ವಾರಾಂತ್ಯದ ರಜೆ ಹಿನ್ನೆಲೆ: ಕರಾರಸಾ ನಿಗಮದಿಂದ 850 ಹೆಚ್ಚುವರಿ ವಿಶೇಷ ಬಸ್‌

ಬೆಂಗಳೂರು: 2026 ನೇ ಸೆಪ್ಟೆಂಬರ್ 02 ರ ಶುಕ್ರವಾರ ಗಾಂಧಿ ಜಯಂತಿ(Gandhi Jayanthi) ಹಾಗೂ ಅಕ್ಟೋಬರ್ 3 ಮತ್ತು 4ರ ವಾರಾಂತ್ಯದ ರಜಾದಿನಗಳಿರುವುದರಿಂದ, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು(KSRTC)  ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 850 ಹೆಚ್ಚುವರಿ ವಿಶೇಷ ವಾಹನಗಳ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.
ವಿಶೇಷ ಬಸ್‌ಗಳ ಕಾರ್ಯಾಚರಣೆಯ ವಿವರ:  
ದಿನಾಂಕ 01.10.2026 ಮತ್ತು 02.10.2026: ಬೆಂಗಳೂರಿನಿಂದ ವಿವಿಧ ನಗರಗಳಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.
ದಿನಾಂಕ 04.10.2026: ರಾಜ್ಯ ಹಾಗೂ ಅಂತರರಾಜ್ಯಗಳ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹಿಂತಿರುಗಲು ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ.
ಬಸ್ ನಿಲ್ದಾಣವಾರು ನಿರ್ಗಮನದ ವಿವರ:
ಕೆಂಪೇಗೌಡ ಬಸ್ ನಿಲ್ದಾಣ: ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ ಹಾಗೂ ಹೈದರಾಬಾದ್ ಮುಂತಾದ ಸ್ಥಳಗಳಿಗೆ ಬಸ್‌ಗಳು ಲಭ್ಯವಿರುತ್ತವೆ.
ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಮಾರ್ಗಗಳ ಕಡೆಗೆ ಬಸ್‌ಗಳು ಸಂಚರಿಸಲಿವೆ.
ಶಾಂತಿನಗರ ಬಿಎಂ‌ಟಿ‌ಸಿ ಬಸ್ ನಿಲ್ದಾಣ: ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಪ್ರಮುಖ ನಗರಗಳಾದ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ ಮತ್ತು ಕೋಯಿಕೋಡ್‌ಗೆ ಪ್ರತಿಷ್ಠಿತ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಪ್ರಯಾಣಿಕರ ಗಮನಕ್ಕೆ ಮತ್ತು ರಿಯಾಯಿತಿ ಸೌಲಭ್ಯಗಳು:
ಮುಂಗಡ ಕಾಯ್ದಿರಿಸುವಿಕೆ: ಪ್ರಯಾಣಿಕರು www.ksrtc.karnataka.gov.in ವೆಬ್‌ಸೈಟ್ ಮೂಲಕ ಅಥವಾ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯ ಪ್ರಮುಖ ನಗರಗಳಲ್ಲಿರುವ ಮುಂಗಡ ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಬಹುದು.
ಶೇಕಡಾ 5 ರಷ್ಟು ರಿಯಾಯಿತಿ: ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಬುಕ್ ಮಾಡಿದರೆ ಶೇಕಡಾ 5 ರಷ್ಟು ರಿಯಾಯಿತಿ ಸಿಗಲಿದೆ.
ಶೇಕಡಾ 10 ರಷ್ಟು ರಿಯಾಯಿತಿ: ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ, ಬರುವ ಪ್ರಯಾಣ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುವುದು.
ಪಿಕ್-ಅಪ್ ಪಾಯಿಂಟ್ ಗಮನಿಸಿ: ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ಟಿಕೆಟ್‌ನಲ್ಲಿ ನಮೂದಿಸಲಾದ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್ ಹೆಸರನ್ನು ಪರಿಶೀಲಿಸಿಕೊಳ್ಳುವುದು.
ನಿಗಮದ ವ್ಯಾಪ್ತಿಯ ಎಲ್ಲಾ ತಾಲೂಕು ಮತ್ತು ಜಿಲ್ಲಾ ಬಸ್ ನಿಲ್ದಾಣಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles