ಪ್ರೀತಿಯ ಮೂಲಕ ನಡೆಯುತ್ತಿದೆ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ

ಬಹಳಷ್ಟು ಪ್ರಕರಣಗಳಲ್ಲಿ ಹೆಚ್ಚು ಸಂಭಾವನೆ ಇರುವ ಕೆಲಸವನ್ನು ಕೊಡಿಸುವುದಾಗಿ ಹೇಳಿ ನಂಬಿಸಿ, ಹೆಣ್ಣು ಮಕ್ಕಳನ್ನು ಕಳ್ಳಸಾಗಾಣಿಕೆ ಮಾಡುವ ಮೂಲಕ ವೇಶ್ಯವಾಟಿಕೆ (Prostitute), ಬಾರ್ (Bar) ಗಳಿಗೆ ಸೇರಿಸಿ ದೌರ್ಜನ್ಯ ಎಸಗಲಾಗುತ್ತಿದೆ. ಆದರೆ ಇಂದು ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುವ ಮೂಲಕವೂ ಕಳ್ಳ ಸಾಗಾಣಿಕೆ ಮಾಡಲಾಗುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ಹೆಣ್ಣು ಮಕ್ಕಳು ಪ್ರೀತಿಯ ವಿಚಾರದಲ್ಲಿ ಎಚ್ಚರದಿಂದಿರಬೇಕು.

ಹಾಗಂತ ಪ್ರೀತಿ ಮಾಡುವವರೆಲ್ಲರೂ ಮೋಸ ಮಾಡುತ್ತಾರೆ ಎಂದು ಹೇಳಲಾಗದು. ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೆಣ್ಣು ಮಕ್ಕಳನ್ನು ಪ್ರೀತಿಯ ಮೂಲಕವೂ ಕಳ್ಳ ಸಾಗಾಣಿಕೆ ಮಾಡಲಾಗುತ್ತಿರುವ ಸಂಗತಿಗಳು ಕಂಡುಬರುತ್ತಿವೆ. ಪ್ರೇಮ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಪೋಷಕರಿಂದ ಸಂಪರ್ಕವನ್ನು ಕಡಿದು ಕೊಳ್ಳುವುದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ದುಷ್ಟರು ಹೆಣ್ಣು ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ.

ಪ್ರೀತಿಯ ಮೂಲಕ ಹೆಣ್ಣು ಮಕ್ಕಳನ್ನು ಕಳ್ಳ ಸಾಗಾಣಿಕೆ ನಡೆಸಿ, ಹೇಗೆ ದೌರ್ಜನ್ಯ ಎಸಗುತ್ತಾರೆ ಎಂಬುದಕ್ಕೆ ಎರಡು ನೈಜ ಘಟನೆಗಳನ್ನು ಹೇಳುತ್ತೇನೆ..… ಇತ್ತೀಚೆಗೆ ಮೈಸೂರಿನ ಎಟಿಐ ತರಬೇತಿ ಕೇಂದ್ರದಲ್ಲಿ ಮಕ್ಕಳ ರಕ್ಷಣೆ ಮತ್ತು ಮಾನವ ಕಳ್ಳ ಸಾಗಾಣಿಕೆ ಕುರಿತ ಮೂರು ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದಾಗ, ಹೆಣ್ಣು ಮಕ್ಕಳ ರಕ್ಷಣೆ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕರೊಬ್ಬರು ಹಂಚಿಕೊಂಡ ನೈಜ ಕಥೆಯಿದು.

