ಬೆಂಗಳೂರು: ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಜುಲೈ 16 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್(Water Adalat) ಹಮ್ಮಿಕೊಳ್ಳಲಾಗಿದೆ.
ವಿವಿಧ ಉಪವಿಭಾಗಗಳಾದ ಪಶ್ಚಿಮ -1-2, ಪಶ್ಚಿಮ -2-2, ಪಶ್ಚಿಮ 3-2, ಪಶ್ಚಿಮ 4-2, ಉತ್ತರ 1-2, ಉತ್ತರ -2-2, ಉತ್ತರ -3-2, ದಕ್ಷಿಣ -4-2, ದಕ್ಷಿಣ -1-2, ದಕ್ಷಿಣ -2-2, ದಕ್ಷಿಣ -3-2, ಮತ್ತು ಉತ್ತರ 4-2, ಕ್ಕೆ ಸಂಬಂಧಿಸಿದಂತೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ(grievances and shortcomings) ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು.
ಅದಾಲತ್ ಸೇವಾ ಠಾಣೆಗಳಾದ ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ-1-2, ನಂದಿನಿ ಲೇಔಟ್-1, ಹೆಗ್ಗನಹಳ್ಳಿ, ಹೇರೋಹಳ್ಳಿ, ಮಾಗಡಿ ರಸ್ತೆ-2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ, ನಾಗರಬಾವಿ, ಅನ್ನಪೂರ್ಣೇಶ್ವರಿ ನಗರ, ಸರ್.ಎಂ.ವಿ. ಲೇಔಟ್-1&2, ಆರ್.ಟಿ.ನಗರ, ಸಂಜಯನಗರ, ಆನಂದನಗರ, ಮನೋರಾಯನಪಾಳ್ಯ, ಹೆಚ್.ಬಿ.ಆರ್., ನಾಗವಾರ, ರಾಚೇನಹಳ್ಳಿ, ಕೋಗಿಲು, ಬನಶಂಕರಿ 6 ನೇ ಹಂತ, ಗುಬ್ಬಲಾಳ, ವಸಂತವಲ್ಲಭನಗರ, ಅಚಿಜನಾಪುರ, ಬ್ಯಾಂಕ್, ತಲಘಟ್ಟಪುರ, ಗೊಟ್ಟಿಗೆರೆ, ಹೆಚ್.ಎಸ್.ಆರ್. ಲೇಔಟ್, ಮಂಗಮ್ಮನಪಾಳ್ಯ, ಕೂಡ್ಲು, ಹರಳೂರು, ಬಿಟಿಎಂ ಲೇಔಟ್ -1,2 & 3, ಅಬ್ಬಿಗೆರೆ ಹಾಗೂ ಬಾಹುಬಲಿನಗರ ಈ ಸ್ಥಳಗಳ ನೀರಿನ ಅದಾಲತ್ ನಡೆಯಲಿದೆ.
ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
