ಐಎಸ್ಎಫ್ ಫುಟ್‌ಬಾಲ್ ವಿಶ್ವಕಪ್‌ಗೆ (IFS Football WorldCup) ಬೆಂಗಳೂರಿನ ಶೌರ್ಯ ವಿ.ಎ. (Shourya) ಆಯ್ಕೆ

ಮುಂಬರುವ ಅಕ್ಟೋಬರ್‌ ತಿಂಗಳಲ್ಲಿ  ಚೀನಾದಲ್ಲಿ (China) ಐ ಎಸ್ ಎಫ್ ವಿಶ್ವಕಪ್ ಫುಟ್‌ಬಾಲ್ (IFS World Cup Football) 2026ರ 18 (Under 18) ವರ್ಷದೊಳಗಿನ ಬಾಲಕರ ತಂಡದಲ್ಲಿ ಭಾರತ ತಂಡ (Indian Team) ವನ್ನು ಪ್ರತಿನಿಧಿಯಾಗಿ ಬೆಂಗಳೂರಿನ ಇಂಡಸ್ (Indus) ಇಂಟರ್‌ನ್ಯಾಶನಲ್ ಸ್ಕೂಲ್‌ನ 12ನೇ ತರಗತಿಯ ವಿದ್ಯಾರ್ಥಿ ಶೌರ್ಯ ವಿ.ಎ. (Shourya VM) ಅವರು ಆಯ್ಕೆಯಾಗಿದ್ದಾರೆ.

ಭಾರತದ ಅಂತರರಾಷ್ಟ್ರೀಯ ಶಾಲೆಗಳಿಗೆ ವಿಶ್ವಾಸಾರ್ಹ ಮತ್ತು ಮಾನ್ಯತೆ ಪಡೆದ ಕ್ರೀಡಾ ವೇದಿಕೆಯನ್ನು ಒದಗಿಸುವ ಇಂಟರ್‌ನ್ಯಾಷನಲ್ ಸ್ಕೂಲ್ಸ್ ಸ್ಪೋರ್ಟ್ಸ್‌ ಆರ್ಗನೈಸೇಷನ್ ಆಶ್ರಯದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ದೇಶಾದ್ಯಂತದ ಶ್ರೇಷ್ಠ ಶಾಲಾ ಫುಟ್‌ಬಾಲ್ ಆಟಗಾರರ ನಡುವೆ ನಡೆದ ಕಠಿಣ ಮೌಲ್ಯಮಾಪನ ಪ್ರಕ್ರಿಯೆಯ ನಂತರ, ಡಿಫೆನ್ಸಿವ್ ಮಿಡ್‌ಫೀಲ್ಡರ್ ಆಗಿರುವ ಶೌರ್ಯ ಅವರು ಅಂತಿಮ 20 ಸದಸ್ಯರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐಎಸ್ಎಫ್  ಫುಟ್‌ಬಾಲ್ ವಿಶ್ವಕಪ್ 2026ರ ಅಕ್ಟೋಬರ್ 17 ರಿಂದ 26 ರವರೆಗೆ ಚೀನಾದ ಸುಝೌ ನಗರದಲ್ಲಿ ನಡೆಯಲಿದೆ. ಇದು ಅಂತರರಾಷ್ಟ್ರೀಯ ಶಾಲಾ ಕ್ರೀಡೆಯ ಅತ್ಯುನ್ನತ ಹಂತದಲ್ಲಿ ಸ್ಪರ್ಧಿಸಲು ಪ್ರಪಂಚದಾದ್ಯಂತದ ಯುವ ಫುಟ್‌ಬಾಲ್ ಪ್ರತಿಭೆಗಳನ್ನು ಒಂದೆಡೆ ಸೇರಿಸುತ್ತದೆ.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದು ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಪಾಲಿಗೆ ನನಸಾದ ಕನಸು ಎಂದು ಶೌರ್ಯ ಹೇಳಿದರು. ನನ್ನ ತರಬೇತುದಾರರು, ಶಿಕ್ಷಕರು ಮತ್ತು ಕುಟುಂಬದವರ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ. ಉನ್ನತ ಮಟ್ಟದ ಅಂತರರಾಷ್ಟ್ರೀಯ ತಂಡಗಳ ವಿರುದ್ಧ ಸ್ಪರ್ಧಿಸುವುದು ಒಂದು ಅದ್ಭುತ ಅವಕಾಶವಾಗಿದೆ. ದೇಶಕ್ಕಾಗಿ ಮೈದಾನದಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಐಬಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಶೌರ್ಯ, ಕಾಲೇಜು ಮಟ್ಟದಲ್ಲಿ ಫುಟ್‌ಬಾಲ್ ಆಡುವುದರ ಜೊತೆಗೆ ಫುಟ್‌ಬಾಲ್ ತರಬೇತುದಾರ / ತಂಡದ ವ್ಯವಸ್ಥಾಪಕರಾಗುವ ಆಕಾಂಕ್ಷೆಯನ್ನು ಹೊಂದಿದ್ದಾರೆ.

ಹಲವಾರು ತಾಂತ್ರಿಕ ಅಡೆತಡೆಗಳಿಂದಾಗಿ ಭಾರತೀಯರು ಇಂಗ್ಲಿಷ್ ಪ್ರೀಮಿಯರ್ ಲೀಗ್ / ಯಾವುದೇ ಯುರೋಪಿಯನ್ ಲೀಗ್‌ಗಳಲ್ಲಿ ಫುಟ್‌ಬಾಲ್ ತರಬೇತುದಾರರಾಗುವುದು / ವ್ಯವಸ್ಥಾಪಕರಾಗುವುದು ಅತ್ಯಂತ ಸವಾಲಿನ ವಿಷಯವಾಗಿದೆ. ಆದರೂ ನಾನು ಅದಕ್ಕಾಗಿ ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇನೆ. ಫುಟ್‌ಬಾಲ್‌ನತ್ತ ಗಮನಹರಿಸುವ ಮೂಲಕ ಸಮಗ್ರ ಕ್ರೀಡಾ ನಿರ್ವಹಣೆಯ ಗುರಿ  ಹೊಂದಿದ್ದೇನೆ” ಎಂದು ಹೇಳಿದರು.

ಶೌರ್ಯ ಬಾಲ್ಯದಲ್ಲೇ ಬೆಂಗಳೂರು ಫುಟ್‌ಬಾಲ್ ಕ್ಲಬ್ ನಲ್ಲಿ ಫುಟ್‌ಬಾಲ್ ಆಡಲು ಪ್ರಾರಂಭಿಸಿದರು. ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಹಾಗೂ ಬೆಂಗಳೂರು ಯೂತ್ ಫುಟ್‌ಬಾಲ್ ಲೀಗ್ ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದಾರೆ. ಅವರು ಇಂಗ್ಲೆಂಡ್‌ನ ಆರ್ಸೆನಲ್ ಫುಟ್‌ಬಾಲ್ ಕ್ಲಬ್‌ನಲ್ಲಿನ ತರಬೇತಿ ಅವಧಿಗಳನ್ನು ಒಳಗೊಂಡಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ.

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles