ಎಥೆನಾಲ್ ನೀತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ: ಜನಸಾಮಾನ್ಯರಿಗೆ ಬರೆ – ಡಾ. ಅನಂದ್ ಕುಮಾರ್

ತೈಲ ಕಂಪೆನಿಗಳು, ತೈಲ ಉದ್ಯಮಿಗಳ ಜೋಳಿಗೆ ತುಂಬಿಸಲು ಕೇಂದ್ರ ಸರ್ಕಾರ ಪೆಟ್ರೋಲಿಯಂನಲ್ಲಿ ಶೇ 20 ರಷ್ಟು ಎಥೆನಾಲ್ ಮಿಶ್ರಣ (Ethenol) ಮಾಡುತ್ತಿದೆ. ಇದರಿಂದ ಸಕ್ಕರೆ ಬೆಲೆ ಏರಿಕೆಯಾಗಿ, ಆಹಾರೋದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಐಸಿಸಿ(AICC) ಎಸ್.ಸಿ (SC ST Cell) ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ  ಮಹಾರಾಷ್ಟ್ರ ಉಸ್ತುವಾರಿ  ಡಾ. ಆನಂದ್ ಕುಮಾರ್ (Dr. Anand Kumar) ಎಚ್ಚರಿಸಿದ್ದಾರೆ.
ಎಥನಾಲ್ ನಿಂದ ವಾಹನೋದ್ಯಮ ಕುಸಿದು ಬಿದ್ದಿದ್ದು, ಇದರ ಕಹಿ ಸಾಮಾನ್ಯರ ಅಡುಗೆ ಮನೆ ಪ್ರವೇಶಿಸುವಂತಾಗಿದೆ. ಎಥೆನಾಲ್ ಗಾಗಿ ಸರ್ಕಾರ ಸಕ್ಕರೆ ಉತ್ಪಾದನೆಯನ್ನು ಬಲಿಕೊಡುತ್ತಿದೆ. ಸೂಕ್ತ ಮುಂದಾಲೋಚನೆ ಇಲ್ಲದೆ ಎಥೆನಾಲ್ ನೀತಿ ಜಾರಿಗೊಳಿಸಿದ್ದರಿಂದ ಬೆಲೆ ಏರಿಕೆಗೆಯಾಗಿದೆ. ಕಬ್ಬಿನಿಂದ ಎಥನಾಲ್ ಬಳಕೆ ಹೆಚ್ಚಿದಾಗ, ಮಾರುಕಟ್ಟೆಗೆ ಬರುವ ಸಕ್ಕರೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಸರ್ಕಾರ ಸೂಕ್ತ ಇಂಧನ ನೀತಿ ರೂಪಿಸದೇ, ಸಂಸತ್ತಿನಲ್ಲಿ ಚರ್ಚಿಸಿ ಅನುಮೋದನೆ ಪಡೆಯದೇ ಎಥೆನಾಲ್ ಮಿಶ್ರಣ ನೀತಿ ಜಾರಿಗೆ ತಂದು ಆಹಾರ ಭದ್ರತೆಯನ್ನು ಬಲಿಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಥೆನಾಲ್ ನಿಂದ ರೈತರಿಗೆ ಲಾಭವಾಗುತ್ತಿಲ್ಲ. ಕಾರ್ಖಾನೆ ಮಾಲೀಕರು, ತೈಲ ಮಾರಾಟ ಕಂಪೆನಿಗಳು ಸಾಮಾನ್ಯರನ್ನು ದೋಚುತ್ತಿವೆ. ದೇಶದ ವಾಹನಗಳ ಟ್ಯಾಂಕ್ ತುಂಬಿಸಲು ಎಥನಾಲ್ ಬೇಕು; ಆದರೆ ದೇಶದ ಕೋಟ್ಯಂತರ ಕುಟುಂಬಗಳ ಅಡುಗೆಮನೆಯ ಸಕ್ಕರೆ ಡಬ್ಬಿ ಖಾಲಿಯಾಗಬಾರದು ಎಂಬುದನ್ನು ಸರ್ಕಾರ ಮರೆಯಬಾರದು. ಬೆಲೆ ಏರಿಕೆಯ ಹೊರೆ ಮಧ್ಯಮ ವರ್ಗದ ಮೇಲೆ ಬೀಳುತ್ತಿದ್ದು, ಸಿಹಿತಿಂಡಿ ತಯಾರಕರು, ಬೇಕರಿಗಳು, ಹೋಟೆಲ್ಗಳು, ಕಾಫಿ, ತಿಂಡಿ, ಪಾನೀಯ ಉದ್ಯಮ—ಸಕ್ಕರೆಯನ್ನು ಬಳಸುವ ಪ್ರತಿಯೊಂದು ಕ್ಷೇತ್ರದ ಉತ್ಪಾದನಾ ವೆಚ್ಚದ ಮೇಲೂ ಬೆಲೆ ಏರಿಕೆ ಪರಿಣಾಮ ಬೀರುತ್ತದೆ. ಹಬ್ಬದ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಸರ್ಕಾರ ಬರೆ ಎಳೆದಿದೆ ಎಂದಿದ್ದಾರೆ.
ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ಇದು ಮತ್ತೊಂದು ಹೊರೆಯಾಗಿದ್ದು, ಸರ್ಕಾರದ ನೀತಿ ಅಡುಗೆಮನೆಯ ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸಿದೆ. ಎಥೆನಾಲ್ ವಿಚಾರದಲ್ಲಿ ಕಬ್ಬು ಬೆಳೆಗಾರರನ್ನು ಗ್ರಾಹಕರ ವಿರುದ್ಧ ನಿಲ್ಲಿಸುವುದು ತಪ್ಪು. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಕ್ಕರೆ ದೊರೆಯಬೇಕು. ರೈತನ ಹಿತ ಮತ್ತು ಗ್ರಾಹಕರ ಹಿತ ಪರಸ್ಪರ ಶತ್ರುಗಳಲ್ಲ. ಸರಿಯಾದ ನೀತಿ ಇದ್ದರೆ ಎರಡನ್ನೂ ರಕ್ಷಿಸಬಹುದು. ಎಥನಾಲ್ ಮಿಶ್ರಣದ ಗುರಿ ಹೆಚ್ಚಿಸುವ ಮೊದಲು ದೇಶದ ಸಕ್ಕರೆ ಅಗತ್ಯತೆಯನ್ನು ಸರ್ಕಾರ ಸರಿಯಾಗಿ ಮುಂದಾಲೋಚನೆ ಮಾಡಿಲ್ಲ. ಸಕ್ಕರೆ ಬೆಲೆ ಏರಿದಾಗ ಗ್ರಾಹಕರನ್ನು ರಕ್ಷಿಸಲು ಸರ್ಕಾರ ಶಾಶ್ವತ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಡಾ.  ಆನಂದ್ ಕುಮಾರ್ ಟೀಕಿಸಿದ್ದಾರೆ.
ಅಡುಗೆಮನೆಯನ್ನು ಪ್ರಯೋಗಾಲಯವನ್ನಾಗಿ ಮಾಡುವುದು ಸರಿಯಲ್ಲ. ದೇಶದ ಅಭಿವೃದ್ಧಿಯ ಅಂತಿಮ ಮಾನದಂಡ ಕಾರ್ಖಾನೆಗಳ ಉತ್ಪಾದನಾ ಅಂಕಿಅಂಶಗಳಲ್ಲ, ಸಾಮಾನ್ಯ ಜನರ ಬದುಕಿನ ಗುಣಮಟ್ಟದ ಮೇಲೆ ಅವಲಂಬಿತವಾಗಲಿದೆ. ಸರ್ಕಾರದ ನೀತಿಗೆ ಜನರ ಬದುಕು ಬಲಿಯಾಗಬಾರದು. ಇದೇ ನಿಜವಾದ ಜನಪರ ಆಡಳಿತದ ಪರೀಕ್ಷೆ. ಬೆಲೆ ಏರಿಕೆಯನ್ನು ಕೇವಲ “ಮಾರುಕಟ್ಟೆಯ ಸಹಜ ಏರಿಳಿತ” ಎಂದು ಕೈತೊಳೆದುಕೊಳ್ಳುವುದು ಜನರ ನೋವಿಗೆ ಮಾಡುವ ಅವಮಾನ. ಸಕ್ಕರೆ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿದ್ದ ದೇಶ ಹತ್ತು ವರ್ಷಗಳ ನಂತರ 10 ಲಕ್ಷ ಟನ್ ಸಕ್ಕರೆ ಆಮುದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲು ಸರ್ಕಾರವೇ ಕಾರಣ. ಬೆಲೆ ಏರುವ ಮುಂಚಿತವಾಗಿ ಪರಿಸ್ಥಿತಿಯನ್ನು ಅಂದಾಜಿಸಿ ಜನರನ್ನು ಬೆಲೆ ಆಘಾತದಿಂದ ರಕ್ಷಿಸುವುದು ಸರ್ಕಾರದ ನೀತಿಯಾಗಲಿದೆ. ಮಧ್ಯಮ ವರ್ಗದ ಜನ ಈಗಾಗಲೇ ಆಹಾರ, ಶಿಕ್ಷಣ, ಆರೋಗ್ಯ, ವಿದ್ಯುತ್, ಸಾರಿಗೆ ಸೇರಿದಂತೆ ಹಲವು ವೆಚ್ಚಗಳ ಒತ್ತಡದಲ್ಲಿದ್ದಾರೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.