ಅವರ ಸ್ನೇಹಿತರೊಬ್ಬರ 18 ವರ್ಷದ ಏಕೈಕ ಮಗಳು ತುಂಬಾ ಸೌಂದರ್ಯವತಿಯಾಗಿದ್ದಳಲ್ಲದೆ, ಓದಿನಲ್ಲೂ ಮುಂದಿದ್ದಳಂತೆ. ವಯೋಸಹಜ ಆಕರ್ಷಣಿಯಿಂದಾಗಿ ಆಕೆ ಒಬ್ಬ ಹುಡುಗನ ಪ್ರೀತಿಗೆ ಬೀಳುತ್ತಾಳೆ. ಹುಡುಗ ಇವಳಿಗೆ ತಕ್ಕದವನಲ್ಲದ ಕಾರಣ ಆಕೆಯ ಪೋಷಕರು ವಿದ್ಯಾಭ್ಯಾಸವನ್ನು ಹಾಳು ಮಾಡಿಕೊಳ್ಳಬೇಡ ಎಂದು ತುಂಬಾ ಬುದ್ಧಿವಾದ ಹೇಳುತ್ತಾರೆ. ಆದರೆ ಕುರುಡು ಪ್ರೀತಿಯಲ್ಲಿದ್ದ ಅವಳಿಗೆ ಯಾರ ಮಾತು ಹಿಡಿಸುವುದಿಲ್ಲ. ಒಂದು ದಿನ ಅಪ್ಪ ಅಮ್ಮನಿಗೆ ಹೇಳದೆ ಆತನೊಂದಿಗೆ ಮನೆ ಬಿಟ್ಟು ಹೊರಟು ಹೋಗುತ್ತಾಳೆ. ತಮ್ಮ ಮಾತು ಕೇಳದೇ ಹೋದಳಲ್ಲ ಎಂಬ ಕಾರಣಕ್ಕೆ ಆಕೆಯ ತಂದೆ-ತಾಯಿ ನೋವಿನಲ್ಲಿ ತಮಗೆ ಮಗಳೇ ಇರಲಿಲ್ಲ ಎಂದು ಮರೆತು ಬದುಕಲು ತೀರ್ಮಾನಿಸಿ, ಆಕೆಯೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳುತ್ತಾರೆ.

ಆದರೆ ಪ್ರೀತಿ ಮಾಡಿದ ಹುಡುಗನೊಂದಿಗೆ ಸಂತೋಷದಿಂದ ಇರಬಹುದು ಎಂದುಕೊಂಡು ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ಹೋದವಳಿಗೆ ಕೆಲವೇ ಕೆಲವು ತಿಂಗಳುಗಳಲ್ಲಿ ಆತನ ಇನ್ನೊಂದು ಮುಖ ಕಾಣಲಾರಂಭಿಸುತ್ತದೆ. ಯಾವುದೇ ದುಡಿಮೆ ಇಲ್ಲದ ಆತ ಹಣ ಸಂಪಾದನೆಗಾಗಿ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು, ಆಕೆಗೆ ಅವರೊಂದಿಗೆ ಸಹಕರಿಸುವಂತೆ ದೌರ್ಜನ್ಯ ನಡೆಸಲು ಆರಂಭಿಸುತ್ತಾನೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋದ ಹುಡುಗಿ, ಅಮಲು ಬರುವ ದುಶ್ಚಟಗಳಿಗೆ ದಾಸಳಾಗುತ್ತಾಳೆ. ಅಪ್ಪ ಅಮ್ಮನ ಮಾತು ಕೇಳದೆ ತಪ್ಪು ಮಾಡಿದ ಕಾರಣ ತನ್ನ ನೋವನ್ನು ಅವರಿಗೆ ಹೇಳುವಂತಿಲ್ಲ. ಯಾವುದೇ ಕಾರಣಕ್ಕೂ ಅಪ್ಪ ಅಮ್ಮ ನನ್ನನ್ನು ಮತ್ತೆ ಸ್ವೀಕರಿಸುವುದಿಲ್ಲ ಎಂದು ಭಾವಿಸಿದ ಆಕೆ, ಪ್ರತಿ ದಿನ ನಡೆಯುತ್ತಿದ್ದ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಾಳೆ.

