ವಿಶ್ವ ಪೋಲಿಯೋ ದಿನ: ಪೋಲಿಯೋ ಮುಕ್ತ ಜಗತ್ತಿನ ಸಂಕಲ್ಪ

ಬೆಂಗಳೂರು: ವಿಶ್ವ ಪೋಲಿಯೋ ದಿನದ(World Polio Day) ಅಂಗವಾಗಿ ಪೋಲಿಯೋ ರೋಗದ ಸಂಪೂರ್ಣ ನಿರ್ಮೂಲನೆ ಹಾಗೂ ಮಕ್ಕಳಿಗೆ ಲಸಿಕೆ ಹಾಕಿಸುವ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರೋಟರಿ ಜಿಲ್ಲೆ 3191 ವತಿಯಿಂದ ಬೆಂಗಳೂರಿನಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಪೋಲಿಯೋ ಮುಕ್ತ ಜಗತ್ತಿನ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಅಭಿಯಾನದಲ್ಲಿ ಬೈಕ್ ರ‍್ಯಾಲಿ, ಪಾದಯಾತ್ರೆ, ಸೈಕಲ್ ಜಾಥಾ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಬೆಂಗಳೂರಿನ ಟೌನ್‌ಹಾಲ್‌ನಿಂದ ರಾಮನಗರದವರೆಗೆ 40 ಬೈಕ್ ಸವಾರರು “ಪೋಲಿಯೋ ನಿರ್ಮೂಲನೆ ಈಗಲೇ” ಎಂಬ ಸಂದೇಶದೊಂದಿಗೆ ಜಾಗೃತಿ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದರು. ಟೌನ್‌ಹಾಲ್‌ನಿಂದ ಲಾಲ್‌ಬಾಗ್‌ವರೆಗೆ ನಡೆದ ಪಾದಯಾತ್ರೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ರೋಟರಿ ಸದಸ್ಯರು ಸೇರಿದಂತೆ ಸುಮಾರು 600 ಮಂದಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ 50 ಸೈಕಲ್ ಸವಾರರು ಸೈಕಲ್ ಜಾಥಾದ ಮೂಲಕ ಪೋಲಿಯೋ ನಿರ್ಮೂಲನೆಯ ಸಂದೇಶವನ್ನು ಸಾರಿದರು.

ರೋಟರಿ ಜಿಲ್ಲಾ ಪೋಲಿಯೋಪ್ಲಸ್ ಸಮಿತಿ ಅಧ್ಯಕ್ಷ ಅರವಿಂದ್ ನಾಯ್ಡು ಮಾತನಾಡಿ, “ಪೋಲಿಯೋ ಸಂಪೂರ್ಣವಾಗಿ ನಿರ್ಮೂಲನೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಪೋಲಿಯೋವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ರೋಟರಿ ಬದ್ಧವಾಗಿದೆ” ಎಂದು ತಿಳಿಸಿದರು.

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ರೋಟರಿ ಇಂಟರ್‌ನ್ಯಾಷನಲ್ ಮತ್ತು ಅದರ ಜಾಗತಿಕ ಪಾಲುದಾರ ಸಂಸ್ಥೆಗಳು ಪೋಲಿಯೋ ನಿರ್ಮೂಲನೆಗಾಗಿ ನಿರಂತರವಾಗಿ ಶ್ರಮಿಸುತ್ತಿವೆ. ಈ ಪ್ರಯತ್ನಗಳ ಫಲವಾಗಿ ಜಾಗತಿಕವಾಗಿ ಪೋಲಿಯೋ ಪ್ರಕರಣಗಳು ಶೇ. 99.9ರಷ್ಟು ಕಡಿಮೆಯಾಗಿವೆ. ಪ್ರಸ್ತುತ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕಾಡು ಪೋಲಿಯೋ ವೈರಸ್ ಸಕ್ರಿಯವಾಗಿದ್ದು, ಜಗತ್ತನ್ನು ಸಂಪೂರ್ಣವಾಗಿ ಪೋಲಿಯೋ ಮುಕ್ತಗೊಳಿಸುವ ಗುರಿಯೊಂದಿಗೆ ಅಭಿಯಾನ ಮುಂದುವರಿದಿದೆ.

