ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ

ನನ್ನ ಕಾಲಘಟ್ಟದ ಯಾರೇ ನಮ್ಮೂರಿನ ರಸಿಕರನ್ನು ಚಿತ್ರಿಸಲು ಹೊರಟರೆ, ಅದರಲ್ಲಿ ಮರೆಯದೆ ದಾಖಲು ಮಾಡಬೇಕಾದ ಪಾತ್ರ ಯಾಕೂಬ್ ನದು. ಗೋರೂರು ರಾಮಸ್ವಾಮಿ ಅಯ್ಯಂಗಾರ್(Gorur Ramaswamy Iyengar)ರು ತಮ್ಮ ನಮ್ಮೂರಿನ ರಸಿಕರು ಕೃತಿಯಲ್ಲಿ ಚಿತ್ರಿಸಿದ ಶಾಲು ಸಾಬಿ ಪಾತ್ರವು ತನ್ನ ಮುತ್ತಜ್ಜನೆಂದು ಹೇಳಿಕೊಳ್ಳುವ ಯಾಕೂಬ್ ಗುಣದಲ್ಲೂ ಅವರನೇ ನೆನಪಿಸುತ್ತಾನೆ . ಈಗ ಹಾಸನದಲ್ಲಿ ನೆಲೆಸಿರುವ ಆತ ನಮ್ಮೂರಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಜೊತೆಗೆ ಊರಿನ ರಥೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಹಾಸನದಲ್ಲಿ ನಡೆಯುವ ಯಾವುದೇ ಸಾಹಿತ್ಯ ಕಾರ್ಯಕ್ರಮ ನಾಟಕಗಳಲ್ಲಿ ಕಾಣಸಿಗುತ್ತಾನೆ ಕಳೆದ 50 ವರ್ಷಗಳ ಇಡೀ ಗೊರೂರಿನ ಇತಿಹಾಸವನ್ನು ದಾಖಲು ಮಾಡುವ ಸಾಮರ್ಥ್ಯ ಇರುವ ಆತನಿಗೆ ನಮ್ಮೂರಿನ ಮನೆಮನೆ ಕಥೆಗಳು ಗೊತ್ತು. ಅಷ್ಟೇ ಏಕೆ ಹಾಸನದ ಪ್ರಮುಖ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಘಟನೆಗಳನ್ನು ಆತ ಹೇಳಬಲ್ಲ.

ಯಾಕೂಬ್ ಗೂ ನನ್ನ ತಂದೆಗೂ ಒಂದು ರೀತಿಯ ಪ್ರೇಮ ಕೋಪದ ಅನನ್ಯ ಸಂಬಂಧ. 1990ರ ಸುಮಾರಿಗೆ ಆರಂಭವಾದ ಸಾಕ್ಷರತಾ ಆಂದೋಲನದಲ್ಲಿ ನನ್ನಣ್ಣನು ಹಾಗೂ ಯಾಕೂಬ್ ಇಬ್ಬರೂ ಧುಮುಕಿದ ಸಂದರ್ಭ. ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಪದೇಪದೇ ಹೋಗಬೇಕಾಗಿತ್ತು. ಹಾಸನದಿಂದ ನಮ್ಮೂರಿಗೆ ಬಸ್ಸಿನಲ್ಲಿ ಮಧ್ಯರಾತ್ರಿ ಬಂದು ಮನೆಯ ಬಾಗಿಲು ಬಡಿಯುತ್ತಿದ್ದ ಕಾರಣಕ್ಕೆ ತಂದೆ ಅವರಿಗೆ ನನ್ನ ಅಣ್ಣನ ಮೇಲೆ ಕೋಪ. ಈ ಕೋಪವನ್ನು ಜೊತೆಗಿರುತ್ತಿದ್ದ ಯಾಕುಬ್ ಮೇಲೆ ಆಗಾಗ್ಗೇ ತೀರಿಸಿಕೊಳ್ಳುತ್ತಿದ್ದರು. ಅವರು ಬೈದ ಬೈಗಳನೆಲ್ಲ ನಾನು ಸಿಕ್ಕಾಗ ನನಗೆ ನಿಮ್ಮ ತಂದೆ ಹೀಗೆಲ್ಲಾ ಬೈದ್ರು ಅಣ್ಣ ಎಂದು ಒಪ್ಪಿಸುತ್ತಿದ್ದ. ಆದರೆ ಮಾರನೇ ದಿನವೇ ನನ್ನ ತಂದೆ ಯಾಕೂಬ್ ಬಣ್ಣ ತರಲು ಹಾಸನಕ್ಕೆ ಹೋಗಲು ನಮ್ಮೂರಿನ ಬಸ್ ಸ್ಟ್ಯಾಂಡ್ ನ ಬಳಿ ಕಾಣಿಸುತ್ತಿದ್ದರು.

ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಮಣ್ಣಿನ ಗೋಡೆ ಆದ್ದರಿಂದ ನೀರು ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಸುಣ್ಣ ಬಣ್ಣ ಮೊದಲಿಗೆ ಬೇಡ ಬೇಡ ಎಂದುಕೊಂಡರೂ ಜಾತ್ರೆ ಹತ್ತಿರ ಬಂದಂತೆ ಸುಣ್ಣ ಬಣ್ಣ ಆಗಲೇಬೇಕೆಂದು ಬೇಕೆಂದು ನಿರ್ಧರಿಸಿದ ನಮ್ಮ ತಂದೆ ಅದಕ್ಕಾಗಿ ಯಾಕೋಬನನ್ನು ನಿಯೋಜಿಸಿದ ನಂತರ 3- 4 ದಿನ ಮನೆಯಲ್ಲಿ ಬಣ್ಣ ದೇ ಸಡಗರ. ಪಾತ್ರೆಗಳನ್ನೆಲ್ಲ ಹಿತ್ತಲಿಗೆ ಸಾಮಾನುಗಳನ್ನೆಲ್ಲ ರೂಮ್ ನ ಮಧ್ಯಕ್ಕೆ ಜೋಡಿಸಿ ಅದರ ಮೇಲೆ ಚಾಪೆ ಮುಚ್ಚಿ ಬಣ್ಣ ಹೊಡೆಯುವ ಪ್ರಕ್ರಿಯೆ ಆರಂಭವಾಗುತ್ತಿತ್ತು .ಬಣ್ಣ ನೆಲದ ಮೇಲೆ ಬಿದ್ದಾಗಲಿಲ್ಲ ತಾಯಿ ಗೊಣಗಲು ಒಮ್ಮೊಮ್ಮೆ ಕೂಗಾಡಲು ಆರಂಭಿಸಿದೊಡನೆ ತಟ್ಟನೆ ಬಣ್ಣ ಬಳಿಯುವುದನ್ನು ನಿಲ್ಲಿಸಿ ಕೆಳಗೆ ಹಾರಿ ಟರ್ಪೆಂಟೇನನ್ನು ಹಾಕಿ ನೆಲ ಉಜ್ಜಿ ಸರಿ ಆಯ್ತಾ ಅಕ್ಕ ಎಂದು ಸಮಾಧಾನಿಸುತ್ತಿದ್ದ .

ನನಗೆ ಅವನ ಕುರಿತು ಗಮನ ಸೆಳೆಯುತ್ತಿದ್ದದ್ದು ಸದಾ ಆತನ ಕೈಯಲ್ಲಿರುತ್ತಿದ್ದ ಒಂದಿಲ್ಲೊಂದು ಪತ್ರಿಕೆಗಳು. ಅದರಲ್ಲೂ ಆ ವಾರದ ಲಂಕೇಶ್ ಪತ್ರಿಕೆ ಮತ್ತು ಹಾಯ್ ಬೆಂಗಳೂರು (Hai Bangalore ಕೈಯಲ್ಲಿ ಹಿಡಿದು ಮನೆಗೆ ಬಂದು ಮಂಚದ ಮೇಲೆ ಇರಿಸಿ ತನ್ನ ಕಾರ್ಯ ಆರಂಭಿಸುತ್ತಿದ್ದ .ಅವನು ತನ್ನ ಕೆಲಸ ಮುಗಿಸುವುದರೊಳಗೆ ನಾನು ಆ ಪತ್ರಿಕೆಗಳನ್ನು ಓದಿ ಮುಗಿಸುತ್ತಿದ್ದೇ. ಈ ರೀತಿಯ ಓದಿನ ಹವ್ಯಾಸ ಹೊಂದಿದ ಯಾಕೂಬನಿಗೆ ಬಹುತೇಕ ಪ್ರಮುಖ ಲೇಖಕರು ಅವರ ಕೃತಿಗಳು ಅವರ ಕೃತಿಗಳ ಸಿನಿಮಾಗಳು ಗೊತ್ತಿತ್ತು .ಅಷ್ಟೇ ಅಲ್ಲದೆ ಚಿತ್ರರಂಗದ ಅನೇಕ ಮಾಹಿತಿಗಳನ್ನು ಆತ ಹಂಚಿಕೊಳ್ಳುವುದರ ಜೊತೆಗೆ ಊರಿನ ಹಲವಾರು ರಸವತ್ತಾದ ಪ್ರಸಂಗಗಳನ್ನು ಅವನದೇ ಹಾಸ್ಯಮಯ ದಾಟಿಯಲ್ಲಿ ಹೇಳುತ್ತಿದ್ದ. ಆತ ಹೇಳುತ್ತಿದ್ದ ಅನೇಕ ಪ್ರಸಂಗಗಳು ಮತ್ತೊಂದು ಪ್ರಬಂಧಕ್ಕೆ ವಸ್ತುವಾಗಬಲ್ಲದು.

