“ನೃತ್ಯಪ್ರಭಾ” ಮೂಲಕ ಮಿಂಚಿದ ನೃತ್ಯ ನೀರಾಜನ

ಬೆಂಗಳೂರು : ನಗರದ ಹೆಸರಾಂತ ಭರತನಾಟ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟ್ (ರಿ.) (Nrithya Disha Trust) ವತಿಯಿಂದ ಗುರು ಕಲಾಭೂಷಿಣಿ ಡಾ. ದರ್ಶಿನಿ ಮಂಜುನಾಥ್ (Dr. Darshini Manjunath) ಅವರ ನಿರ್ದೇಶನದಲ್ಲಿ ಆಯೋಜಿಸಲಾದ “ನೃತ್ಯ ನೀರಾಜನ–14” (Nrithya Neerajana-14) ಕಾರ್ಯಕ್ರಮವು ಮಲ್ಲತ್ತಹಳ್ಳಿಯ ಕಲಾಗ್ರಾಮದ (Kalagrama) ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ಸಾಧನಾಶ್ರೀ (ಆಯುರ್ವೇದ ವೈದ್ಯರು ಹಾಗೂ ಸಾಧನಾ ಸಂಗಮ ಟ್ರಸ್ಟಿನ ನಿರ್ದೇಶಕರು) ಮತ್ತು ಶ್ರೀಮತಿ ರಜನಿ ಆರ್., (ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ) ಅವರು ಉಪಸ್ಥಿತರಿದ್ದು ಯುವ ಕಲಾವಿದೆಯರಿಗೆ ಶುಭ ಹಾರೈಸಿದರು.
ಈ ವರ್ಷದ ನೃತ್ಯ ನೀರಾಜನದ ಶೀರ್ಷಿಕೆ “ನೃತ್ಯಪ್ರಭಾ” ಆಗಿದ್ದು, ಗುರು ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಪಿ. ಲಿಖಿತಾ, ಕು|| ಜಯಶ್ರೀ ವೇಣು ಕುಳಾವಿ ಹಾಗೂ ಕು|| ಆರ್. ಸಮೃದ್ಧಿ ಅವರು ಭರತನಾಟ್ಯದ ವಿವಿಧ ಆಯಾಮಗಳನ್ನು ಒಳಗೊಂಡ ಸುಂದರ ನೃತ್ಯ ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮವು ಸಂಪ್ರದಾಯಬದ್ಧ ‘ಪುಷ್ಪಾಂಜಲಿ’ ರಾಗ ಅಮೃತ ವರ್ಷಿಣಿ, ಆದಿತಾಳ ಹಾಗೂ ಚಕ್ರವಾಕ ರಾಗದ ‘ಗಜಾನನಾಯುತo’ ಕೃತಿಯ ಮೂಲಕ ಶುಭಾರಂಭವಾಯಿತು. ನಂತರ ಖಂಡ ಅಲರಿಪು, ಅಭೋಗಿ ಜತಿಸ್ವರ, ನೃತ್ಯ ಭಂದ ಮೂರುಕಲಾವಿದರು ನರ್ತಿಸಿದರು. ಏಕವ್ಯಕ್ತಿ ಪ್ರದರ್ಶನದಲ್ಲಿ ಲಿಖಿತ ಶಿವನ ಕೃತಿ
ಆನಂದತಂದವೇಶ್ವರನ ಅದರಲ್ಲಿ ನವರಸ ವನ್ನು ಅದ್ಭುತವಾಗಿ ಪ್ರದರ್ಶಿಸಿದರು‌ ಸಮೃದ್ಧಿ ದೇವಿ ಕೃತಿ ಓಂಕಾರಕಾರಿಣಿಯಲ್ಲಿ ಬಂಧಸುರ ವಧೆ ಪ್ರಸಂಗ ಹಾಗೂ ಜಯಶ್ರೀ ವಾದಿರಾಜರ ದೇವರನಾಮ
ಆವಕುಲವೋ ರಂಗದಲ್ಲಿ ಪಾರಿಜಾತ ಕಥೆ, ಪೂತನ ಮೋಕ್ಷ ಕಥಾಪ್ರಸಂಗ ಸಂಯೋಜನೆಗಳನ್ನು ಕಲಾವಿದೆಯರು ಪ್ರಸ್ತುತಪಡಿಸಿದರು.
ಪ್ರತಿಯೊಂದು ಪ್ರಸ್ತುತಿಯಲ್ಲಿಯೂ ಗುರುಪರಂಪರೆಯ ಶೈಲಿ, ಶಾಸ್ತ್ರೀಯ ಮೌಲ್ಯಗಳು ಹಾಗೂ ಕಲಾತ್ಮಕ ಸೊಬಗು ಎದ್ದು ಕಾಣುತ್ತಿತ್ತು. ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನಗಳ ಮೂಲಕ ಕಲಾವಿದೆಯರು ಪ್ರೇಕ್ಷಕರ ಮನ ಗೆದ್ದು ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಸಮಾರೋಪದಲ್ಲಿ ರಂಜಕ ಕದನಕುತುಹಲ ತಿಲ್ಲಾನ ಹಾಗೂ ಗರುಡ ಗಮನ ಮಂಗಳಂ ಪ್ರಸ್ತುತಗೊಂಡು ನೃತ್ಯಯಾನಕ್ಕೆ ಮಂಗಳಕರ ತೆರೆ ಎಳೆಯಲಾಯಿತು. ನೆರೆದಿದ್ದ ಕಲಾಭಿಮಾನಿಗಳು ಕಲಾವಿದೆಯರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂಪೂರ್ಣ ಕಾರ್ಯಕ್ರಮದ ನೃತ್ಯ ಸಂಯೋಜನೆ, ತರಬೇತಿ ಹಾಗೂ ನಿರ್ದೇಶನವನ್ನು ಗುರು ಕಲಾಭೂಷಿಣಿ ಡಾ|| ದರ್ಶಿನಿ ಮಂಜುನಾಥ್ ಅವರು ನಿರ್ವಹಿಸಿದ್ದು, ಅವರ ಶ್ರಮ ಮತ್ತು ಕಲಾಸೇವೆಯನ್ನು ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles