ಗೋವಾದ ಸನಾತನ ಆಶ್ರಮಕ್ಕೆ ಜಗದ್ಗುರುಗಳ ಆಗಮನ; ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಭೇಟಿ !

ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಕೀಲಿಕೈ – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜೀ ಮಹಾರಾಜ್
 
 ಫೊಂಡಾ (ಗೋವಾ) – “ಕಲಿಯುಗದ ಈ ಬಿಕ್ಕಟ್ಟಿನ ಸ್ಥಿತಿಯಲ್ಲಿ ಕೇವಲ ಭಕ್ತಿಯಿಂದ ಮಾತ್ರ ಸಾಲದು. ಇಂದಿನ ಕಾಲದ ಅವಶ್ಯಕತೆ ಏನೆಂದರೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಸಾತ್ವಿಕತೆಯನ್ನು ಜಾಗೃತಗೊಳಿಸಿ ಸಂಘಟಿತನಾಗಬೇಕು. ಮಾನವ ಯೋನಿಯಲ್ಲಿಯೇ ತನ್ನ ಭಾಗ್ಯವನ್ನು ಬದಲಾಯಿಸುವ ಸಾಮರ್ಥ್ಯವಿದೆ. ಯೋಗ್ಯ ಗುರುಗಳ ಮಾರ್ಗದರ್ಶನದಲ್ಲಿ ಕಾರ್ಯ ಮಾಡಿದರೆ ವಿಶ್ವಶಾಂತಿಯ ಗುರಿಯನ್ನು ಖಚಿತವಾಗಿ ಸಾಧಿಸಬಹುದು.” ಈ ತೇಜಸ್ವಿ ವಿಚಾರಗಳನ್ನು ರಾಮಾನಂದಾಚಾರ್ಯ ದಕ್ಷಿಣ ಪೀಠ, ನಾಣಿಜಧಾಮ (ರತ್ನಾಗಿರಿ)ದ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜೀ ಮಹಾರಾಜರು ವ್ಯಕ್ತಪಡಿಸಿದರು. ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸಮಾಜಕ್ಕೆ ಈ ಅತ್ಯಂತ ಮಹತ್ವದ ಹಾಗೂ ಸಮಷ್ಟಿ ಕಲ್ಯಾಣದ ಸಂದೇಶವನ್ನು ನೀಡಿದರು.
ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜೀ ಮಹಾರಾಜರು ಸನಾತನ ಸಂಸ್ಥೆಯ ರಾಮನಾಥಿ (ಗೋವಾ) ಆಶ್ರಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ‘ಸನಾತನ ಪ್ರಭಾತ’ ವಾರ್ತಾಪತ್ರಿಕೆ ಸಮೂಹದ ಸಂಪಾದಕರಾದ ಶ್ರೀ ಯೋಗೇಶ ಜಲತಾರೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ-ಧರ್ಮದ ಕಾರ್ಯಗಳು ಹಾಗೂ ಆಧ್ಯಾತ್ಮಿಕ ಸಂಶೋಧನೆಯ ಕುರಿತು ಅವರಿಗೆ ಮಾಹಿತಿ ನೀಡಿದರು. ಆಶ್ರಮ ಪ್ರವಾಸದ ವೇಳೆ ಜಗದ್ಗುರು ಮಹಾರಾಜರು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಜೀ ಅವರನ್ನು ಭೇಟಿಯಾದರು. ಈ ಅಲೌಕಿಕ ಭೇಟಿಯ ನಂತರ ಸನಾತನ ಸಂಸ್ಥೆಯ ಪೂಜ್ಯ ಪೃಥ್ವೀರಾಜ ಹಜಾರೆ ಅವರು ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜೀ ಮಹಾರಾಜರನ್ನು ಭಾವಪೂರ್ಣವಾಗಿ ಸನ್ಮಾನಿಸಿದರು. ಈ ಮಂಗಳಕರ ಸಂದರ್ಭದಲ್ಲಿ ಭಾರತಾಚಾರ್ಯ ಪೂಜ್ಯ (ಪ್ರೊ.) ಸು.ಗ.ಶೇವಡೆ ಹಾಗೂ ಸನಾತನ ಸಂಸ್ಥೆಯ ಪೂಜ್ಯ (ಶ್ರೀಮತಿ) ಜ್ಯೋತಿ ಢವಳೀಕರ ಅವರೂ ಉಪಸ್ಥಿತರಿದ್ದರು.
