KPTCLನಿಂದ ಮತ್ತೊಂದು ಮೈಲಿಗಲ್ಲು: 12 ಕಿ.ಮೀ. 220 ಕೆವಿ ಮಲ್ಟಿ ಸರ್ಕ್ಯೂಟ್ ಪ್ರಸರಣ ಮಾರ್ಗ ಯಶಸ್ವಿ ಕಮಿಷನ್

ಬೆಂಗಳೂರಿನ ವಿದ್ಯುತ್ ಪ್ರಸರಣ ಜಾಲವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), 12 ಕಿ.ಮೀ. ಉದ್ದದ 220 ಕೆವಿ ಮಲ್ಟಿ ಸರ್ಕ್ಯೂಟ್ ಪ್ರಸರಣ ಮಾರ್ಗವನ್ನು ಯಶಸ್ವಿಯಾಗಿ ಕಮಿಷನ್ ಮಾಡುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಬಾಗಲೂರು ರಸ್ತೆ ಕ್ರಾಸಿಂಗ್ ಸಮೀಪದ ಕೇಬಲ್ ಟರ್ಮಿನೇಟಿಂಗ್ ಟವರ್‌ನಿಂದ ಹಾಲಿ 220 ಕೆವಿ ಹೂಡಿ–ಎಚ್‌ಬಿಆರ್ ಹಾಗೂ ಐಟಿಐ–ಮಾನ್ಯತಾ ಟೆಕ್ ಪಾರ್ಕ್ ಪ್ರಸರಣ ಮಾರ್ಗಗಳಿಗೆ ಡಬಲ್ LILO (Line-In Line-Out) ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ನಗರದ ಸವಾಲಿನ ಪರಿಸ್ಥಿತಿಗೆ ವಿಶೇಷ ತಾಂತ್ರಿಕ ಪರಿಹಾರ: 
ದಟ್ಟ ನಗರ ಪ್ರದೇಶದಲ್ಲಿ ಪ್ರಸರಣ ಮೂಲಸೌಕರ್ಯ ನಿರ್ಮಾಣ ಸಂದರ್ಭದಲ್ಲಿ ಸ್ಥಳಾವಕಾಶ, ಹಾಲಿ ವಿದ್ಯುತ್ ಜಾಲ, ರಸ್ತೆ ಹಾಗೂ ಇತರೆ ನಗರ ಮೂಲಸೌಕರ್ಯಗಳಂತಹ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ನಿರ್ದಿಷ್ಟ ಯೋಜನೆಯ ಸ್ಥಳೀಯ ಪರಿಸ್ಥಿತಿ, ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ಕಾರ್ಯಾಚರಣಾ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಎಂಜಿನಿಯರಿಂಗ್ ವಿನ್ಯಾಸವನ್ನು ಅಳವಡಿಸಲಾಗಿದೆ.
ಯೋಜನೆಯ ಭಾಗವಾಗಿ, ವಿದ್ಯಾನಗರ ಪ್ರದೇಶದಲ್ಲಿನ ಲಭ್ಯ ಪ್ರಸರಣ ಮಾರ್ಗದ ಜಾಗದ ಒಂದು ಭಾಗವನ್ನು ತಾಂತ್ರಿಕವಾಗಿ ಸೂಕ್ತ ರೀತಿಯಲ್ಲಿ ಬಳಸಿಕೊಂಡು 220 ಕೆವಿ ಮಲ್ಟಿ ಸರ್ಕ್ಯೂಟ್ ಮಾರ್ಗವನ್ನು ನಿರ್ಮಿಸಲಾಗಿದೆ. ಈ ಪರಿಹಾರವು ಈ ಯೋಜನೆಯ ನಿರ್ದಿಷ್ಟ ತಾಂತ್ರಿಕ ಮತ್ತು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗಿದೆ.
ಹಾಲಿ ವಿದ್ಯುತ್ ಮಾರ್ಗಗಳು, ರಸ್ತೆ ಸಂಚಾರ, ನಗರ ಮೂಲಸೌಕರ್ಯ ಹಾಗೂ ಸೀಮಿತ ಕಾರ್ಯಸ್ಥಳಗಳ ನಡುವೆ ಹೆಚ್ಚಿನ ಸಾಮರ್ಥ್ಯದ ಪ್ರಸರಣ ಮಾರ್ಗದ ಕಾಮಗಾರಿ ಕೈಗೊಳ್ಳುವುದು ತಾಂತ್ರಿಕ ಮತ್ತು ಕಾರ್ಯಾಚರಣೆಯ ದೃಷ್ಟಿಯಿಂದ ಸವಾಲಿನ ಕಾರ್ಯವಾಗಿತ್ತು.
ಕೆಪಿಟಿಸಿಎಲ್‌ನ ಇಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಯೋಜನಾ ತಂಡಗಳು ಸೂಕ್ಷ್ಮ ಯೋಜನೆ, ಸುರಕ್ಷತಾ ಕ್ರಮಗಳು ಹಾಗೂ ವಿವಿಧ ವಿಭಾಗಗಳ ಸಮನ್ವಯದ ಮೂಲಕ ಈ ಸವಾಲುಗಳನ್ನು ನಿಭಾಯಿಸಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.
ಹೊಸ ಪ್ರಸರಣ ವ್ಯವಸ್ಥೆಯು ಬೆಂಗಳೂರಿನ ವಿದ್ಯುತ್ ಜಾಲದ ಸಾಮರ್ಥ್ಯ ಮತ್ತು ಕಾರ್ಯಾಚರಣಾ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದರ ಜೊತೆಗೆ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಲು ಪ್ರಸರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ.
 
