ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು – ದೂರ್ವೆ

ಹಿಂದೂಗಳ (Hindu) ಹಬ್ಬಗಳಲ್ಲಿ ಶ್ರೀ ಗಣೇಶ ಚತುರ್ಥಿಗೆ (Ganesh Chaturthi) ವಿಶೇಷ ಸ್ಥಾನವಿದೆ. ಶ್ರೀ ಗಣೇಶ ಚತುರ್ಥಿಯ ದಿನದಂದು ಮತ್ತು ಈ ಹಬ್ಬದ ಇತರ ದಿನಗಳಂದು ಶ್ರೀ ಗಣೇಶತತ್ತ್ವವು ಇತರ ದಿನಗಳ ತುಲನೆಯಲ್ಲಿ 1000 ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಇಂತಹ ಸಮಯದಲ್ಲಿ ಶ್ರೀ ಗಣಪತಿಯ ಉಪಾಸನೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಗಣೇಶತತ್ತ್ವದ (Ganeshotsava) ಹೆಚ್ಚು ಲಾಭವಾಗುತ್ತದೆ.

ಗಣೇಶಭಕ್ತರಿಗೆ ವಿಘ್ನಹರ್ತಾ, ಸಿದ್ಧಿದಾತಾ ಮತ್ತು ಅಷ್ಟ ದಿಕ್ಕುಗಳ ಅಧಿಪತಿಯಾದ ಶ್ರೀ ಗಣೇಶನ ಭಾವಪೂರ್ಣ ಪೂಜೆಯನ್ನು ಮಾಡಿ ಅವನ ಆಶೀರ್ವಾದವನ್ನು ಪಡೆಯುವ ಹಂಬಲ ಸದಾ ಇರುತ್ತದೆ. ‘ಗಣೇಶಭಕ್ತರು ಗಣೇಶಪೂಜೆಯನ್ನು ಭಾವಪೂರ್ಣವಾಗಿ ಮಾಡುವಂತಾಗಲಿ, ಮತ್ತು ಅವರ ಮೇಲೆ ಗಣಪತಿಯ ಕೃಪೆಯಾಗಲಿ’ ಎಂಬ ಉದ್ದೇಶದಿಂದ ಶ್ರೀ ಗಣೇಶ ಚತುರ್ಥಿಯನ್ನು ಶಾಸ್ತ್ರೀಯವಾಗಿ ಹೇಗೆ ಆಚರಿಸಬೇಕು ಎಂಬ ಮಾರ್ಗದರ್ಶನವನ್ನು ಮುಂದಿನ ಲೇಖನದ ಮೂಲಕ ನೀಡಲಾಗಿದೆ.

ಗಣೇಶನ ಪೂಜೆಯಲ್ಲಿ ದೂರ್ವೆಗೆ ವಿಶೇಷ ಮಹತ್ವವಿದೆ. ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.

ಶ್ರೀ ಗಣಪತಿಗೆ ದೂರ್ವೆಯನ್ನು ಅರ್ಪಿಸುವುದರ ಕಾರಣಗಳು :
ಪೌರಾಣಿಕ ಕಾರಣ : ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.’

ಆಯುರ್ವೇದಕ್ಕನುಸಾರ ಕಾರಣ : ಆಯುರ್ವೇದವು ಸಹ ‘ದೂರ್ವೆಯ ರಸದಿಂದ ಶರೀರದ ಉಷ್ಣತೆಯು ಕಡಿಮೆಯಾಗುತ್ತದೆ’ ಎಂದು ಹೇಳುತ್ತದೆ.

ಆಧ್ಯಾತ್ಮಿಕ ಕಾರಣ : ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ. ದೂರ್ವೆಯಲ್ಲಿ ಗಣೇಶತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಿಗೆ ಇರುವುದರಿಂದ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.