ಹದಿಹರಯದಲ್ಲಿ ಒಂದು ಹುಡುಗ ಒಂದು ಹುಡುಗಿ ಆಕರ್ಷಣೆಗೆ ಒಳಗಾಗುವುದು ಪ್ರಕೃತಿ ಸಹಜ ಕ್ರಿಯೆ. ಆದರೆ ಓದಿನಲ್ಲಿ ತುಂಬಾ ಮುಂದಿದ್ದ ಈ ಹುಡುಗಿ ತಾನು ಪ್ರೇಮಿಸಿದ ಹುಡುಗನಿಂದಲೇ ಮೋಸ ಹೋಗಿ, ಸಾವಿನಲ್ಲಿ ಅಂತ್ಯ ಕಾಣುತ್ತಾಳೆ. ಮಗಳು ನಮ್ಮನ್ನು ಬಿಟ್ಟು ಹೋದಳಲ್ಲ ಎಂಬ ಕಾರಣಕ್ಕೆ ಅವಳೊಂದಿಗೆ ಸಂಬಂಧವನ್ನೇ ಕಡಿದುಕೊಳ್ಳುವ ಪೋಷಕರು ಆಕೆಯ ಜೊತೆಗೆ ಸ್ವಲ್ಪ ಮಟ್ಟಿಗಾದರೂ ಸಂಪರ್ಕವನ್ನು ಇಟ್ಟುಕೊಂಡಿದ್ದರೆ, ಆಕೆಯ ಮೇಲೆ ದೌರ್ಜನ್ಯ ಎಸಗಲು ಆತನಿಗೆ ಧೈರ್ಯ ಬರುತ್ತಿರಲಿಲ್ಲ. ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಇದೊಂದು ತಪ್ಪಿನಿಂದ ಅವಳನ್ನು ರಕ್ಷಿಸಿದ್ದರೆ, ಓದಿನಲ್ಲಿ ಮುಂದಿದ್ದ ಹುಡುಗಿ ಮುಂದೆ ತನ್ನ ಓದನ್ನು ಮುಂದುವರೆಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗುತಿದ್ದಳು.

ಮತ್ತೊಂದು ಘಟನೆ ನಡೆದಿರುವುದು ಗ್ರಾಮೀಣ ಭಾಗದಲ್ಲಿ. 20 ವರ್ಷದ ಹುಡುಗಿಯನ್ನು ಪಕ್ಕದ ಊರಿನ ಹುಡುಗನೊಬ್ಬ ಪ್ರೀತಿಸುತಿದ್ದ. ಒಂದು ದಿನ ಹುಡುಗಿಯನ್ನು ಕರೆದುಕೊಂಡು ಓಡಿ ಹೋದ ಹುಡುಗ, ಮೂರ್ನಾಲ್ಕು ತಿಂಗಳ ನಂತರ ಊರಿಗೆ ಒಬ್ಬನೇ ಮರಳಿ ಬರುತ್ತಾನೆ. ಜನರು ನಿನ್ನ ಹುಡುಗಿ ಎಲ್ಲಪ್ಪ ಎಂದು ಕೇಳಿದರೆ, ಅವಳು ನನಗೆ ಮೋಸ ಮಾಡಿ ಮತ್ತೊಬ್ಬನೊಂದಿಗೆ ಓಡಿ ಹೋದ್ಲು ಎಂದು ಹೇಳುತ್ತಾನೆ. ಈತನೊಂದಿಗೆ ಓಡಿ ಹೋದಾಗಲೇ, ತಮ್ಮ ಪಾಲಿಗೆ ಮಗಳು ಸತ್ತು ಹೋದಳು ಎಂದುಕೊಂಡು ಇದ್ದ ಹುಡುಗಿಯ ಪೋಷಕರು, ತಮ್ಮ ಮಗಳು ನಿಜವಾಗಿಯೂ ಇನ್ನೊಬ್ಬನ ಜೊತೆ ಹೋಗಿದ್ದಾಳೆಯೇ ಅಥವಾ ಈತನೇ ಆಕೆಯನ್ನು ಏನಾದರೂ ಮಾಡಿರಬಹುದಾ ಎಂಬುದನ್ನು ತಿಳಿಯಲು ಪ್ರಯತ್ನಿಸುವುದಿಲ್ಲ. ಹುಡುಗ ಹೇಳುತ್ತಿರುವುದು ನಿಜ ಇರಬೇಕು ಎಂದು ನಂಬುತ್ತಾರೆ. ಇಂತಹ ಪ್ರಕರಣಗಳಲ್ಲಿ ಆ ಹುಡುಗ ಹೇಳುತ್ತಿರುವುದು ನಿಜವೇ ಎಂಬುದನ್ನು ತಿಳಿಯಲು ಹಾಗೂ ಕಾಣೆಯಾಗಿರುವ ತಮ್ಮ ಮಗಳ ಬಗ್ಗೆ ಪೋಷಕರೇ ದೂರು ನೀಡದಿದ್ದಾಗ, ಇಂತಹ ಪ್ರಕರಣಗಳು ಬೆಳಕಿಗೆ ಬರದೆ ಹಾಗೆಯೇ ಮುಚ್ಚಿ ಹೋಗುತ್ತವೆ. ಕಾಣೆಯಾದ ಹುಡುಗಿ ದಿನ ಕಳೆದಂತೆ ಎಲ್ಲರ ಮನಸ್ಸಿನಿಂದಲೂ ಕಾಣೆಯಾಗುತ್ತಾಳೆ.

