ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ತೀವ್ರ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಗಂಭೀರ ಹಿನ್ನಡೆಯುಂಟಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಆರು ಜಿಲ್ಲೆಗಳ ಒಟ್ಟು 36 ತಾಲ್ಲೂಕುಗಳ ಪೈಕಿ 34 ತಾಲ್ಲೂಕುಗಳನ್ನು ರಾಜ್ಯ ಸರ್ಕಾರವು ಬರಪೀಡಿತ ತಾಲ್ಲೂಕುಗಳೆಂದು(As Drought-prone Taluks) ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಲ್ಲಿ ಆಯೋಜಿಸಲಿರುವ ವಾರ್ಷಿಕ ಕೃಷಿಮೇಳದ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದೆ.
ಕೃಷಿಮೇಳದ ಬದಲಾವಣೆ: 4 ದಿನಗಳ ವಾರ್ಷಿಕ ಕೃಷಿಮೇಳದ ಬದಲಾಗಿ ಕೇವಲ ಒಂದು ದಿನದ ಮಟ್ಟಿಗೆ ಸರಳವಾಗಿ ನವೆಂಬರ್ 13, 2026 ರಂದು ಆಯೋಜಿಸಲು ನಿರ್ಧರಿಸಲಾಗಿದೆ.
ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ: ಈ ಸಂಕಷ್ಟದ ಮಧ್ಯೆಯೂ ಸಾಧನೆಗೈದ ವಿಶ್ವವಿದ್ಯಾನಿಲಯದ ವ್ಯಾಪ್ತಿಯ 6 ಜಿಲ್ಲೆಗಳ ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ವಿಶೇಷ ಕಾರ್ಯಾಗಾರ: ಬರ ಪರಿಸ್ಥಿತಿಯನ್ನು ಎದುರಿಸಲು ಪೂರಕ ತಂತ್ರಜ್ಞಾನಗಳು, ಬರ ನಿರೋಧಕ ತಳಿಗಳು, ಪರ್ಯಾಯ ಬೆಳೆ ಯೋಜನೆಗಳು ಮತ್ತು ಸಿರಿಧಾನ್ಯ ಕೃಷಿಯ ಪ್ರಾಮುಖ್ಯತೆಯ ಕುರಿತು ತಜ್ಞರಿಂದ ವಿಶೇಷ “ಬರ ನಿರ್ವಹಣೆ” ಕಾರ್ಯಾಗಾರ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕೃಷಿ ವಿಸ್ತರಣಾ ನಿರ್ದೇಶಕರಾದ ಡಾ: ಕೆ.ಪಿ. ರಘುಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಡಿಸೆಂಬರ್ 4 ರಿಂದ 13 ರವರೆಗೆ ಹತ್ತು ದಿನಗಳ ಕಾಲ “ಬೆಂಗಳೂರು ಜಾತ್ರೆ” ಸಂಭ್ರಮಾಚರಣೆ-ಕೃಷ್ಣಭೈರೇಗೌಡ

