ಸಹೋದರ – ಸಹೋದರಿಯ ಉತ್ತಮ ಸಂಬಂಧ ನಿರ್ಮಾಣ ಮಾಡುವ ರಕ್ಷಾ ಬಂಧನ

ಪರಸ್ಪರ ನಿರಪೇಕ್ಷ ಪ್ರೀತಿ, ಕಾಳಜಿ, ಜವಾಬ್ದಾರಿ ನಿರ್ಮಾಣ ಮಾಡುವ ರಕ್ಷಾ ಬಂಧನ
“ರಕ್ಷಾಬಂಧನದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ”
ಸನಾತನ (Sanathana) ಧರ್ಮದಲ್ಲಿ ರಕ್ಷಾಬಂಧನ (Raksha Bandhan) ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2026 ರಲ್ಲಿ ರಕ್ಷಾಬಂಧನವನ್ನು ಶುಕ್ರವಾರ, ಆಗಸ್ಟ್ 28 ರಂದು ಆಚರಿಸಲಾಗುವುದು. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ರಕ್ಷಾಬಂಧನದಿಂದ ಸಹೋದರ-ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗುವುದರೊಂದಿಗೆ ಅವರ ನಡುವೆ ಇರುವ ಕೊಡು-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ. ಈ ಹಬ್ಬವು ಇಬ್ಬರಿಗೂ ಈಶ್ವರ (Lord Eshwar) ನತ್ತ ಪ್ರಯಾಣಿಸುವ ಅವಕಾಶ ಒದಗಿಸುತ್ತದೆ.
ರಕ್ಷಾ ಬಂಧನದ ಇತಿಹಾಸ
ಪ್ರಾಚೀನ ಕಾಲದಲ್ಲಿ ಯಮುನಾ ದೇವತೆಯು ಯಮನ ಮಣಿಕಟ್ಟಿನ ಸುತ್ತಲೂ ದಾರವನ್ನು ಕಟ್ಟಿದಳು ಮತ್ತು ಆಗ ಯಮದೇವರು ಅವಳನ್ನು ಸಾವಿನಿಂದ ರಕ್ಷಿಸುವ ಭರವಸೆ ನೀಡಿದನು.
ಮಕರ ಸಂಕ್ರಾಂತಿಯಂದು ಕೃಷ್ಣನು ಕಬ್ಬು ಅರೆಯುವಾಗ ತನ್ನ ಕಿರುಬೆರಳನ್ನು ಕತ್ತರಿಸುತ್ತಾನೆ. ಅವನ ರಾಣಿ ರುಕ್ಮಿಣಿ ತಕ್ಷಣವೇ ಬ್ಯಾಂಡೇಜ್‌ಗಳನ್ನು ಪಡೆಯಲು ತನ್ನ ಸಹಾಯಕಳನ್ನು ಕಳುಹಿಸಿದಳು. ಅಷ್ಟರಲ್ಲಿ ಇಡೀ ಘಟನೆಯನ್ನು ನೋಡುತ್ತಿದ್ದ ದ್ರೌಪದಿ ತನ್ನ ಸೀರೆಯನ್ನು ಸ್ವಲ್ಪ ಕತ್ತರಿಸಿ ತನ್ನ ಬೆರಳಿನಿಂದ ರಕ್ತವನ್ನು ನಿಲ್ಲಿಸಿದಳು. ಪ್ರತಿಯಾಗಿ, ಅಗತ್ಯವಿದ್ದಾಗ ಕೃಷ್ಣ ಅವಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದನು. ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ಬಂದು ಅವಳ ರಕ್ಷಣೆ ಮಾಡಿದನು.
ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಪಾತಾಳದಿಂದ ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.
ಇಂದ್ರ ಮತ್ತು ದೈತ್ಯರ ನಡುವೆ ೧೨ ವರ್ಷಗಳಿಂದ ಘೋರ ಯುದ್ಧ ನಡೆದಿತ್ತು. ದೈತ್ಯರು ಗೆಲ್ಲುತ್ತಿದ್ದರು, ಇಂದ್ರನ ಶಕ್ತಿ ಕುಸಿಯುತ್ತಿತ್ತು. ಇಂದ್ರನು ಯುದ್ಧದಿಂದ ಹಿಂದೆ ಸರಿದು ತನ್ನ ಜೀವ ಉಳಿಸಿಕೊಳ್ಳುವ ವಿಚಾರ ಮಾಡುತ್ತಿದ್ದನು. ಇದನ್ನು ನೋಡಿದ ಇಂದ್ರಾಣಿಯು ಗುರು ಬೃಹಸ್ಪತಿಗೆ ಶರಣಾದಳು. ಗುರುಗಳು ಇಂದ್ರಾಣಿಯನ್ನು ಉದ್ದೇಶಿಸಿ, “ನೀನು ನಿನ್ನ ಪಾತಿವ್ರತ್ಯದ ಬಲದ ಮೇಲೆ ಇಂದ್ರನು ವಿಜಯಿಯಾಗಿ ಸುರಕ್ಷಿತನಾಗಿ ಬರಲಿ ಎಂಬ ಸಂಕಲ್ಪ ಮಾಡಿ, ಇಂದ್ರನ ಬಲಗೈಯ ಮಣಿಕಟ್ಟಿಗೆ ಒಂದು ದಾರ ಕಟ್ಟಿದರೆ ಇಂದ್ರನು ಈ ಯುದ್ಧವನ್ನು ಖಂಡಿತವಾಗಿಯೂ ಗೆಲ್ಲುವನು” ಎಂದು ಹೇಳಿದರು. ಇಂದ್ರಾಣಿಯು ಇದೇ ರೀತಿ ಮಾಡಿದಳು ಮತ್ತು ಇಂದ್ರನು ದೈತ್ಯರ ಮೇಲೆ ಜಯ ಸಾಧಿಸಿದನು.
ಪ್ರಾಚೀನ ಕಾಲದ ರಾಖಿ : ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಗಂಟು ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ. ಇದನ್ನು ರೇಷ್ಮೆಯ ದಾರದಿಂದ ಕಟ್ಟುತ್ತಿದ್ದರು.ರಕ್ಷಾಬಂಧನವನ್ನು ಆಚರಸುವ ಯೋಗ್ಯ ಪದ್ದತಿ !
* ಈ ದಿನ ಸಹೋದರನು ಸಹೋದರಿಯ ಮನೆಗೆ ಹೋಗಬೇಕು.
* ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗಿ, ನಿರಪೇಕ್ಷವಾಗಿ ರಾಖಿ ಕಟ್ಟಬೇಕು
* ಸಹೋದರಿಯು ಸಹೋದರನಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು.
* ಸಹೋದರನು ಸಹೋದರಿಗೆ ಸಾತ್ತ್ವಿಕ ಉಡುಗೊರೆಯನ್ನು ನೀಡಬೇಕು.
* ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.
* ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.
* ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಇಬ್ಬರೂ ‘ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ’, ಎಂದು ಈಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.
* ರಕ್ಷಾಬಂಧನದಂದು ರಾಖಿ ಕಟ್ಟಿಸಿಕೊಂಡು ಸಹೋದರನು ಸಹೋದರಿಗೆ ಏನಾದರೂ ಉಡುಗೊರೆ ನೀಡುತ್ತಾನೆ. ಇದರಿಂದ ಇಬ್ಬರಿಗೂ ಪರಸ್ಪರರ ನೆನಪಾಗುತ್ತದೆ.