ಈ ಎರಡೂ ಘಟನೆಗಳನ್ನು ನೋಡಿದರೆ, ತಮ್ಮ ಪೋಷಕರೊಂದಿಗೆ ಸಂಪರ್ಕವನ್ನು ಕಡಿದು ಕೊಳ್ಳುವ ಹೆಣ್ಣು ಮಕ್ಕಳು ಸಾಗಾಣಿಕೆಯ ಜಾಲಕ್ಕೆ ಸುಲಭವಾಗಿ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ಪ್ರೀತಿಸಿ ಮದುವೆಯಾಗುವವರು ಮೊದಲು ಪೋಷಕರನ್ನು ಒಪ್ಪಿಸಿ, ಅವರ ಅನುಮತಿ ಪಡೆದು ಮದುವೆಯಾಗುವುದು ಒಳ್ಳೆಯದು. ಹಾಗೆಯೇ ತಮ್ಮ ಸಲಹೆಯನ್ನು ಮೀರಿ ಇಂತಹ ಸಮಸ್ಯೆಗೆ ಸಿಲುಕಿಕೊಳ್ಳುವ ತಮ್ಮ ಮಗಳನ್ನು ಕ್ಷಮಿಸಿ, ಅವಳ ಮೇಲೆ ನಿಗಾ ಇರಿಸಬೇಕು.

ತಾಯಿಯ ಹೃದಯವನ್ನು ಕಿತ್ತು ಕೈಯಲ್ಲಿ ಹಿಡಿದು ಹೋಗುತ್ತಿದ್ದ ಮಗ, ಎಡವಿದಾಗ ಆತನ ಕೈಯಲ್ಲಿದ್ದ ತಾಯಿ ಹೃದಯ ಪೆಟ್ಟಾಯಿತಾ ಮಗನೇ… ಎಂದು ಕೇಳಿತಂತೆ, ಎಂದು ತಾಯಿ ಪ್ರೀತಿಗಾಗಿ ಹೇಳುವ ಕಥೆಯನ್ನು ಕೇಳಿದ್ದೇವೆ. ಅದೇ ತಾಯಿ ಪ್ರೀತಿಯು ಈ ವಿಚಾರದಲ್ಲೂ ಮಿಡಿದಲ್ಲಿ ನಮ್ಮ ಮಕ್ಕಳು ಇಂತಹ ದೌರ್ಜನ್ಯಕ್ಕೆ ಸಿಳುಕಿ ತಮ್ಮ ಬಾಳನ್ನು ಹಾಳು ಮಾಡಿಕೊಳ್ಳುವುದನ್ನು ತಡೆಯಬಹುದು. ಪೋಷಕರ ಸಂಪರ್ಕದಲ್ಲಿರುವ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳಲು ಅಥವಾ ಕಳ್ಳ ಸಾಗಾಣಿಕೆ ಮಾಡಲು ಯಾರಿಗೂ ಧೈರ್ಯ ಬರುವುದಿಲ್ಲ.

ಈ ಕಥೆಯ ಇಬ್ಬರೂ ಹೆಣ್ಣು ಮಕ್ಕಳಿಗೆ ಪೋಷಕರ ರಕ್ಷಣೆ ಇದಿದ್ದರೆ, ಇಂತಹ ದೌರ್ಜನ್ಯಕ್ಕೆ ಅವರು ಒಳಗಾಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಕೂಡ ಪೋಷಕರನ್ನು ದೂರ ಮಾಡಿಕೊಂಡು, ಕೆಲವೇ ಕೆಲವು ದಿನಗಳಲ್ಲಿ ಪರಿಚಯವಾದವನನ್ನು ನಂಬಿ ಮೋಸ ಹೋಗಬಾರದು. ಒಂದು ಸಾರಿ ಇಂತಹವರ ಕೈಗೆ ಸಿಲುಕಿಕೊಂಡರೆ, ಅಲ್ಲಿಂದ ಬಿಡಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ. ಇಂದಿನ ದಿನಗಳಲ್ಲಿ ಪ್ರೀತಿಸುವ ಮೂಲಕವೂ ಮೋಸ ಮಾಡುವವರು ಇರುತ್ತಾರೆ ಎಂಬುದನ್ನು ನಾವು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ.

ಒಟ್ಟಿನಲ್ಲಿ ನಮ್ಮ ಹೆಣ್ಣುಮಕ್ಕಳು ಪೋಷಕರನ್ನು ದಿಕ್ಕರಿಸಿ ಹೋಗುವ ನಿರ್ಧಾರವನ್ನು ತೆಗೆದುಕೊಳ್ಳದೇ, ಪ್ರೀತಿಯ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಹಾಗೆಯೇ ಮಕ್ಕಳು ತಪ್ಪು ಮಾಡಿದರು ಎಂದು ಅವರನ್ನು ದೂರ ಮಾಡುವ ಬದಲು, ಅವರ ತಪ್ಪನ್ನು ಕ್ಷಮಿಸಿ, ಕಷ್ಟದಲ್ಲಿ ಅವರೊಂದಿಗೆ ಇರುವುದಾಗಿ ಭರವಸೆ ನೀಡಿದರೆ ಸಾಕು ಒಂದು ಅಮೂಲ್ಯ ಜೀವ ದುರಂತ ಕಾಣುವುದನ್ನು ತಪ್ಪಿಸಬಹುದು.

-ಬಿ.ಜಿ.ಪೂರ್ಣಿಮ
ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

Hot this week

KPTCLನಿಂದ ಮತ್ತೊಂದು ಮೈಲಿಗಲ್ಲು: 12 ಕಿ.ಮೀ. 220 ಕೆವಿ ಮಲ್ಟಿ ಸರ್ಕ್ಯೂಟ್ ಪ್ರಸರಣ ಮಾರ್ಗ ಯಶಸ್ವಿ ಕಮಿಷನ್

ಬೆಂಗಳೂರಿನ ವಿದ್ಯುತ್ ಪ್ರಸರಣ ಜಾಲವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್...

ಕಾಂಗ್ರೆಸ್ ಸ್ಟೇಷನ್ ಆದ ಪೊಲೀಸ್ ಠಾಣೆಗಳು- ಆರ್.ಅಶೋಕ್

ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್ ಗಳೆಲ್ಲಾ ಕಾಂಗ್ರೆಸ್ ಸ್ಟೇಷನ್(Congress Station) ಆಗಿದೆ...

