ಕೌಟುಂಬಿಕ ಜಗಳ: ಹೆಂಡತಿಯ ಕೊ*ಲೆ ಮಾಡಿದ ಪತಿ …!!!

ಮೈಕೋ ಲೇಔಟ್ (MICO Layout Station) ಪೊಲೀಸ್ ಠಾಣಾ ಸರಹದ್ದಿನ ಬಿಳ್ಳೇಕಹಳ್ಳಿಯಲ್ಲಿ (Billekahalli) ವಾಸವಿರುವ ಪರ‍್ಯಾದುದಾರರು ದಿನಾಂಕ:30/08/2026ರಂದು ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪರ‍್ಯಾದುದಾರರ ಮನೆಯಲ್ಲಿ ಬಿಹಾರ ರಾಜ್ಯದ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ 2025ನೇ ಸಾಲಿನ ಡಿಸೆಂಬರ್ ತಿಂಗಳಿನಿಂದ ಬಾಡಿಗೆಗೆ ವಾಸವಾಗಿದ್ದು, ಇವರುಗಳ ನಡುವೆ ಕಳೆದ 3 ತಿಂಗಳುಗಳಿಂದ ಸಾಂಸಾರಿಕ ವಿಚಾರದಲ್ಲಿ ಜಗಳಗಳಾಗುತ್ತಿದ್ದು. ದಿನಾಂಕ:16-9-2026ರಂದು ಮಕ್ಕಳು ಶಾಲೆಗೆ ಹೋದ ನಂತರ ಮೃತಳ ಪತಿ ಕೆಲಸದಿಂದ ವಾಪಸ್ಸು ಮನೆಗೆ ಬಂದು ತನ್ನ ಪತ್ನಿಯೊಂದಿಗೆ ಜಗಳ ತೆಗೆದು, ಪತ್ನಿಯ ಕುತ್ತಿಗೆಯನ್ನು ವೇಲ್ ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೊ*ಲೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ದಿನಾಂಕ:16/09/2026 ರಂದು ಪರ‍್ಯಾದುದಾರರ ಬಾಡಿಗೆ ಮನೆಯಲ್ಲಿದ್ದ ಪತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಕೊ*ಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ತನಿಖೆ ಪ್ರಗತಿಯಲ್ಲಿದೆ.

ಈ ಕರ‍್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮೊಹಮ್ಮದ್ ಸುಜೀತ ಎಂ.ಎಸ್, ಐಪಿಎಸ್., ರವರ ಮರ‍್ಗರ‍್ಶನದಲ್ಲಿ, ಮೈಕೋ ಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ  ನಾಗರಾಜು.ಎಸ್ ರವರ ನೇತೃತ್ವದಲ್ಲಿ, ಮೈಕೋ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್   ನಟರಾಜ್ ಡಿ.ಎನ್ ಹಾಗೂ ಇತರೆ ಅಧಿಕಾರಿ/ ಸಿಬ್ಬಂದಿಗಳು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಉತ್ತರಾಖಂಡ 10 ಜಿಲ್ಲೆಗಳಲ್ಲಿ ಭಾರಿ ಮಳೆ: ಧಾರ್ಮಿಕ ಕ್ಷೇತ್ರಗಳಲ್ಲಿ ಅಕಾಲಿಕ ಹಿಮಪಾತ

Hot this week

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

ಹೆಜ್ಜೆಯಲ್ಲಿ ಶಾಸ್ತ್ರ, ಭಾವದಲ್ಲಿ ಭಕ್ತಿ: ‘ಸಮರ್ಪಣ್’ನಲ್ಲಿ ಶೀತಲ್ ಹೇಮಂತ್ ನೃತ್ಯ

ಅ. 3ರಂದು ವಿದುಷಿ ಶೀತಲ್ ಹೇಮಂತ್ ಅವರಿಂದ ವಿಶೇಷ ಭರತನಾಟ್ಯ ನೃತ್ಯ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

Topics

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ

9ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ತೆರಿಗೆ ಪದ್ಧತಿ ಪಾಠ: ಪರಿಷ್ಕೃತ NCERT...

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ

NEET PG 2026: ಉತ್ತರ ಕೀ, ಸ್ಕೋರ್‌ಕಾರ್ಡ್ ಬಿಡುಗಡೆಗೆ ಸಿದ್ಧತೆ; MCC...

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ: ವಿದೇಶಿ ಹೂಡಿಕೆದಾರರ ಮಾರಾಟದ ಒತ್ತಡ

ಭಾರತೀಯ ಷೇರು ಮಾರುಕಟ್ಟೆಗಳು(Share Market) ಸತತ ಕುಸಿತದ ಒತ್ತಡಕ್ಕೆ ಸಿಲುಕಿದ್ದು, ಕಳೆದ...

“ಚರಕ ಕಾರ್ಯಾಗಾರ”

157ನೇ ಗಾಂಧಿ ಜಯಂತಿ(157th Gandhi Jayanthi) ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ...

ರಾಮರಸದಲ್ಲಿ ಆದಾಶರ್ಮಾ ದುರ್ಗಿ ರೋಲ್

ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ...

ಅಭಿನಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದಾ ಬ್ಯುಸಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Ex.CM.Siddaramayya) ಈಗ ನಟನೆಯಲ್ಲಿ(Acting) ತೊಡಗಿಕೊಂಡಿದ್ದಾರೆ. ಪತ್ರಕರ್ತರಾಗಿ...

ವಿ.ಕುಮಾರ್ ನಿರ್ದೇಶನದ ಹದಿನೆಂಟು ಎಕರೆ ಸಿನಿಮಾ ಲಕ್ಕಪ್ಪ

ಈ ಹಿಂದೆ ಗಾಯಿತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ವಿ.ಕುಮಾರ್ (ರಾಘವ...

Related Articles