ಪೋಲಿಯೋ ನಿರ್ಮೂಲನಾ ಕಾರ್ಯಕ್ರಮಗಳಿಗಾಗಿ ರೋಟರಿ ಇಂಟರ್‌ನ್ಯಾಷನಲ್ ಇದುವರೆಗೆ 260 ಕೋಟಿ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಿನ ಮೊತ್ತವನ್ನು ಕೊಡುಗೆಯಾಗಿ ನೀಡಿದೆ. ಈ ಪ್ರಯತ್ನಗಳ ಮೂಲಕ 122 ದೇಶಗಳಲ್ಲಿ 300 ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲು ನೆರವಾಗಿದೆ.

ಕೋಲಾರ, ರಾಮನಗರ, ತಿರುಪತಿ, ಶ್ರೀಕಾಳಹಸ್ತಿ, ಕೆಜಿಎಫ್, ಮುಳಬಾಗಿಲು, ಮಾಗಡಿ, ಚನ್ನಪಟ್ಟಣ, ಚಿತ್ತೂರು ಮತ್ತು ಬಂಗಾರಪೇಟೆ ಸೇರಿದಂತೆ ವಿವಿಧ ಪ್ರದೇಶಗಳ 39 ಶಾಲೆಗಳ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪೋಲಿಯೋ ಕುರಿತು ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಬಾಯಿಮೂಲಕ ನೀಡುವ ಪೋಲಿಯೋ ಲಸಿಕೆಯ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬ ಮಗುವಿಗೂ ಲಸಿಕೆ ದೊರೆಯುವಂತೆ ನೋಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಲಾಯಿತು.

ಪೋಲಿಯೋ ನಿರ್ಮೂಲನೆಗೆ ಜನಸಾಮಾನ್ಯರ ಸಹಕಾರ ಅತ್ಯಗತ್ಯವಾಗಿದ್ದು, ಪ್ರತಿಯೊಂದು ಮಗುವಿಗೂ ಲಸಿಕೆ ಹಾಕಿಸುವ ಮೂಲಕ ಮುಂದಿನ ಪೀಳಿಗೆಯನ್ನು ಪೋಲಿಯೋದಿಂದ ರಕ್ಷಿಸಬಹುದು. ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆ 3191 ತನ್ನ ಜಾಗೃತಿ ಅಭಿಯಾನಗಳ ಮೂಲಕ ಪೋಲಿಯೋ ಮುಕ್ತ ಜಗತ್ತಿನ ಗುರಿ ಸಾಧಿಸಲು ಬದ್ಧವಾಗಿದೆ.

 

Hot this week

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

Topics

ಬೆಂಗಳೂರಿನಲ್ಲಿ ೧೫ ರಂದು `ಜೋಳರಾಜನ ಕಥೆ’ ಕೃತಿ ಜನಾರ್ಪಣೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ...

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಅಂತ್ಯಗೊಳಿಸದೆ ದಾಖಲೆಯ 88 ದಿನಗಳ...

ಬೆಂಗಳೂರು: ಕರ್ನಾಟಕ ಸರ್ಕಾರವು(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ  ನವೆಂಬರ್...

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಕೃಷಿ ನಾವಿನ್ಯತೆಗಳು ಹಾಗೂ ಬರ...

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಭಾರತದ ಪ್ರಥಮ ಶಿಕ್ಷಣ ಸಚಿವರಾದ...

ಇ-20 ಎಥನಾಲ್ ಪ್ರಮಾಣ ಪರೀಕ್ಷೆ – ಕರ್ನಾಟಕ ಸರ್ಕಾರವು ಗ್ರಾಹಕರ ಹಿತರಕ್ಷಣೆಗೆ ಬದ್ಧ : ಸಚಿವ ರಿಜ್ವಾನ್ ಅರ್ಷದ್ 

ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣಕ್ಕೆ (E20) ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಪರೀಕ್ಷಾ...

ಬೆಂಗಳೂರು: ಭಾರತದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದೀಯರ ಭಾರತ...

ನ್ಯೂಜಿಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮೇಲೆ ಟೀಂ ಇಂಡಿಯಾ ಕಣ್ಣು: ಹ್ಯಾಮಿಲ್ಟನ್ ಪಂದ್ಯಕ್ಕೆ ಮಳೆ ಭೀತಿ!

ಹ್ಯಾಮಿಲ್ಟನ್: ನ್ಯೂಜಿಲೆಂಡ್(New Zealand) ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ(Cricket Team) ಇದೀಗ...

Related Articles