ದೂರ್ವೆ ಹೇಗಿರಬೇಕು ?
ಗಣಪತಿಗೆ ಎಳೆಯ ದೂರ್ವೆಗಳನ್ನು ಅರ್ಪಿಸಬೇಕು. ಎಳೆಯ ದೂರ್ವೆಗೆ ‘ಬಾಲತೃಣಮ್’ ಎನ್ನುತ್ತಾರೆ. ಬಲಿತಿರುವ ದೂರ್ವೆಯು ಒಂದು ರೀತಿಯ ಹುಲ್ಲಿನಂತೆಯೇ ಇರುತ್ತದೆ. ದೂರ್ವೆಗಳಿಗೆ 3,5,7 ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು.

ದೂರ್ವೆಯು ಎಷ್ಟು ಉದ್ದವಾಗಿರಬೇಕು ?
ಮೊದಲು ಗಣಪತಿಯ ಮೂರ್ತಿಯು ಸುಮಾರು ಒಂದು ಮೀಟರಿನಷ್ಟು ಎತ್ತರವಾಗಿರುತ್ತಿತ್ತು. ಆದುದರಿಂದ ಸಮಿತ್ತಿನಷ್ಟು ಉದ್ದದ ದೂರ್ವೆಗಳನ್ನು ಅರ್ಪಿಸುತ್ತಿದ್ದರು. ಮೂರ್ತಿಯೇ ಸಮಿತ್ತುಗಳ ಆಕಾರದಷ್ಟು ಇದ್ದರೆ ಚಿಕ್ಕ ಆಕಾರದ ದೂರ್ವೆಗಳನ್ನು ಅರ್ಪಿಸಬೇಕು; ಮತ್ತು ಮೂರ್ತಿಯು ತುಂಬಾ ದೊಡ್ಡದಾಗಿದ್ದರೂ ಸಮಿತ್ತಿನ ಆಕಾರದ ದೂರ್ವೆಗಳನ್ನೇ ಅರ್ಪಿಸಬೇಕು. ಸಮಿತ್ತುಗಳನ್ನು ಒಟ್ಟಿಗೆ ಕಟ್ಟುವಂತೆ ದೂರ್ವೆಗಳನ್ನೂ ಒಟ್ಟಿಗೆ ಕಟ್ಟುತ್ತಾರೆ. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಅವುಗಳ ಸುಗಂಧವು ಹೆಚ್ಚು ಸಮಯ ಉಳಿಯುತ್ತದೆ. ಅವು ಹೆಚ್ಚು ಸಮಯ ತಾಜಾ ಆಗಿರಬೇಕೆಂದು ಅವುಗಳನ್ನು ನೀರಿನಲ್ಲಿ ಅದ್ದಿ ಅರ್ಪಿಸುತ್ತಾರೆ. ಇವುಗಳಿಂದ ಗಣಪತಿಯ ಪವಿತ್ರಕಗಳು ಹೆಚ್ಚು ಕಾಲ ಮೂರ್ತಿಯಲ್ಲಿ ಉಳಿಯುತ್ತವೆ.

ದೂರ್ವೆಗಳ ಸಂಖ್ಯೆ ಎಷ್ಟಿರಬೇಕು ?
ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ. ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ ಅರ್ಪಿಸುತ್ತಾರೆ. ಬೆಸ ಸಂಖ್ಯೆಗಳಿಂದ ಮೂರ್ತಿಯಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಗಣಪತಿಗೆ ವಿಶೇಷವಾಗಿ 21 ದೂರ್ವೆಗಳನ್ನು ಅರ್ಪಿಸುತ್ತಾರೆ. 21 ಈ ಸಂಖ್ಯೆಯು ಸಂಖ್ಯಾಶಾಸ್ತ್ರಕ್ಕನುಸಾರ 2+1=3 ಹೀಗೆ ಆಗಿದೆ. ಶ್ರೀ ಗಣಪತಿಯು ‘3’ ಈ ಸಂಖ್ಯೆಗೆ ಸಂಬಂಧಿಸಿದ್ದಾನೆ. ‘3’ ಈ ಸಂಖ್ಯೆಯು ಕರ್ತ, ಧರ್ತದೊಂದಿಗೆ ಹರ್ತವೂ ಆಗಿರುವುದರಿಂದ ಈ ಶಕ್ತಿಯಿಂದ 360 ಲಹರಿಗಳನ್ನು ನಾಶ ಮಾಡಲು ಸಾಧ್ಯವಾಗುತ್ತದೆ. ಸಮ ಸಂಖ್ಯೆಗಳಲ್ಲಿ ದೂರ್ವೆಗಳನ್ನು ಅರ್ಪಿಸಿದರೆ 360 ಲಹರಿಗಳು ಹೆಚ್ಚಿಗೆ ಆಕರ್ಷಿತವಾಗುತ್ತವೆ ಮತ್ತು ನಂತರ 108 ಲಹರಿಗಳೂ ಆಕರ್ಷಿತವಾಗುತ್ತವೆ.