ಉಪಸ್ಥಿತರಿದ್ದ ಸಾಧಕರು ಹಾಗೂ ಗಣ್ಯರನ್ನು ಉದ್ದೇಶಿಸಿ ಮಾರ್ಗದರ್ಶನ ನೀಡಿದ ಜಗದ್ಗುರು ಮಹಾರಾಜರು, “ಇಂದಿನ ಕಾಲದಲ್ಲಿ ಹಿಂದೂ ಸಮಾಜವು ತನ್ನ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದೇ ವೇದಿಕೆಗೆ ಬರುವುದು ಅನಿವಾರ್ಯವಾಗಿದೆ. ನಮ್ಮ ಮತ್ತು ಪರಮ ಪೂಜ್ಯ ಡಾ.ಆಠವಲೆ ಜೀ ಅವರ ಧ್ಯೇಯ ಒಂದೇ ಆಗಿದೆ — ಹಿಂದೂ ಧರ್ಮದ ರಕ್ಷಣೆ ಮತ್ತು ಅದರ ಉತ್ಥಾನ! ಸಮಾಜದ ಕಲ್ಯಾಣಕ್ಕಾಗಿ ಸಾತ್ವಿಕ ಶಕ್ತಿಗಳ ಏಕೀಕರಣವು ಇಂದಿನ ಕಾಲದ ಅತ್ಯಂತ ದೊಡ್ಡ ಅಗತ್ಯವಾಗಿದೆ.” ಎಂದು ಹೇಳಿದರು.
ಅವರು ಸನಾತನ ಸಂಸ್ಥೆಯ ಕಾರ್ಯಗಳ ಗೌರವಗಾಥೆಯನ್ನು ಹಾಡುತ್ತಾ, “ಪರಮ ಪೂಜ್ಯ ಡಾ. ಆಠವಲೆ ಜೀ ಅವರು ಅಂತರ್ಬಾಹ್ಯ ಸತ್ಪುರುಷರಾಗಿದ್ದಾರೆ. ಅವರ ದಿವ್ಯ ಮಾರ್ಗದರ್ಶನದಲ್ಲಿ ಸನಾತನದ ಸಾಧಕರು ವಿಶ್ವದಾದ್ಯಂತ ಶಾಂತಿಯ ಅಸಾಧಾರಣ ಕಾರ್ಯವನ್ನು ಮಾಡುತ್ತಿದ್ದಾರೆ. ಇಂತಹ ಶಿಸ್ತಿನ ಕಾರ್ಯವು ಬೇರೆ ಯಾವುದೇ ಸಂಪ್ರದಾಯದಲ್ಲಿ ಸುಲಭವಾಗಿ ಸಾಧ್ಯವಾಗಿಲ್ಲ; ಏಕೆಂದರೆ ಇಲ್ಲಿ ‘ಗುರುತತ್ತ್ವ’ಕ್ಕೆ ಸರ್ವೋಚ್ಚ ಸ್ಥಾನವನ್ನು ನೀಡಲಾಗುತ್ತದೆ ಹಾಗೂ ಅತ್ಯಂತ ಶಿಸ್ತಿನ ರೀತಿಯಲ್ಲಿ ಸಾಧನೆ ಮಾಡಲಾಗುತ್ತದೆ.” ಎಂದು ಹೇಳಿದರು.
ಕಲಿಯುಗದ ಸ್ಥಿತಿಯ ಕುರಿತು ಬೆಳಕು ಚೆಲ್ಲಿದ ಜಗದ್ಗುರು ಮಹಾರಾಜರು, ಈ ಯುಗದಲ್ಲಿ ‘ರಜ’ ಮತ್ತು ‘ತಮ’ ಗುಣಗಳು ಯಾವುದೇ ಆಹ್ವಾನವಿಲ್ಲದೆ ಸ್ವತಃ ಹೆಚ್ಚಾಗುತ್ತವೆ. ಅವು ಮಾನವನ ಜೀವನವನ್ನು ಅಧೋಗತಿಯತ್ತ ಕೊಂಡೊಯ್ಯುತ್ತವೆ. ಈ ನಕಾರಾತ್ಮಕ ಪರಿಣಾಮಗಳನ್ನು ನಿವಾರಿಸಿ ಜೀವನದಲ್ಲಿ ಸಾತ್ವಿಕತೆಯನ್ನು ಹೆಚ್ಚಿಸಲು ಸಮಾಜವು ‘ಸಾಧನೆ’ ಮಾಡುವುದು ಅನಿವಾರ್ಯವಾಗಿದೆ. ಸಂತರ ಸಾನ್ನಿಧ್ಯದಿಂದ ಹೊರಹೊಮ್ಮುವ ಸಾತ್ವಿಕ ಸ್ಪಂದನಗಳು ಮನುಷ್ಯನನ್ನು ಆತ್ಮಚೈತನ್ಯದತ್ತ ಕೊಂಡೊಯ್ಯುತ್ತವೆ ಎಂದು ಹೇಳಿದರು.
ಅವರು ಸನಾತನ ಆಶ್ರಮದ ಸಾಧಕರು ತಮ್ಮ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಂಡು ಆತ್ಮಚಿಂತನೆ ಮಾಡುವ ಪದ್ಧತಿಯನ್ನು ವಿಶೇಷವಾಗಿ ಪ್ರಶಂಸಿಸಿದರು. ಸಂದೇಶ ನೀಡುತ್ತಾ ಮಹಾರಾಜರು, “ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೋಷಗಳನ್ನು ಹುಡುಕಿ ಅವುಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ದೋಷಮುಕ್ತ, ಸಂಸ್ಕಾರಯುತ ಹಾಗೂ ಆದರ್ಶ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.” ಎಂದು ಹೇಳಿದರು.