ಈ ರೀತಿಯಲ್ಲಿ ರಕ್ಷಾ ಬಂಧನವನ್ನು ಆಚರಣೆಯನ್ನು ಮಾಡಬೇಡಿ
* ಸಹೋದರನಿಗೆ ಅಸಾತ್ತ್ವಿಕ, ಚೈನಾ ನಿರ್ಮಿತ ಅಥವಾ ದೇವತೆಗಳ ಚಿತ್ರವಿರುವ ರಾಖಿ ಕಟ್ಟಬೇಡಿ. ದೇವರ ಚಿತ್ರ ಇರುವ ರಾಖಿಯು ಉಪಯೋಗಿಸಿದ ನಂತರ ಬೀಸಾಡಲಾಗುತ್ತದೆ.
* ಸಹೋದರಿಯು ‘ತನಗೆ ಇದು ಬೇಕು, ಅದು ಕೊಡಿಸಬೇಕು’ ಎಂಬ ಅಪೇಕ್ಷೆ ಇಟ್ಟುಕೊಳ್ಳಬಾರದು.
* ಅಶುಭ ಅಥವಾ ಭದ್ರಾಕಾಲದಲ್ಲಿ ರಾಖಿ ಕಟ್ಟಬೇಡಿ.
* ಶನಿಯಂತೆಯೇ ಶನಿಯ ಸಹೋದರಿಯಾದ ಭದ್ರೆಯ ದೃಷ್ಟಿಯಿಂದ ಹಾನಿಯುಂಟಾಗುತ್ತದೆ. ಭದ್ರೆಯ ಕುದೃಷ್ಟಿಯಿಂದ ಕುಲಕ್ಕೆ ಹಾನಿಯುಂಟಾಗುವ ಸಾಧ್ಯತೆಯಿದೆ. ಆದುದರಿಂದ ಭದ್ರಾಕಾಲದಲ್ಲಿ ರಾಖಿಯನ್ನು ಕಟ್ಟಬಾರದು. ರಾವಣನು ಭದ್ರಾಕಾಲದಲ್ಲಿ ಸೂರ್ಪನಖಿಯಿಂದ ರಾಖಿ ಕಟ್ಟಿಸಿಕೊಂಡನು, ಆದುದರಿಂದ ಅದೇ ವರ್ಷ ಅವನ ಸಂಪೂರ್ಣ ಕುಲದ ನಾಶವಾಯಿತು ಎಂಬ ನಂಬಿಕೆಯಿದೆ.

Hot this week

ನೃತ್ಯ ಭಾರತೀಯ ಸಂಸ್ಕೃತಿಯ ಜೀವಂತ ಅಭಿವ್ಯಕ್ತಿ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಬೆಂಗಳೂರು: ಭರತನಾಟ್ಯವು (Bharathanatyam) ಕೇವಲ ಮನರಂಜನೆಯ (Entertainment) ಕಲೆಯಲ್ಲ, ಅದು ಭಾರತೀಯ...

ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ ಸಂವತ್ಸರ: ಪರಭಾವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ಜಕ್ಕೂರಿನ ರೈತ ಸಂತೆ ಮಾರ್ಗದಲ್ಲಿ ಮೆಗಾ ಸ್ವಚ್ಛತಾ ಅಭಿಯಾನ – 800ಕ್ಕೂ ಅಧಿಕ ವಿದ್ಯಾರ್ಥಿಗಳು

ಸ್ವಚ್ಛತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ...

ಗ್ರಾಮೀಣ ಜಲ ಆಸ್ತಿ ನಿರ್ವಹಣೆ: ಮೊಬೈಲ್, ವೆಬ್ ಆಪ್ ಲೋಕಾರ್ಪಣೆ

 ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ (Duplicate...

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ

ನೇಪಾಳದಲ್ಲಿ (Nepal) ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ (Flas Floods)ದಿಢೀರ್ ಪ್ರವಾಹ...

Topics

ನೃತ್ಯ ಭಾರತೀಯ ಸಂಸ್ಕೃತಿಯ ಜೀವಂತ ಅಭಿವ್ಯಕ್ತಿ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಬೆಂಗಳೂರು: ಭರತನಾಟ್ಯವು (Bharathanatyam) ಕೇವಲ ಮನರಂಜನೆಯ (Entertainment) ಕಲೆಯಲ್ಲ, ಅದು ಭಾರತೀಯ...

ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ ಸಂವತ್ಸರ: ಪರಭಾವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ಜಕ್ಕೂರಿನ ರೈತ ಸಂತೆ ಮಾರ್ಗದಲ್ಲಿ ಮೆಗಾ ಸ್ವಚ್ಛತಾ ಅಭಿಯಾನ – 800ಕ್ಕೂ ಅಧಿಕ ವಿದ್ಯಾರ್ಥಿಗಳು

ಸ್ವಚ್ಛತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ...

ಗ್ರಾಮೀಣ ಜಲ ಆಸ್ತಿ ನಿರ್ವಹಣೆ: ಮೊಬೈಲ್, ವೆಬ್ ಆಪ್ ಲೋಕಾರ್ಪಣೆ

 ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ (Duplicate...

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ

ನೇಪಾಳದಲ್ಲಿ (Nepal) ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ (Flas Floods)ದಿಢೀರ್ ಪ್ರವಾಹ...

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 27 (ಕರ್ನಾಟಕ ವಾರ್ತೆ): ಅಲ್ಪಸಂಖ‍್ಯಾಂತರ ಅಭಿವೃದ್ದಿ...

ನಿತ್ಯ ಪಂಚಾಂಗ 28.08.2026 FRIDAY ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 28.08.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ:ದಕ್ಷಿಣಾಯನ AYANA: DAKSHINAYANA. ಋತು:...

ಕರ್ನಾಟಕ ರಾಜ್ಯ ಬರಹಗಾರರ ಸಂಘ: ಮೈಸೂರಿನಲ್ಲಿ ರಂಗ ಕಲರವ

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ), ಹೂವಿನಹಡಗಲಿ (Hoovina Hadagali) ವತಿಯಿಂದ...

Related Articles