ಕತಾರ್‌ನಲ್ಲಿ ಕನ್ನಡಿಗ ಶಿಕ್ಷಕರಿಗೆ ಸನ್ಮಾನ ಹಾಗೂ ಶಿಕ್ಷಕರ ದಿನಾಚರಣೆ

Hot this week

ಸೆ.15 ರಂದು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’

ಬೆಂಗಳೂರು: ಕರ್ನಾಟಕ ಸರ್ಕಾರದ(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನ...

15 ವಾರಗಳ ಜೂ ಕ್ಲಬ್ ಆಯೋಜನೆ

ಬೆಂಗಳೂರು: ಬನ್ನೇರುಘಟ್ಟ(Bannerghatta) ಜೈವಿಕ ಉದ್ಯಾನವನದಲ್ಲಿ ಪ್ರಕೃತಿ, ವನ್ಯಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು...

ತಂದೆ ಮಕ್ಕಳ ಬಿಜೆಪಿ ಪಕ್ಷಕ್ಕೆ ರಾಜೀನಾಮೆ: ಅಲ್ಪ ಸಂಖ್ಯಾತರು, ಒಬಿಸಿಗಳಿಗೆ ಕಮಲ ಪಕ್ಷದಲ್ಲಿ ನೆಲೆ ಇಲ್ಲ – ನೆ.ಲ. ನರೇಂದ್ರಬಾಬು

*ಸೆ.13 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌...

ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ ! – ಸನಾತನ ಸಂಸ್ಥೆ

ಗಣೇಶೋತ್ಸವದ(Ganesha Festival) ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ...

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

Topics

ಸೆ.15 ರಂದು ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’

ಬೆಂಗಳೂರು: ಕರ್ನಾಟಕ ಸರ್ಕಾರದ(Karnataka Government) ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರಿನ...

15 ವಾರಗಳ ಜೂ ಕ್ಲಬ್ ಆಯೋಜನೆ

ಬೆಂಗಳೂರು: ಬನ್ನೇರುಘಟ್ಟ(Bannerghatta) ಜೈವಿಕ ಉದ್ಯಾನವನದಲ್ಲಿ ಪ್ರಕೃತಿ, ವನ್ಯಜೀವಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು...

ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ ! – ಸನಾತನ ಸಂಸ್ಥೆ

ಗಣೇಶೋತ್ಸವದ(Ganesha Festival) ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ...

‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ದಶಕದ ಸಂಭ್ರಮ

ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ...

“ಪ್ರೋಷ್ಟಪದಿ ಭಾಗವತ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ (Raghavendra Seva Samithi)...

ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶೋತ್ಸವ

ಬೆಂಗಳೂರು : ನಾಗರಬಾವಿ (Nagarabhavi) ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ (Canara Bank...

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆ: 9 ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ (Parappana Agrahara) ಠಾಣೆಯಲ್ಲಿ (Station) 13/01/2026 ರಂದು ಬೆಂಗಳೂರು...

Related Articles