Hot this week

ನೃತ್ಯ ಭಾರತೀಯ ಸಂಸ್ಕೃತಿಯ ಜೀವಂತ ಅಭಿವ್ಯಕ್ತಿ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಬೆಂಗಳೂರು: ಭರತನಾಟ್ಯವು (Bharathanatyam) ಕೇವಲ ಮನರಂಜನೆಯ (Entertainment) ಕಲೆಯಲ್ಲ, ಅದು ಭಾರತೀಯ...

ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ ಸಂವತ್ಸರ: ಪರಭಾವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ಜಕ್ಕೂರಿನ ರೈತ ಸಂತೆ ಮಾರ್ಗದಲ್ಲಿ ಮೆಗಾ ಸ್ವಚ್ಛತಾ ಅಭಿಯಾನ – 800ಕ್ಕೂ ಅಧಿಕ ವಿದ್ಯಾರ್ಥಿಗಳು

ಸ್ವಚ್ಛತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ...

ಗ್ರಾಮೀಣ ಜಲ ಆಸ್ತಿ ನಿರ್ವಹಣೆ: ಮೊಬೈಲ್, ವೆಬ್ ಆಪ್ ಲೋಕಾರ್ಪಣೆ

 ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ (Duplicate...

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ

ನೇಪಾಳದಲ್ಲಿ (Nepal) ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ (Flas Floods)ದಿಢೀರ್ ಪ್ರವಾಹ...

Topics

ನೃತ್ಯ ಭಾರತೀಯ ಸಂಸ್ಕೃತಿಯ ಜೀವಂತ ಅಭಿವ್ಯಕ್ತಿ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಬೆಂಗಳೂರು: ಭರತನಾಟ್ಯವು (Bharathanatyam) ಕೇವಲ ಮನರಂಜನೆಯ (Entertainment) ಕಲೆಯಲ್ಲ, ಅದು ಭಾರತೀಯ...

ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 30.08.2026 SUNDAY.ಭಾನುವಾರ ಸಂವತ್ಸರ: ಪರಭಾವ SAMVATSARA : PARABHAVA. ಆಯಣ: ದಕ್ಷಿಣಾಯನ AYANA:...

ಜಕ್ಕೂರಿನ ರೈತ ಸಂತೆ ಮಾರ್ಗದಲ್ಲಿ ಮೆಗಾ ಸ್ವಚ್ಛತಾ ಅಭಿಯಾನ – 800ಕ್ಕೂ ಅಧಿಕ ವಿದ್ಯಾರ್ಥಿಗಳು

ಸ್ವಚ್ಛತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ...

ಗ್ರಾಮೀಣ ಜಲ ಆಸ್ತಿ ನಿರ್ವಹಣೆ: ಮೊಬೈಲ್, ವೆಬ್ ಆಪ್ ಲೋಕಾರ್ಪಣೆ

 ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ (Duplicate...

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ

ನೇಪಾಳದಲ್ಲಿ (Nepal) ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ (Flas Floods)ದಿಢೀರ್ ಪ್ರವಾಹ...

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 27 (ಕರ್ನಾಟಕ ವಾರ್ತೆ): ಅಲ್ಪಸಂಖ‍್ಯಾಂತರ ಅಭಿವೃದ್ದಿ...

ನಿತ್ಯ ಪಂಚಾಂಗ 28.08.2026 FRIDAY ಶುಕ್ರವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 28.08.2026 FRIDAY.ಶುಕ್ರವಾರ ಸಂವತ್ಸರ: ಪರಾಭವ SAMVATSARA : PARABHAVA. ಆಯಣ:ದಕ್ಷಿಣಾಯನ AYANA: DAKSHINAYANA. ಋತು:...

ಸಹೋದರ – ಸಹೋದರಿಯ ಉತ್ತಮ ಸಂಬಂಧ ನಿರ್ಮಾಣ ಮಾಡುವ ರಕ್ಷಾ ಬಂಧನ

ಪರಸ್ಪರ ನಿರಪೇಕ್ಷ ಪ್ರೀತಿ, ಕಾಳಜಿ, ಜವಾಬ್ದಾರಿ ನಿರ್ಮಾಣ ಮಾಡುವ ರಕ್ಷಾ ಬಂಧನ "ರಕ್ಷಾಬಂಧನದ...

Related Articles