ಲಿಂಗಸುಗೂರು (ರಾಯಚೂರು ಜಿಲ್ಲೆ): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್(CM D K Shiva Kumar) ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟರಿಂದ, ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರ(Corrupt) ನಡೆಯುತ್ತಿರುವ ಸರ್ಕಾರ. ಈ ಸರ್ಕಾರ ತೊಲಗುವವರೆಗೆ ಬಿಜೆಪಿ ಹೋರಾಟ ನಿಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y.Vijayendra) ಅವರು ತಿಳಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ನೀಡಿದರೆ ಬಿಜೆಪಿ ಹೋರಾಟ ನಿಲ್ಲಿಸುತ್ತದೆ ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಬಿಜೆಪಿ ಹೋರಾಟ ನಿಲ್ಲದು. ಈ ಸರ್ಕಾರ ಮನೆಗೆ ಹೋದ ಮೇಲೆಯೇ ಬಿಜೆಪಿ ವಿಶ್ರಮಿಸಲಿದೆ ಎಂದು ಹೇಳಿದರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಚಾರವಾಗಿರುವ ಪೂರ್ತಿ ಹಣ ವಾಪಸ್ ನಿಗಮಕ್ಕೆ ಬಂದ ನಂತರ, ಎಸ್‍ಸಿಟಿ/ಟಿಎಸ್‍ಪಿ ಹಣ ವಾಪಸ್ ದಲಿತರ ಕಲ್ಯಾಣಕ್ಕೆ ವಾಪಸ್ ಬಂದ ನಂತರ, ರಾಜ್ಯದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಕ್ಕೆ ನ್ಯಾಯ ಸಿಗುವವರೆಗೆ, ಅನ್ನದಾತರಿಗೆ ನ್ಯಾಯ ಸಿಗುವವರೆಗೆ ಬಿಜೆಪಿ ನಿರಂತರವಾಗಿ ಹೋರಾಟ ಮಾಡಲಿದೆ ಎಂದು ನುಡಿದರು.
ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ನಂತರವೂ ಬಿಜೆಪಿ ಯಾಕೆ ಪಾದಯಾತ್ರೆ ಮಾಡುತ್ತದೆ ಎಂದು ಡಿಕೆಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ, ಬಡವರ, ದಲಿತರ, ಯುವಕರ, ಮಹಿಳೆಯರ ವಿರೋಧಿ. ಇಂತಹ ಭ್ರಷ್ಟ ಸರ್ಕಾರ ಕಿತ್ತೊಗೆಯಲು ನಾವು ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ಸದನದಿಂದ ಓಡಿ ಹೋದ ಮುಖ್ಯಮಂತ್ರಿ…
ನಾವು ಹೋರಾಟ ಮಾಡುತ್ತೇವೆ ಎಂದು ನಾಗೇಂದ್ರ ಅವರ ರಾಜೀನಾಮೆಯನ್ನು ಡಿಕೆಶಿ ಅವಸರವಾಗಿ ಪಡೆದರು. ಸದನದಲ್ಲಿ ನಾವು ಆಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಪ್ರಕಟ ಮಾಡಿದ್ದೇ ತಡ ನಾಗೇಂದ್ರ ರಾಜೀನಾಮೆ ಪಡೆದರು. ಸದನದಿಂದ ಸಿಎಂ ಓಡಿ ಪಲಾಯನ ಮಾಡಿದರು ಎಂದು ಗೇಲಿ ಮಾಡಿದರು.
ತಮ್ಮದು ದಲಿತರ ಪರ ಸರ್ಕಾರ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ದಲಿತರ ಹಣವನ್ನೇ ನುಂಗಿ ನೀರು ಕುಡಿದರು. ಆಗ ಅವರಿಗೆ ದಲಿತರ ಪರವಾದ ಕಾಳಜಿ ಎಲ್ಲಿ ಹೋಗಿತ್ತು. ನಾವು ಮಾತ್ರ ನಾಗೇಂದ್ರ ರಾಜೀನಾಮೆಗೆ ಹೋರಾಟ ಮಾಡಿದರೆ ದಲಿತ ವಿರೋಧಿಗಳು ಎಂದು ಹಣೆಪಟ್ಟಿ ಹಾಕುತ್ತಾರೆ. ಇಂತಹ ನಾಟಕ ಆಡುವವರನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ. ಇಂತಹ ಮೊಸಳೆ ಕಣ್ಣೀರಿಗೆ ಕಾಂಗ್ರೆಸ್ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಸಿದರು.
