ಕುಮಾರಿ ಪೂಜೆ ಏಕೆ ಮತ್ತು ಹೇಗೆ ಮಾಡಬೇಕು ? 

ಕುಮಾರಿ ಪೂಜೆ ಏಕೆ ಮತ್ತು ಹೇಗೆ ಮಾಡಬೇಕು ? 

`12 ವರ್ಷದ ಅವಿವಾಹಿತ(Unmarried) ಕನ್ಯೆಗೆ ಕುಮಾರಿ ಎನ್ನುತ್ತಾರೆ. ಅವಳ ಸ್ಮೃತ್ಯುಕ್ತ ಲಕ್ಷಣಗಳು ಹೀಗಿವೆ :

ಅಷ್ಟವರ್ಷಾ ಭವೇದ್ ಗೌರಿ ದಷವರ್ಷಾ ಚ ಕನ್ಯಕಾ |
ಸಂಪ್ರಾಪ್ತೇ ದ್ವಾದಶೇ ವರ್ಷೇ ಕುಮಾರೀತ್ಯಭಿದೀ ಯತೇ ||

ಅರ್ಥ : ಹುಡುಗಿಗೆ 8ನೇ ವರ್ಷದಲ್ಲಿ ‘ಗೌರಿ’, 10ನೇ ವರ್ಷದಲ್ಲಿ ‘ಕನ್ಯಾ’ ಮತ್ತು 12ನೇ ವರ್ಷವು ಪ್ರಾರಂಭವಾದಾಗ ‘ಕುಮಾರಿ’ ಎನ್ನುತ್ತಾರೆ.

ಪ್ರಾಚೀನ ಕಾಲದಲ್ಲಿ ಕೆಲವು ಸ್ತ್ರೀಯರು ಆಜನ್ಮ ಅವಿವಾಹಿತರಾಗಿರುತ್ತಿದ್ದರು. ಅವರ ಪ್ರೌಢ ಅಥವಾ ವೃದ್ಧ ವಯಸ್ಸಿನಲ್ಲಿಯೂ ಅವರನ್ನು ಕುಮಾರಿ ಎಂದೇ ಕರೆಯುತ್ತಿದ್ದರು; ಇದು ಅಷ್ಟಾಧ್ಯಾಯಿಯಿಂದ ತಿಳಿಯುತ್ತದೆ, ಉದಾ. ವೃದ್ಧ ಕುಮಾರಿ, ಜರತ್ಕುಮಾರಿ. (ಅಷ್ಟಾಧ್ಯಾಯಿ, 6.2.95)

ಮುತ್ತೈದೆಯರು ದೇವಿಯ ಪ್ರಕಟ ಶಕ್ತಿಯ ಪ್ರತೀಕವಾಗಿದ್ದು ಕುಮಾರಿಯರು ದೇವಿಯ ಅಪ್ರಕಟ ಶಕ್ತಿಯ ಪ್ರತೀಕವಾಗಿದ್ದಾರೆ. ಪ್ರಕಟ ಶಕ್ತಿಯಲ್ಲಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಅಪವ್ಯಯವಾಗುವುದರಿಂದ ಮುತ್ತೈದೆಯರ ಬದಲು ಕುಮಾರಿಯರಲ್ಲಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ನವರಾತ್ರಿಯಲ್ಲಿ ಒಂಬತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಬತ್ತನೇ ದಿನ ಒಂಬತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ. ‘ಅವಳು ನಿರ್ದೋಷ, ನಿರೋಗಿ ಮತ್ತು ಅವ್ಯಂಗಳಾಗಿರಬೇಕು’ ಎಂದೂ ಹೇಳಲಾಗಿದೆ. ದೇವೀಪೂಜೆಯಾದ ನಂತರ ಕುಮಾರಿಯ ಪೂಜೆಯನ್ನು ಮಾಡುತ್ತಾರೆ. ಮೊದಲು ಮುಂದಿನ ಮಂತ್ರದಿಂದ ಅವಳ ಆವಾಹನೆಯನ್ನು ಮಾಡುತ್ತಾರೆ.

ಮಂತ್ರಾಕ್ಷರಮಯೀಂ ಲಕ್ಷ್ಮೀಂ ಮಾತೃಣಾಂ ರೂಪ ಧಾರಿಣೀಮ್|
ನವದುರ್ಗಾತ್ಮಿಕಾಂ ಸಾಕ್ಷಾತ್ ಕನ್ಯಾಮಾವಾಹ ಯಾಮ್ಯಹಮ್||

ಅರ್ಥ :
ಮಂತ್ರಾಕ್ಷರಮಯ, ಲಕ್ಷ್ಮೀ ಸ್ವರೂಪ, ಮಾತೃಕೆಗಳ ರೂಪವನ್ನು ಧರಿಸುವ ಹಾಗೂ ಸಾಕ್ಷಾತ್ ನವ ದುರ್ಗಾತ್ಮಿಕೆಯಾಗಿರುವಂತಹ ಕನ್ಯೆಯನ್ನು ನಾನು ಆವಾಹನೆ ಮಾಡುತ್ತೇನೆ.