****
“ಬೆಂಗಳೂರು ನಗರದಲ್ಲಿ ವಿದ್ಯುತ್ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ಅದಕ್ಕೆ ಅನುಗುಣವಾಗಿ ಪ್ರಸರಣ ಮೂಲಸೌಕರ್ಯವನ್ನೂ ಬಲಪಡಿಸಲಾಗುತ್ತಿದೆ. ನಗರ ಪ್ರದೇಶದಲ್ಲಿನ ಪ್ರತಿಯೊಂದು ಪ್ರಸರಣ ಯೋಜನೆಗೂ ಅದರ ಸ್ಥಳೀಯ ಪರಿಸ್ಥಿತಿ, ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ಭವಿಷ್ಯದ ಅಗತ್ಯಗಳನ್ನು ಪರಿಗಣಿಸಿ ಸೂಕ್ತ ಪರಿಹಾರ ರೂಪಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಎದುರಾದ ಸವಾಲುಗಳಿಗೆ ಕೆಪಿಟಿಸಿಎಲ್ ತಾಂತ್ರಿಕವಾಗಿ ಸೂಕ್ತ ಪರಿಹಾರ ಕಂಡುಕೊಂಡು ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಶ್ಲಾಘನೀಯ,” 
– ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ.ಜೆ. ಜಾರ್ಜ್
“ಈ ಯೋಜನೆಯ ಸ್ಥಳೀಯ ಪರಿಸ್ಥಿತಿ ಹಾಗೂ ತಾಂತ್ರಿಕ ಅಗತ್ಯಗಳು ವಿಶಿಷ್ಟವಾಗಿದ್ದವು. ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ತಾಂತ್ರಿಕವಾಗಿ ಕಾರ್ಯಸಾಧ್ಯವಾದ ವಿನ್ಯಾಸ ಮತ್ತು ಅನುಷ್ಠಾನ ವಿಧಾನವನ್ನು ಆಯ್ಕೆ ಮಾಡಲಾಗಿದೆ. ಹಾಲಿ ವಿದ್ಯುತ್ ಜಾಲ ಮತ್ತು ನಗರ ಮೂಲಸೌಕರ್ಯದ ನಡುವೆ 12 ಕಿ.ಮೀ. ಉದ್ದದ 220 ಕೆವಿ ಮಲ್ಟಿ ಸರ್ಕ್ಯೂಟ್ ಮಾರ್ಗವನ್ನು ಯಶಸ್ವಿಯಾಗಿ ಕಮಿಷನ್ ಮಾಡಿರುವುದು ನಮ್ಮ ಇಂಜಿನಿಯರ್‌ಗಳು ಮತ್ತು ಸಿಬ್ಬಂದಿಯ ತಾಂತ್ರಿಕ ಸಾಮರ್ಥ್ಯ ಹಾಗೂ ಸಮನ್ವಯದ ಫಲವಾಗಿದೆ,” 
– ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಐಎಎಸ್
“ಕೆಪಿಟಿಸಿಎಲ್‌ನ ಪ್ರತಿಯೊಂದು ಪ್ರಸರಣ ಯೋಜನೆಯನ್ನೂ ಅದರ ವಿದ್ಯುತ್ ಬೇಡಿಕೆ, ಗ್ರಿಡ್ ಅಗತ್ಯ, ತಾಂತ್ರಿಕ ಕಾರ್ಯಸಾಧ್ಯತೆ, ಸುರಕ್ಷತೆ, ರೈಟ್ ಆಫ್ ವೇ ಹಾಗೂ ದೀರ್ಘಕಾಲೀನ ವ್ಯವಸ್ಥಾ ಅಗತ್ಯಗಳನ್ನು ಆಧರಿಸಿ ಪ್ರತ್ಯೇಕವಾಗಿ ರೂಪಿಸಲಾಗುತ್ತದೆ ಎಂದರು.

