ಬೆಂಗಳೂರು: ಡಾ. ಮನ್‌ಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ‘ಎಂಟ್ರನ್ಸ್’ (Entrance) ಮತ್ತು ‘ನಾನ್-ಎಂಟ್ರನ್ಸ್’ (Non-Entrance) ಅಭ್ಯರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶಕರನ್ನು (Guide Allotment) ಕೌನ್ಸೆಲಿಂಗ್ (Counselling) ಮೂಲಕ ಹಂಚಿಕೆ ಮಾಡಲು ನಿರ್ಧರಿಸಿದೆ.
ಈ ಪ್ರಕ್ರಿಯೆಯು 2026 ನೇ ಅಕ್ಟೋಬರ್ 14 ರಿಂದ 16 ರವರೆಗೆ, ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಡಾ. ಮನ್‌ಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಜ್ಞಾನ ಜ್ಯೋತಿ ಸೆಂಟ್ರಲ್ ಕಾಲೇಜು ಕ್ಯಾಂಪಸ್, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು – 560001 ಇಲ್ಲಿ ನಡೆಯಲಿದೆ.ಅರ್ಹತೆ ಪಡೆದಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೌನ್ಸೆಲಿಂಗ್ ಪ್ರಕ್ರಿಯೆಗೆ ಹಾಜರಾಗುವುದು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ www.bcu.ac.in ಅನ್ನು ವೀಕ್ಷಿಸಬಹುದು ಹಾಗೂ ಈ ಕುರಿತು ವಿದ್ಯಾರ್ಥಿಗಳು, ಪೋಷಕರು, ಕಾಲೇಜು ಪ್ರಾಂಶುಪಾಲರು ಹಾಗೂ ಸಾರ್ವಜನಿಕರು ಗಮನಹರಿಸಲು ವಿಶ್ವವಿದ್ಯಾನಿಲಯದ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯು.ವಿ.ಸಿ.ಇ ಯಲ್ಲಿ ಗಣಿತಶಾಸ್ತ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