ಮೊದಲು ಕುಮಾರಿಯ ಕಾಲುಗಳನ್ನು ತೊಳೆಯುತ್ತಾರೆ, ಅವಳನ್ನು ಸುಶೋಭಿತ ಎತ್ತರವಾದ ಮರದ ಮಣೆಯ ಮೇಲೆ ಕೂರಿಸುತ್ತಾರೆ, ಗಂಧ, ಪುಷ್ಪ, ಲಂಗ-ರವಿಕೆ ಕೊಡುತ್ತಾರೆ ಮತ್ತು ಅವಳ ಕೊರಳಿನಲ್ಲಿ ಹೂಮಾಲೆಯನ್ನು ಹಾಕುತ್ತಾರೆ. ಅವಳಿಗೆ ಪಂಚಾಮೃತ ಮತ್ತು ಮೃಷ್ಠಾನ್ನವನ್ನು ಸಮರ್ಪಿಸುತ್ತಾರೆ. ನಂತರ ಅವಳಿಗೆ ನಮಸ್ಕಾರ ಮಾಡುತ್ತಾರೆ.’ ಶಾಕ್ತ ತಂತ್ರದಲ್ಲಿ ಕುಮಾರಿಪೂಜೆಗೆ ವಿಶೇಷ ಮಹತ್ವವಿದೆ.

ಡಾ. ಮನ್‌ಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ: ಅ.14 ರಿಂದ  ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ  

Hot this week

ನಿತ್ಯ ಪಂಚಾಂಗ 13.10.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 13.10.2026 TUESDAY.ಮಂಗಳವಾರ ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA: DAKSHINAYANA. ಋತು:...

ಪ್ರತಿಪಕ್ಷಗಳ ನಿಯೋಗ ಭೇಟಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನಿರಾಕರಣೆ: ಅಧಿಕಾರಗಳ ಪ್ರತ್ಯೇಕತೆಯ...

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ರಾಹುಲ್ ಗಾಂಧಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌...

ಚೆನ್ನೈನಲ್ಲಿ ₹13,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಚೆನ್ನೈನಲ್ಲಿ ₹13,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಬಂದರು...

ಭಾರತದ ವಿದೇಶಿ ವಿನಿಮಯ ಮೀಸಲು $18.3 ಶತಕೋಟಿ ಕುಸಿತ: ₹757.46 ಶತಕೋಟಿ...

Topics

ನಿತ್ಯ ಪಂಚಾಂಗ 13.10.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 13.10.2026 TUESDAY.ಮಂಗಳವಾರ ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ದಕ್ಷಿಣಾಯನ AYANA: DAKSHINAYANA. ಋತು:...

ಪ್ರತಿಪಕ್ಷಗಳ ನಿಯೋಗ ಭೇಟಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನಿರಾಕರಣೆ: ಅಧಿಕಾರಗಳ ಪ್ರತ್ಯೇಕತೆಯ...

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ರಾಹುಲ್ ಗಾಂಧಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌...

ಚೆನ್ನೈನಲ್ಲಿ ₹13,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಚೆನ್ನೈನಲ್ಲಿ ₹13,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಬಂದರು...

ಭಾರತದ ವಿದೇಶಿ ವಿನಿಮಯ ಮೀಸಲು $18.3 ಶತಕೋಟಿ ಕುಸಿತ: ₹757.46 ಶತಕೋಟಿ...

ಕೆಎಸ್‍ಆರ್‍ಟಿಸಿಯಿಂದ ಬೆಂಗಳೂರು-ಮೈಸೂರು ಮಾರ್ಗದ ಪ್ಯಾಕೇಜ್ ಟೂರ್

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ...

ವಿಧಾನಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಚಾಲನೆ

ಬೆಂಗಳೂರು: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ(Kittur Raani Chennamma) ಅವರ ಶೌರ್ಯ,...

ಬೆಂಗಳೂರಿನಲ್ಲಿ ‘ಫಿಬಾ WBL ಏಷ್ಯಾ 2026’ ಕ್ರೀಡಾ ಸಂಭ್ರಮ

ಬೆಂಗಳೂರಿನಲ್ಲಿ 'ಫಿಬಾ WBL ಏಷ್ಯಾ 2026' ಕ್ರೀಡಾ ಸಂಭ್ರಮ - ಏಷ್ಯಾದ...

Related Articles