ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ), ಹೂವಿನಹಡಗಲಿ (Hoovina Hadagali) ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಮೈಸೂರಿನ (Mysore) ಪುರಭವನದಲ್ಲಿ (Townhall) ದಿ. 30-8-2026 ಭಾನುವಾರ ಬೆ. 10ರಿಂದ ಅಭಿನಯ ಪೂರ್ವಕ ಪೌರಾಣಿಕ ನಾಟಕಗಳ ಗೀತಗಾಯನ, ನಾಟಕ ಮತ್ತು ರಂಗದೃಶ್ಯಗಳ ರಂಗಕಲರವ ಕಾರ್ಯಕ್ರಮ ಏರ್ಪಡಿಸಿದೆ.

ನಟರು, ನಾಟಕಕಾರರು ಎಸ್.ಎಸ್. ಪುಟ್ಟೇಗೌಡರು ಕಾರ್ಯಕ್ರಮ ಸಂಘಟಕರು. ಡಾ.ನಾಗರಾಜ್ ವಿ.ಭೈರಿ, ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್,ಮೈಸೂರು ಇವರ ಅಧ್ಯಕ್ಷತೆಯಲ್ಲಿ ಹೆಚ್.ಎಸ್.ಗೋವಿಂದಗೌಡರು, ನಿವೃತ್ತ ಉಪ ಆಯುಕ್ತರು ಕಾರ್ಯಕ್ರಮ ಉದ್ಘಾಟಿಸುವರು. ಡಾ. ಸುದರ್ಶನ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವರಾಜು, ನಿವೃತ್ತ ಎಸಿಎಫ್, ಮಧುನಾಯಕ್ ಲಮಾಣಿ, ಅಧ್ಯಕ್ಷರು ಕ.ರಾ.ಬ. ಸಂಘ ಹೂವಿನಹಡಗಲಿ, ಗೌ. ಅಧ್ಯಕ್ಷರು ಸಾಹಿತಿಗಳು ಗೊರೂರು ಅನಂತರಾಜು ಹಾಸನ. ವಿಜಯಕುಮಾರ್ ಸಿ.ಆರ್. ಪ್ರಧಾನ ಕಾರ್ಯದರ್ಶಿ ಚಿಕ್ಕಮಗಳೂರು, ಬಿ.ಎಂ.ರಾಮಚAದ್ರು ರಾಜೇಶ್ವರಿ ವಸ್ತಾçಲಂಕಾರ, ಗಣೇಶ್ ಅಮೀನಗಡ ಸಾಹಿತಿಗಳು, ವಿ.ಕಿರಗಸೂರು ರಾಜಪ್ಪ ರಂಗ ನಿರ್ದೇಶಕರು, ಡಾ.ಶಿವಬಸಪ್ಪ, ನಿವೃತ್ತ ಡಿವೈಎಸ್‌ಪಿ. ಮರಿಗೌಡರು ಅರಣ್ಯ ಇಲಾಖೆ, ಲಾರಿ ಸೋಮಣ್ಣ, ಕಲಾವಿದರು ಎಲ್.ಎಸ್.ಮಹದೇವಸ್ವಾಮಿ, ರಾಮಕೃಷ್ಣೇಗೌಡರು, ಆರ್.ಎಸ್.ಮಲ್ಲೇಗೌಡರು ಹುಣಸೂರು, ಹೆಚ್.ಜಿ.ಶಿವಕುಮಾರ್, ನಿರ್ದೇಶಕರು ಜ್ಞಾನೇಶ್ ಗುಡ್ಡಪ್ಪ, ನಾಗೇಂದ್ರ ಪ್ರಸಾಧ್, ಬೀರಿಹುಂಡಿ ಗೋವಿಂದರಾಜ್, ಲೋಕೇಶ್ ಕೂರ್ಗಳ್ಳಿ, ಕಲಾವಿದರು ಚಿನಕುರಳಿ ಸಿದ್ಧಲಿಂಗೇಗೌಡರು, ಮಂಜುನಾಥ್, ಮಹದೇವ್, ಪುಟ್ಟಣ್ಣ ದುದ್ದಗೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಬೆ.10ಕ್ಕೆ ರಂಗಗೀತೆ ಗಾಯನ, ನಂತರ ಮಹಿಳಾ ಕಲಾವಿದರಿಂದ ಎಸ್.ಎಸ್.ಪುಟ್ಟೇಗೌಡ ರಚನೆ ನಿರ್ದೇಶನ ಮಹಾತ್ಮ ಕನಕದಾಸ ನಾಟಕ, ಹೆಚ್.ಎಸ್.ಗೋವಿಂದಗೌಡರಿAದ ಏಕವ್ಯಕ್ತಿ ಪ್ರದರ್ಶನ. ಸೋಮವಾರಪೇಟೆ ತಾ. ಕೋಣಿಗನಹಳ್ಳಿ ಗ್ರಾಮದ ಕಲಾವಿದರು ಹರಿಭಕ್ತ ಮಹಾಂಧಾತ ನಾಟಕ ದೃಶ್ಯಾವಳಿ ಪ್ರದರ್ಶಿಸುವರು. ಮಹದೇವಪ್ಪ ನಿರ್ಮಲ ಅವರು ಕುರುಕ್ಷೇತ್ರ ನಾಟಕದ ಗಂಗಾತೀರ ದೃಶ್ಯ, ಅನಂತು ತಂಡ ರಾಮಾಯಣ ನಾಟಕದ ದಶರಥ ಕೈಕೆ ಅಂತ:ಪುರ ದೃಶ್ಯದಲ್ಲಿ ಅಭಿನಯಿಸುವರು.

