ಬೆಂಗಳೂರು: ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ (UVCE), ಕೆ.ಆರ್. ವೃತ್ತ, ಬೆಂಗಳೂರು ಇಲ್ಲಿನ 2026-27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬಿ.ಟೆಕ್ / ಎಂ.ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ (Mathematics) ಬೋಧಿಸಲು ಅರ್ಹ ಅಭ್ಯರ್ಥಿಗಳಿಂದ ಅತಿಥಿ ಉಪನ್ಯಾಸಕರ (Guest Lecturer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ ಹಾಗೂ ನಿಬಂಧನೆಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು AICTE / UGC ನಿಯಮಗಳಿಗನುಸಾರವಾಗಿ Ph.D ಅಥವಾ PG ಪದವಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ www.uvce.karnataka.gov.in ನಿಂದ ನಿಗದಿತ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಭರ್ತಿ ಮಾಡಿದ ಅರ್ಜಿಗಳನ್ನು 2026ನೇ ಅಕ್ಟೋಬರ್ 21 ಅಥವಾ ಅದಕ್ಕೂ ಮುಂಚಿತವಾಗಿ ‘ಕುಲಸಚಿವರ ಕಛೇರಿ, ಯು.ವಿ.ಸಿ.ಇ, ಕೆ.ಆರ್. ವೃತ್ತ, ಬೆಂಗಳೂರು’ ಇಲ್ಲಿಗೆ ಸಲ್ಲಿಸತಕ್ಕದ್ದು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಂದರ್ಶನದ ಮಾಹಿತಿ:
ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ ಅಥವಾ ನೇರವಾಗಿ ತಿಳಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕುಲಸಚಿವರು (ಯು.ವಿ.ಸಿ.ಇ) ಅಥವಾ ಪ್ರಭಾರ ಪ್ರಾಧ್ಯಾಪಕರು (ಇಂಜಿನಿಯರಿಂಗೇತರ ಕೋರ್ಸ್ಗಳು) ಅವರನ್ನು ಸಂಪರ್ಕಿಸಬಹುದು.