Hot this week

ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3191 ಪ್ರಥಮ ‘ರೋಟರಿ ಮೀಡಿಯಾ ಫಾಲ್ಕನ್ ಅವಾರ್ಡ್ಸ್–2026’

ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3191 ಪ್ರಥಮ ‘ರೋಟರಿ ಮೀಡಿಯಾ ಫಾಲ್ಕನ್ ಅವಾರ್ಡ್ಸ್–2026’...

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (ಎಐ) ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (ಎಐ)...

ರಾಷ್ಟ್ರೀಯ ಲೋಕ್ ಅದಾಲತ್ ಒಂದೇ ದಿನದಲ್ಲಿ ಬರೋಬ್ಬರಿ 78.79 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ

ಬೆಂಗಳೂರು: "ಸರ್ವರಿಗೂ ನ್ಯಾಯ" ಎಂಬ ಧ್ಯೇಯೋದ್ದೇಶದೊಂದಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ...

ಜಲ ಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು: ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಜುಲೈ 16...

ಮಹಿಳೆಯರ ಸುರಕ್ಷತೆಗೆ ಆದ್ಯತೆ ರಾಜ್ಯಾದ್ಯಂತ ‘POSH’ ಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ಮಹಿಳಾ ಆಯೋಗದ ಮಹತ್ವದ ಹೆಜ್ಜೆ

ಬೆಂಗಳೂರು: ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ...

Topics

ಯುವ ಸಬಲೀಕರಣಕ್ಕೆ ಹೊಸ ಕ್ರಾಂತಿ ರಾಜ್ಯದಲ್ಲಿ 10,000 “ಭಾರತ್ ಜೋಡೋ ಯುವ ಸಂಘ”ಗಳ ಸ್ಥಾಪನೆಗೆ ಸರ್ಕಾರದಿಂದ ಆದೇಶ

ಬೆಂಗಳೂರು : ಕರ್ನಾಟಕದ ಯುವಜನತೆಯಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ...

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ: ಬಿ.ಎಡ್. ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ...

Related Articles