Hot this week

ಪ್ರೀತಿಯ ಮೂಲಕ ನಡೆಯುತ್ತಿದೆ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ

ಬಹಳಷ್ಟು ಪ್ರಕರಣಗಳಲ್ಲಿ ಹೆಚ್ಚು ಸಂಭಾವನೆ ಇರುವ ಕೆಲಸವನ್ನು ಕೊಡಿಸುವುದಾಗಿ ಹೇಳಿ ನಂಬಿಸಿ,...

ಕಾಂಗ್ರೆಸ್ ಸ್ಟೇಷನ್ ಆದ ಪೊಲೀಸ್ ಠಾಣೆಗಳು- ಆರ್.ಅಶೋಕ್

ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್ ಗಳೆಲ್ಲಾ ಕಾಂಗ್ರೆಸ್ ಸ್ಟೇಷನ್(Congress Station) ಆಗಿದೆ...

ಪ್ರಧಾನಿ ಮೋದಿ ಅವರ ವಿಶಿಷ್ಟ ನಾಯಕತ್ವಕ್ಕೆ ಕೇಂದ್ರ ಸಚಿವ ಸಂಪುಟ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿಶಿಷ್ಟ ನಾಯಕತ್ವವನ್ನು ಶ್ಲಾಘಿಸಿ...

“ಚುನಾವಣಾ ಆಯುಕ್ತರು ನಮ್ಮನ್ನು ಭೇಟಿಯಾಗಲೇಬೇಕು” – ರಾಹುಲ್ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತ್ತೆ...

ನೈಜೀರಿಯಾ ವಾಯುಪಡೆ ವಿಮಾನ ಪತನ: 32 ಸಾವು – ರಾಷ್ಟ್ರೀಯ ಶೋಕಾಚರಣೆ

ನೈಜೀರಿಯಾದಲ್ಲಿ ನೈಜೀರಿಯಾ ವಾಯುಪಡೆಯ (NAF) ATR-42 ವಿಮಾನ ಪತನಗೊಂಡ ಪರಿಣಾಮ 32...

Topics

ಪ್ರೀತಿಯ ಮೂಲಕ ನಡೆಯುತ್ತಿದೆ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ

ಬಹಳಷ್ಟು ಪ್ರಕರಣಗಳಲ್ಲಿ ಹೆಚ್ಚು ಸಂಭಾವನೆ ಇರುವ ಕೆಲಸವನ್ನು ಕೊಡಿಸುವುದಾಗಿ ಹೇಳಿ ನಂಬಿಸಿ,...

ಕಾಂಗ್ರೆಸ್ ಸ್ಟೇಷನ್ ಆದ ಪೊಲೀಸ್ ಠಾಣೆಗಳು- ಆರ್.ಅಶೋಕ್

ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್ ಗಳೆಲ್ಲಾ ಕಾಂಗ್ರೆಸ್ ಸ್ಟೇಷನ್(Congress Station) ಆಗಿದೆ...

ಪ್ರಧಾನಿ ಮೋದಿ ಅವರ ವಿಶಿಷ್ಟ ನಾಯಕತ್ವಕ್ಕೆ ಕೇಂದ್ರ ಸಚಿವ ಸಂಪುಟ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿಶಿಷ್ಟ ನಾಯಕತ್ವವನ್ನು ಶ್ಲಾಘಿಸಿ...

“ಚುನಾವಣಾ ಆಯುಕ್ತರು ನಮ್ಮನ್ನು ಭೇಟಿಯಾಗಲೇಬೇಕು” – ರಾಹುಲ್ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತ್ತೆ...

ನೈಜೀರಿಯಾ ವಾಯುಪಡೆ ವಿಮಾನ ಪತನ: 32 ಸಾವು – ರಾಷ್ಟ್ರೀಯ ಶೋಕಾಚರಣೆ

ನೈಜೀರಿಯಾದಲ್ಲಿ ನೈಜೀರಿಯಾ ವಾಯುಪಡೆಯ (NAF) ATR-42 ವಿಮಾನ ಪತನಗೊಂಡ ಪರಿಣಾಮ 32...

ಏರೋ ಇಂಡಿಯಾ 2027: ಫೆ. 8ರಿಂದ ವೈಮಾನಿಕ ಪ್ರದರ್ಶನ; ನೋಂದಣಿ ಪ್ರಕ್ರಿಯೆ ಆರಂಭ

ಭಾರತದ ಪ್ರಮುಖ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾ 2027ರ...

ಭವಿಷ್ಯ ರೂಪಿಸುವ ಶಕ್ತಿ ಯುವಜನರ ಕೈಯಲ್ಲಿದೆ: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬೆಂಗಳೂರು : ದೇಶದ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಯುವಜನತೆಯ ಮೇಲಿದೆ....

ಮೈಸೂರು:ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಅ.10ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಮೈಸೂರು: ವಿಜಯನಗರ (Mysore Vijayanagar) ಮೊದಲನೇ...

Related Articles