ಎಲ್ಲಾ ವಲಯಗಳಿಗೂ ಕಡ್ಡಾಯ: ಸರ್ಕಾರಿ, ಖಾಸಗಿ ಸಂಸ್ಥೆಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಹಾಸ್ಟೆಲ್‍ಗಳು, ಕಾಲೇಜುಗಳು ಸೇರಿದಂತೆ ಸಂಘಟಿತ ಹಾಗೂ ಅಸಂಘಟಿತ ವಲಯದ ಪ್ರತಿಯೊಂದು ಕೆಲಸದ ಸ್ಥಳದಲ್ಲೂ POSH ಕಾಯ್ದೆಯ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಶೀಘ್ರದಲ್ಲೇ ಲೆಕ್ಕಪರಿಶೋಧನೆ: ಮುಂಬರುವ ದಿನಗಳಲ್ಲಿ ಸಂಸ್ಥೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆಯೇ ಎಂಬ ಬಗ್ಗೆ ಲೆಕ್ಕಪರಿಶೋಧನೆ ಕೈಗೊಳ್ಳಲಾಗುವುದು.
ಅಧಿಕಾರಿಗಳಿಗೆ ಹೊಣೆಗಾರಿಕೆ: ಕಾಯ್ದೆಯನ್ನು ತಳಮಟ್ಟದಿಂದ ಜಾರಿಗೆ ತರುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳು, ಪೊಲೀಸ್ ವರಿಸ್ತಾಧಿಕಾರಿಗಳು (ಎಸ್‍ಪಿ)(Senier officials) ಮತ್ತು ಪೊಲೀಸ್ ಆಯುಕ್ತರುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಆಯೋಗವು ಕರೆ ನೀಡಿದೆ.
ವಾರಕ್ಕೊಮ್ಮೆ ಖಾಸಗಿ ಸಂಸ್ಥೆಗಳಿಗೆ ಭೇಟಿ ಹಾಗೂ ಪರಿಶೀಲನೆ: ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ರೂಪ ಆರ್. ಅವರು ವಾರದಲ್ಲಿ ಒಂದು ದಿನ ಬೆಂಗಳೂರಿನ ಯಾವುದಾದರೂ ಒಂದು ಖಾಸಗಿ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.
ಆಂತರಿಕ ಸಮಿತಿ ಪರಿಶೀಲನೆ ಹಾಗೂ ತರಬೇತಿ: ಈ ಭೇಟಿಯ ವೇಳೆ ಸಂಸ್ಥೆಗಳಲ್ಲಿ ಆಂತರಿಕ ಸಮಿತಿ ರಚನೆ, ನಿಗದಿತ ಸಭೆಗಳು, ಸ್ವೀಕೃತವಾದ ದೂರುಗಳ ಕುರಿತು ಕೈಗೊಂಡ ಕ್ರಮಗಳು ಮತ್ತು ವಾರ್ಷಿಕ ವರದಿಯನ್ನು ಪರಿಶೀಲಿಸಲಾಗುವುದು. ತದನಂತರ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಆಯೋಗದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ರಾಜ್ಯದ ಯಾವುದೇ ಮಹಿಳೆಯು ತನ್ನ ಘನತೆ ಮತ್ತು ಜೀವನೋಪಾಯದ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇರಬಾರದು. ರಾಜ್ಯದ ಪ್ರತಿಯೊಂದು ಕೆಲಸದ ಸ್ಥಳವೂ ಮಹಿಳೆಯರಿಗೆ ಸುರಕ್ಷತೆ, ಗೌರವ ಮತ್ತು ಸಮಾನ ಅವಕಾಶದ ಸ್ಥಳವಾಗಿರಬೇಕು. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನPOSHವು ಕೇವಲ ಕಾನೂನು ಬಾಧ್ಯತೆಯಾಗಿರದೇ ಸಾಮೂಹಿಕ ಬಾಧ್ಯತೆಯಾಗಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
