆಗಳಲ್ಲಿ ಭಾರತವು ಆಯಕಟ್ಟಿನ ಪ್ರಮುಖ ಮಾರುಕಟ್ಟೆಯಾಗಿದೆ. ಮುಂದಿನ ದಿನಗಳಲ್ಲಿ ದೇಶೀಯ ಮಾರುಕಟ್ಟೆಯ ಬೆಳವಣಿಗೆಯನ್ನು ತ್ವರಿತಗೊಳಿಸುವುದರ ಜತೆಗೆ ರಫ್ತು ವಹಿವಾಟನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಆದ್ಯತೆ,” ಎಂದು ತಿಳಿಸಿದರು.

ಮಿತ್ಸುಬಿಷಿ ಕಾರ್ಪೊರೇಷನ್‌ನ ಮೊಬಿಲಿಟಿ ಗ್ರೂಪ್ ಸಿಇಒ ಶಿಗೆರು ವಾಕಾಬಯಾಶಿ ಮಾತನಾಡಿ, ಭಾರತೀಯ ಗ್ರಾಹಕರ ಅಗತ್ಯಗಳನ್ನು ಅರಿತು ಅವರಿಗೆ ಸೂಕ್ತವಾದ ವಾಹನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ ಎಂದರು. ಸಾರಿಗೆ ಕ್ಷೇತ್ರದ ಮೂಲಕ ಜನರ ದೈನಂದಿನ ಜೀವನ ಮತ್ತು ಸಮಾಜಕ್ಕೆ ನೆರವಾಗುವ ಇಸುಜುವಿನ ಜಾಗತಿಕ ಬದ್ಧತೆಯನ್ನು ಭಾರತದಲ್ಲಿಯೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಇಸುಜು ಮೋಟಾರ್ಸ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮಿತ್ತಲ್ ಮಾತನಾಡಿ, ಮೊದಲ ಸ್ವದೇಶಿ ನಿರ್ಮಿತ ವಾಹನದಿಂದ ಒಂದು ಲಕ್ಷ ವಾಹನಗಳ ಉತ್ಪಾದನಾ ಮೈಲಿಗಲ್ಲು ಮತ್ತು ರಫ್ತು ವಿಸ್ತರಣೆಯವರೆಗೆ ಕಂಪನಿಯ ಪ್ರಗತಿಯಲ್ಲಿ ಉದ್ಯೋಗಿಗಳು, ಡೀಲರ್ ಪಾಲುದಾರರು ಹಾಗೂ ಗ್ರಾಹಕರ ವಿಶ್ವಾಸ ಪ್ರಮುಖ ಪಾತ್ರ ವಹಿಸಿದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಕಂಪನಿಯ ವ್ಯವಹಾರ ಮತ್ತು ಕಾರ್ಯಾಚರಣೆಗಳಲ್ಲಿ ಗಮನಾರ್ಹ ಬೆಳವಣಿಗೆ ದಾಖಲಾಗಿದ್ದು, ಕಳೆದ ವರ್ಷ ಲಾಭದಾಯಕತೆಯಲ್ಲಿ 2.5 ಪಟ್ಟು ಬೆಳವಣಿಗೆ ಕಂಡಿದೆ ಎಂದು ತಿಳಿಸಿದರು.

ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ತಕೇಶಿ ಹಿರಾನೊ ಮಾತನಾಡಿ, ಬದಲಾಗುತ್ತಿರುವ ಮಾರುಕಟ್ಟೆ ಅಗತ್ಯಗಳಿಗೆ ಅನುಗುಣವಾಗಿ ಬಲಿಷ್ಠ ಮತ್ತು ಬಹುಮುಖಿ ವಾಹನಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ, ಜಾಗತಿಕ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಲಾಗುವುದು ಎಂದರು.

ಸ್ಥಳೀಯ ಉದ್ಯೋಗ, ಕೌಶಲ ಅಭಿವೃದ್ಧಿಗೆ ಆದ್ಯತೆ

ಶ್ರೀ ಸಿಟಿ ಘಟಕದಲ್ಲಿ ಪ್ರಸ್ತುತ 1,300ಕ್ಕೂ ಹೆಚ್ಚು ನುರಿತ ಉದ್ಯೋಗಿಗಳಿದ್ದು, ಉತ್ಪಾದನಾ ವಿಭಾಗದಲ್ಲಿ ಮಹಿಳೆಯರ ಪಾಲು ಸುಮಾರು ಶೇ. 28ರಷ್ಟಿದೆ. ಒಟ್ಟು ಕಾರ್ಯಪಡೆಯ ಶೇ. 82ರಷ್ಟು ಮಂದಿ ಸ್ಥಳೀಯರಾಗಿದ್ದಾರೆ. ಉದ್ಯೋಗಿಗಳ ಕೌಶಲ ವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ತರಬೇತಿ ಕಾರ್ಯಕ್ರಮಗಳನ್ನು ಕಂಪನಿ ನಡೆಸುತ್ತಿದೆ.

ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ನೆರವಾಗುವ ಉದ್ದೇಶದಿಂದ ‘ಕಟ್-ಸೆಕ್ಷನ್ ಎಂಜಿನ್‌’ಗಳನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಉತ್ಪಾದನಾ ಕಾರ್ಯಾಚರಣೆಗಳಲ್ಲಿ ಸುಸ್ಥಿರತೆ, ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಒಂದು ದಶಕದ ಪ್ರಮುಖ ಮೈಲಿಗಲ್ಲುಗಳು

– 2016: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಶ್ರೀ ಸಿಟಿ ಘಟಕವನ್ನು ಉದ್ಘಾಟಿಸಿದರು. ಭಾರತದ ಮೊದಲ ಅಡ್ವೆಂಚರ್ ಯುಟಿಲಿಟಿ ವಾಹನವೆಂದು ಕಂಪನಿ ಬಣ್ಣಿಸಿರುವ ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಅನ್ನು ಪರಿಚಯಿಸಲಾಯಿತು.
– 2017: ಮೊದಲ ಸ್ವದೇಶಿ ನಿರ್ಮಿತ ವಾಹನಗಳನ್ನು ನೆರೆಯ ದೇಶಗಳಿಗೆ ರಫ್ತು ಮಾಡಲಾಯಿತು. ಭಾರತದಲ್ಲಿ ಮು-ಎಕ್ಸ್ ಪ್ರೀಮಿಯಂ ಎಸ್‌ಯುವಿಯನ್ನು ಪರಿಚಯಿಸಲಾಯಿತು.
– 2019: ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ರಾಷ್ಟ್ರಗಳಿಗೆ ರಫ್ತು ಆರಂಭಿಸಲಾಯಿತು.
– 2019–20: ಹೊಸ ಪ್ರೆಸ್ ಶಾಪ್ ಮತ್ತು ಎಂಜಿನ್ ಜೋಡಣೆ ಘಟಕದೊಂದಿಗೆ ಎರಡನೇ ಹಂತದ ಕಾರ್ಯಾಚರಣೆ ಆರಂಭವಾಯಿತು.
– 2024: ಒಂದು ಲಕ್ಷನೇ ಸ್ವದೇಶಿ ನಿರ್ಮಿತ ವಾಹನವನ್ನು ಉತ್ಪಾದಿಸಲಾಯಿತು.
– 2024–25: ಒಟ್ಟು 20,312 ವಾಹನಗಳನ್ನು ರಫ್ತು ಮಾಡಲಾಗಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 24ರಷ್ಟು ಹೆಚ್ಚಳ ದಾಖಲಿಸಲಾಗಿದೆ. ಕಂಪನಿಯು ಒಂದು ಲಕ್ಷಕ್ಕೂ ಹೆಚ್ಚು ಸ್ವದೇಶಿ ನಿರ್ಮಿತ ಎಂಜಿನ್‌ಗಳನ್ನೂ ರಫ್ತು ಮಾಡಿದೆ.

ಭಾರತವನ್ನು ಪ್ರಮುಖ ಮಾರುಕಟ್ಟೆಯಾಗಿ ಮಾತ್ರವಲ್ಲದೆ ಜಾಗತಿಕ ಉತ್ಪಾದನಾ ಕೇಂದ್ರವಾಗಿಯೂ ಅಭಿವೃದ್ಧಿಪಡಿಸುವ ಉದ್ದೇಶವನ್ನು ಇಸುಜು ಮೋಟಾರ್ಸ್ ಇಂಡಿಯಾ ಹೊಂದಿದೆ. ಸ್ಥಳೀಯ ಉತ್ಪಾದನಾ ಸಾಮರ್ಥ್ಯ ಮತ್ತು ಜಾಗತಿಕ ಎಂಜಿನಿಯರಿಂಗ್ ಪರಿಣತಿಯನ್ನು ಸಂಯೋಜಿಸಿ, ಗ್ರಾಹಕರಿಗೆ ಗುಣಮಟ್ಟದ ವಾಹನಗಳು ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಒದಗಿಸುವುದರೊಂದಿಗೆ ‘ನೆವರ್ ಸ್ಟಾಪ್’ ಬದ್ಧತೆಯನ್ನು ಮುಂದುವರಿಸುವುದಾಗಿ ಕಂಪನಿ ಹೇಳಿದೆ.

 

ರಾಹುಲ್ ಗಾಂಧಿಯವರ ಮನಸ್ಥಿತಿಯನ್ನು ಖರ್ಗೆಯವರು ಬಿಚ್ಚಿಟ್ಟ ಹಾಗಿದೆ : ಬಿ.ವೈ.ವಿಜಯೇಂದ್ರ

Hot this week

’ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026′

ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ; ನಾಮನಿರ್ದೇಶನ ಸಲ್ಲಿಸಲು ನವೆಂಬರ್ 20 ಕೊನೆಯ...

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ (Kannada Sahitya Academy) ಮಾಜಿ ಸದಸ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

Topics

’ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಪಾಂಚಜನ್ಯ ಗುರುಶ್ರೇಷ್ಠ ಪುರಸ್ಕಾರ–2026′

ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ; ನಾಮನಿರ್ದೇಶನ ಸಲ್ಲಿಸಲು ನವೆಂಬರ್ 20 ಕೊನೆಯ...

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ (Kannada Sahitya Academy) ಮಾಜಿ ಸದಸ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

ಇ-20 ಎಥನಾಲ್ ಪ್ರಮಾಣ ಪರೀಕ್ಷೆ – ಕರ್ನಾಟಕ ಸರ್ಕಾರವು ಗ್ರಾಹಕರ ಹಿತರಕ್ಷಣೆಗೆ ಬದ್ಧ : ಸಚಿವ ರಿಜ್ವಾನ್ ಅರ್ಷದ್ 

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣಕ್ಕೆ (E20) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರೀಕ್ಷಾ...

ಬೆಂಗಳೂರು: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ...

Related Articles