ಬೇಸಿಗೆ ರಜೆ ಸಮಯಕ್ಕೆ ನಮ್ಮೂರಿನಲ್ಲಿ ಸಮಯ ಕಳೆಯಲು ಹೊಸದಾಗಿ ಆರಂಭವಾದ ಗ್ರಂಥಾಲಯಕ್ಕೆ ಹೋಗುತ್ತಿದ್ದೆ..ಆದರೆ ಅಲ್ಲಿನ ಗ್ರಂಥಪಾಲಕರು ಅದೇ ಸಮಯಕ್ಕೆ ಅರ್ಜೆ ಹಾಕಿ ತಮ್ಮ ಊರಿಗೆ ತೆರಳಿರುತ್ತಿದ್ದರು ಒಮ್ಮೆ ಈ ರೀತಿ ಗ್ರಂಥಾಲಯದ ಹೋಗುತ್ತಿದ್ದಾಗ ಯಾಕೂಬ್ ಎದುರಾದ. ನನ್ನನ್ನು ನೋಡಿ” ಅಣ್ಣ ಆಶ್ ಮಟಾಶ್ ಇಲ್ಲ” ಎಂದ. ನನಗೆ ತಕ್ಷಣ ಗೊತ್ತಾಗಲಿಲ್ಲ. ನಂತರ ಅದರ ಅನುವಾದ ಅವನೇ ಮಾಡಿದ. ” ಆ್ಯಷ್ ಎಂದರೆ ಬೂದಿ ಮಟ್ಯಾಷ್ ಎಂದರೆ ಹಾಳು” ಗ್ರಂಥಪಾಲಕರ ಹೆಸರು ಬೂದಿಹಾಳು ಎಂದಿದ್ದು, ಅದನ್ನು ಆ ರೀತಿ ಪ್ರಯೋಗಿಸುತ್ತಿದ್ದ. ಹಂಸಲೇಖರ ಹಾಸನಕ್ಕೆ ಬಂದ ಸಂದರ್ಭದಲ್ಲಿ ಇವನನ್ನು ಯಾಕುಬ್ ಎಂದು ಪರಿಚಯಿಸಿದಾಗ ಕ್ಯಾ ಕೂಬ್ ಲಗತಿ ಹೋ ಹಾಡನ್ನು ಬದಲಿಸಿ ಯಾ ಕೂಬ್ ಲಗತಿ ಹೊ ಎಂದು ಹಾಡಿದ್ದನ್ನು ಖುಷಿಯಿಂದ ನೆನೆಯುತ್ತಿರುತ್ತಾನೆ.

1984ರ ಸುಮಾರಿನಲ್ಲಿ ಗೊರೂರಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ವೀರೇಂದ್ರ ಹೆಗಡೆಯವರಿಗೆ ಏರ್ಪಡಿಸಿದ್ದ ನಾಗರೀಕ ಸನ್ಮಾನದ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಅರಕಲಗೂಡು ವರದರಾಜಲು ರವರಿಗೆ ಪ್ರಥಮ ದರ್ಜೆ ಕಾಲೇಜಿಗೆ ಬೇಡಿಕೆ ಇಟ್ಟಾಗ ಸ್ಥಾಪಿತವಾದ ಎ ಎನ್ ವಿ ಕಾಲೇಜಿನ ಮೊದಲ ಫಲಾನುಭವಿ ಯಾಕೋಬನು ಮುಂದೆ ಮಾಸ್ಟರ್ ಡಿಗ್ರಿಯನ್ನು ಪಡೆದ. ಆತನ ಸಹಪಾಠಿಗಳು ಈಗ ಉಪ ನಿರ್ದೇಶಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಆದರೆ ತನ್ನ ವಿದ್ಯಾಭ್ಯಾಸದ ದಿನದಲ್ಲಿ ಬಣ್ಣದ ಬದುಕಿಗೆ ಬಿದ್ದ ಯಾಕೂಬ್ ತನ್ನ ಸಂಬಂಧಿಕರ ಜಿಎಎಸ್ ಟಾಕೀಸ್ ನಲ್ಲಿ ಟಿಕೆಟ್ ವಿತರಕ ,ಗೇಟ್ ಕೀಪರ್, ಆಪರೇಟರ್ ಜೊತೆ ಜೊತೆಗೆ ಬೋರ್ಡ್ ಬರೆಯುವ ಹವ್ಯಾಸಕ್ಕೂ ಬಿದ್ದ ನಂತರ ಯಾಕೋ ಅಲ್ಲಿಯೇ ಸಂತೃಪ್ತನಾದ.

ಕುವೆಂಪುರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ವಿಶ್ವ ಮಾನವ ಸಂದೇಶವನ್ನು ನಮ್ಮೂರಿನ ಗ್ರಂಥಾಲಯಕ್ಕೆ ಉಚಿತವಾಗಿ ಬ್ಯಾನರ್ ಬೋರ್ಡನ್ನು ಕೊಟ್ಟಿದ್ದಲ್ಲದ ಸುತ್ತಲೂ ನಾಲ್ಕೈದು ಶಾಲೆಗಳಿಗೆ ಕೈಯಲ್ಲಿ ಬರೆದ ಉದ್ದನೆಯ ಫೋಲ್ಡಿಂಗ್ ಬ್ಲಾಕ್ ಬೋರ್ಡ್ ನಲ್ಲಿ ಬರೆದು ಕೊಟ್ಟಿದ್ದು ನೆನಪಿದೆ. ಕಳೆದ ವರ್ಷ ಜಹೊನಾ ಸ್ಮರಣೆಯ ಸಮಾರಂಭದಲ್ಲಿ ಅವರ ಮಗಳಾದ ಖ್ಯಾತ ಲೇಖಕಿ ಜ ನಾ ತೇಜಶ್ರೀ ಅವರು ಜಹೊನಾರು ತೀರಿಕೊಂಡ ಸಂದರ್ಭದಲ್ಲಿ ಪಾರ್ಥಿವ ಶರೀರವನ್ನು ರಾತ್ರಿಯಿಡೀ ಎಚ್ಚರವಾಗಿ ಕುಳಿತು ನೋಡಿಕೊಂಡದ್ದನ್ನು ನೆನಪಿಸಿಕೊಂಡರು.

ಆ ಸಂದರ್ಭದಲ್ಲಿ ಸಾಕ್ಷರತಾ ಆಂದೋಲನದ ಸಮಯದಲ್ಲಿ ಹಾರನ ಹಳ್ಳಿಯಲ್ಲಿ ಗೋಡೆ ಬರಹವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಆತನನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿದ ಪ್ರಸಂಗವನ್ನು ನನ್ನೊಂದಿಗೆ ಹಂಚಿಕೊಂಡ ಯಾಕೂಬ್ ಆಗ ಸಾಕ್ಷರತಾ ಸಮಿತಿಯ ಅಧ್ಯಕ್ಷರಾಗಿದ್ದ ಜಹೊನಾರವರು ಅಲ್ಲಿಗೆ ಬಂದು ಬಿಡಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡ. ಕಳೆದ ವರ್ಷ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವನದೇ ಗೋಡೆ ಬರಹ . ಇವನು ಬರೆಯುವ ಗೋಡೆ ಬರಹಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ.
ಈಗಲೂ ರಾಜ್ಯ ,ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಆಯ ಊರುಗಳಿಗೆ ಹೋಗಿ ಸಾಹಿತ್ಯ ಸಮ್ಮೇಳನದ ದಿನಾಂಕಗಳ ಜೊತೆಗೆ ಲೇಖಕರ ಪ್ರಸಿದ್ಧ ನುಡಿಗಳನ್ನು ದಾಖಲಿಸುವ ಕೆಲಸವನ್ನು ಮುಂದುವರಿಸಿಕೊಂಡು ಬಂದಿರುವ ಯಾಕೂಬ್ ನಮ್ಮೂರಿನ ಅನನ್ಯ ಪ್ರತಿಭೆ.

Hot this week

ವಸತಿ ಸಂಕಿರಣಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆ

ಬೆಂಗಳೂರು: ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಡಿಎ...

ಎಲ್‌ಪಿಜಿ ಬೆಲೆ ಏರಿಕೆ

ಬೆಂಗಳೂರು:- ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿರುವಾಗ...

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

Topics

ವಸತಿ ಸಂಕಿರಣಗಳಿಗೆ ಸಂಬಂಧಿಸಿದ ಕಾನೂನು ಸುಧಾರಣೆ

ಬೆಂಗಳೂರು: ವಸತಿ ಸಂಕಿರಣಗಳಿಗೆ ಸಂಬಂಧಿಸಿದ  ಕಾನೂನು ಸುಧಾರಣೆಗಳಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಡಿಎ...

ಎಲ್‌ಪಿಜಿ ಬೆಲೆ ಏರಿಕೆ

ಬೆಂಗಳೂರು:- ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿರುವಾಗ...

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

Related Articles