ನಾಗೇಂದ್ರ ರಾಜೀನಾಮೆ ಮೊದಲ ಜಯ…
ದಲಿತರ ಪರವಾಗಿ ಇದ್ದೇವೆ ಎಂದು ಸುಳ್ಳು ಸುಳ್ಳಾಗಿ ಕಾಂಗ್ರೆಸ್ ಸರ್ಕಾರ ಸದಾ ನಾಟಕ ಮಾಡಿಕೊಂಡು ಬರುತ್ತಿದೆ. ಇವರ ಬಣ್ಣವನ್ನು ಬಯಲು ಮಾಡುವವರೆಗೆ ನಾವು ಬಿಡುವುದಿಲ್ಲ. ಈ ಭ್ರಷ್ಟ ಸರ್ಕಾರವನ್ನು ಓಡಿಸಲು ಜಿಲ್ಲಾ ಕೇಂದ್ರಗಳಲ್ಲಿ ಆಹೋರಾತ್ರಿ ಧರಣಿ ಮಾಡಿದೆವು. ಇದಕ್ಕೆ ಹೆದರಿದ ಸರ್ಕಾರ ನಾಗೇಂದ್ರ ರಾಜೀನಾಮೆ ಪಡೆದರು. ನಮ್ಮ ಹೋರಾಟಕ್ಕೆ ಮೊದಲ ಜಯ ಸಿಕ್ಕಿತು. ನಮ್ಮೊಂದಿಗೆ ಜೆಡಿಎಸ್ ಸಹ ಬೆಂಬಲ ನೀಡಿತು. ಇಂತಹ ಹೋರಾಟ ಮಾಡಿದ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಸಚಿವರನ್ನಾಗಿ ಮಾಡಿದ್ದೇಕೆ?
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದು ಸಚಿವರಾಗಿದ್ದ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರೂ ಮತ್ತೆ ಯಾಕೆ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಇದನ್ನು ಕೇಳಿದರೆ ಬಿಜೆಪಿಯವರು ದಲಿತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ. ಓಟ್ ಚೋರಿ ಬಗ್ಗೆ ಮಾತನಾಡಿದ ಕೆ.ಎನ್.ರಾಜಣ್ಣ ಅವರ ರಾಜೀನಾಮೆ ಪಡೆದಾಗ ಕಾಂಗ್ರೆಸ್‍ಗೆ ದಲಿತ ಪರ ಕಾಳಜಿ ಇರಲಿಲ್ಲ. ಈಗ ಮಾತ್ರ ದಲಿತರ ಪರ ಪ್ರೀತಿ ಉಕ್ಕಿ ಬರುತ್ತಿದೆಯೇ ಎಂದು ಪ್ರಶ್ನಿಸಿದರು.
ನಾಗೇಂದ್ರ ರಾಜೀನಾಮೆ ಪಡೆದರೆ ಬಿಜೆಪಿಯವರು ಹೋರಾಟ ಬಿಟ್ಟು ಮನೆಗೆ ಹೋಗ್ತಾರೆ ಎಂದು ಡಿಕೆಶಿ ತಿಳಿದಿದ್ದರು. ಆದರೆ ನಾವು ಹಾಗೆ ಮಾಡಲಿಲ್ಲ. ನಾವು ಕಾಂಗ್ರೆಸ್ ರೀತಿ ನಾಟಕ ಮಾಡಲು ಪಾದಯಾತ್ರೆ ಮಾಡ್ತ ಇಲ್ಲ. ವಾಲ್ಮೀಕಿ ನಿಗಮದ ಹಣ ಪೂರ್ತಿ ವಾಪಸ್ ಬಂದು ದಲಿತರ ಪರವಾದ ಕಲ್ಯಾಣ ಯೋಜನೆಗೆ ಸದ್ವಿನಿಯೋಗ ಆಗುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದರು.
ಮೀಸಲಾತಿಯಲ್ಲೂ ಅನ್ಯಾಯ..
ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿಯಲ್ಲೂ ಅನ್ಯಾಯ ಮಾಡಿತು. ಬಸವರಾಜ ಬೊಮ್ಮಾಯಿ ಅವರು ಇದ್ದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿಗಳಿಗೆ ಜಾರಿ ಮಾಡಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರಿ ಸರಿಯಾಗಿ ಅನುμÁ್ಠನ ಮಾಡಲಿಲ್ಲ. ಲಜ್ಜಗೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಮೀಸಲಾತಿಗೆ ಮಣ್ಣು ಹಾಕಿತು ಎಂದು ದೂರಿದರು.
ಎಸ್‍ಸಿಟಿ/ಟಿಎಸ್‍ಪಿ ಹಣ ಬರಲಿ.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರಿಗೆ ಮೀಸಲಾದ ಎಸ್‍ಸಿಪಿ/ಟಿಎಸ್‍ಪಿ ಹಣವನ್ನೂ ನುಂಗಿದರು. 50 ಸಾವಿರ ಕೋಟಿಯನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಿದರು. ಈ ಹಣ ವಾಪಸ್ ಬರುವವರೆಗೆ ನಮ್ಮ ಹೋರಾಟ ನಡೆಯಲಿದೆ. ಡಿಕೆಶಿ ಅವರೇ ದಲಿತರ ಬಗ್ಗೆ ಕಾಳಜಿ ಇದೆ ಎಂದು ಮಾತನಾಡುವ ನೀವು ದಲಿತರ ಹಣವನ್ನೇ ಏಕೆ ಬಳಸುತ್ತೀರಿ, ಭ್ರμÁ್ಟಚಾರ ಮಾಡಿ ಲಪಟಾಯಿಸುತ್ತೀರಿ ಎಂದು ಪ್ರಶ್ನಿಸಿದರು.
ದಲಿತರ ಮೇಲಿನ ದೌರ್ಜನ್ಯ ಕಾಣುವುದಿಲ್ಲ..
ದಲಿತ ಪರ ಎಂದು ಕೊಚ್ಚಿಕೊಳ್ಳುವ ಈ ಸರ್ಕಾರಕ್ಕೆ ಕೊಪ್ಪಳದಲ್ಲಿ ಗವಿಸಿದ್ದಪ್ಪ ಎಂಬ ವಾಲ್ಮೀಕಿ ಸಮುದಾಯದ ಯುವಕನ ಬರ್ಬರ ಹತ್ಯೆ ನಡೆದರೆ ಅದು ಗಮನಕ್ಕೆ ಬರುವುದಿಲ್ಲ. ಆತನ ಹತ್ಯೆ ಆದ ಕೆಲವೇ ಗಂಟೆಗಳಲ್ಲಿ ಫೆÇೀಕ್ಸೋ ಕೇಸ್ ಹಾಕುತ್ತೀರಿ. ಇದಕ್ಕೆ ನಿಮಗೆ ನಾಚಿಕೆ ಆಗಬೇಕು ಎಂದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬದ ದುಃಖದಲ್ಲಿ ಭಾಗಿಯಾಗಲಿಲ್ಲ. ಅವರ ಮಗನಿಗೆ ವಾಚ್ ಮನ್ ಕೆಲಸ ಕೊಟ್ಟು ನಾಟಕ ಮಾಡಿದ್ರಿ ಎಂದು ಆರೋಪಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆಯ ವಿಪಕ್ಷ ನಾಯಕರಾದ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು ಮತ್ತು ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟೀಯ ಉಪಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಎಂ. ನಾಗರಾಜ, ಕರ್ನಾಟಕ ರಾಜ್ಯ ಸಹ ಉಸ್ತುವಾರಿಗಳಾದ ಪಿ. ಸುಧಾಕರ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಸಂಸದರಾದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ, ಮಾನಪ್ಪ ವಜ್ಜಲ್, ಡಾ. ಎಸ್. ಶಿವರಾಜ್ ಪಾಟೀಲ್, ರಾಜ್ಯ ಉಪಾಧ್ಯಕ್ಷರಾದ ರಾಜುಗೌಡ ನಾಯಕ, ಮಾಜಿ ಸಚಿವರಾದ ಶಿವನಗೌಡ ನಾಯಕ, ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.