ಪ್ರಧಾನಿ ಮೋದಿ ಅವರ ವಿಶಿಷ್ಟ ನಾಯಕತ್ವಕ್ಕೆ ಕೇಂದ್ರ ಸಚಿವ ಸಂಪುಟ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿಶಿಷ್ಟ ನಾಯಕತ್ವವನ್ನು ಶ್ಲಾಘಿಸಿ...

“ಚುನಾವಣಾ ಆಯುಕ್ತರು ನಮ್ಮನ್ನು ಭೇಟಿಯಾಗಲೇಬೇಕು” – ರಾಹುಲ್ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತ್ತೆ...

ನೈಜೀರಿಯಾ ವಾಯುಪಡೆ ವಿಮಾನ ಪತನ: 32 ಸಾವು – ರಾಷ್ಟ್ರೀಯ ಶೋಕಾಚರಣೆ

ನೈಜೀರಿಯಾದಲ್ಲಿ ನೈಜೀರಿಯಾ ವಾಯುಪಡೆಯ (NAF) ATR-42 ವಿಮಾನ ಪತನಗೊಂಡ ಪರಿಣಾಮ 32...

Topics

KPTCLನಿಂದ ಮತ್ತೊಂದು ಮೈಲಿಗಲ್ಲು: 12 ಕಿ.ಮೀ. 220 ಕೆವಿ ಮಲ್ಟಿ ಸರ್ಕ್ಯೂಟ್ ಪ್ರಸರಣ ಮಾರ್ಗ ಯಶಸ್ವಿ ಕಮಿಷನ್

ಬೆಂಗಳೂರಿನ ವಿದ್ಯುತ್ ಪ್ರಸರಣ ಜಾಲವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್...

ಕಾಂಗ್ರೆಸ್ ಸ್ಟೇಷನ್ ಆದ ಪೊಲೀಸ್ ಠಾಣೆಗಳು- ಆರ್.ಅಶೋಕ್

ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್ ಗಳೆಲ್ಲಾ ಕಾಂಗ್ರೆಸ್ ಸ್ಟೇಷನ್(Congress Station) ಆಗಿದೆ...

ಪ್ರಧಾನಿ ಮೋದಿ ಅವರ ವಿಶಿಷ್ಟ ನಾಯಕತ್ವಕ್ಕೆ ಕೇಂದ್ರ ಸಚಿವ ಸಂಪುಟ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿಶಿಷ್ಟ ನಾಯಕತ್ವವನ್ನು ಶ್ಲಾಘಿಸಿ...

“ಚುನಾವಣಾ ಆಯುಕ್ತರು ನಮ್ಮನ್ನು ಭೇಟಿಯಾಗಲೇಬೇಕು” – ರಾಹುಲ್ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತ್ತೆ...

ನೈಜೀರಿಯಾ ವಾಯುಪಡೆ ವಿಮಾನ ಪತನ: 32 ಸಾವು – ರಾಷ್ಟ್ರೀಯ ಶೋಕಾಚರಣೆ

ನೈಜೀರಿಯಾದಲ್ಲಿ ನೈಜೀರಿಯಾ ವಾಯುಪಡೆಯ (NAF) ATR-42 ವಿಮಾನ ಪತನಗೊಂಡ ಪರಿಣಾಮ 32...

ಏರೋ ಇಂಡಿಯಾ 2027: ಫೆ. 8ರಿಂದ ವೈಮಾನಿಕ ಪ್ರದರ್ಶನ; ನೋಂದಣಿ ಪ್ರಕ್ರಿಯೆ ಆರಂಭ

ಭಾರತದ ಪ್ರಮುಖ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾ 2027ರ...

ಭವಿಷ್ಯ ರೂಪಿಸುವ ಶಕ್ತಿ ಯುವಜನರ ಕೈಯಲ್ಲಿದೆ: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬೆಂಗಳೂರು : ದೇಶದ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ ಯುವಜನತೆಯ ಮೇಲಿದೆ....

ಮೈಸೂರು:ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಅ.10ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಮೈಸೂರು: ವಿಜಯನಗರ (Mysore Vijayanagar) ಮೊದಲನೇ...

Related Articles