ಡಿಪ್ಲೋಮಾ ಇನ್ ಡ್ರಾಮಾ ಆರ್ಟ್ಸ್ ಕೋರ್ಸಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ತುಮಕೂರು(ಕ.ವಾ.)ಜೂ.9: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ 2025-26ನೇ ಸಾಲಿನ ಡಿಪ್ಲೋಮಾ ಇನ್ ಡ್ರಾಮಾ ಆರ್ಟ್ಸ್ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಪದವೀಧರರಿಗೆ ಹಾಗೂ ರಂಗಭೂಮಿಯಲ್ಲಿ ಆಸಕ್ತಿ/ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ಕರ್ನಾಟಕ ಹಾಗೂ ಭಾರತದ ಖ್ಯಾತ ರಂಗತಜ್ಞರು/ ಅತಿಥಿ ಉಪನ್ಯಾಸಕರಿಂದ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ ಕುರಿತಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ವೆಬ್‌ಸೈಟ್ www.theatreschoolsanehalli.org ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಜೂನ್ 25ರೊಳಗೆ ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗಶಾಲೆ, ಸಾಣೇಹಳ್ಳಿ–577597, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ. 9448398144 / 8861043553ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ಬೆಂಗಳೂರಿನಲ್ಲಿ ಡಿಸೆಂಬರ್ 4 ರಿಂದ 13 ರವರೆಗೆ ಹತ್ತು ದಿನಗಳ ಕಾಲ “ಬೆಂಗಳೂರು ಜಾತ್ರೆ” ಸಂಭ್ರಮಾಚರಣೆ-ಕೃಷ್ಣಭೈರೇಗೌಡ

ಬೆಂಗಳೂರು:"ಬೆಂಗಳೂರಿನ ಜನರಿಂದ, ಬೆಂಗಳೂರಿನ ಜನರಿಗಾಗಿ" ಎಂಬ ಕಲ್ಪನೆಯೊಂದಿಗೆ ಬೆಂಗಳೂರಿನ ಐದು ಬಿಬಿಎಂಪಿ...

ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆ: ಬೆಂಗಳೂರು ಕೃಷಿಮೇಳವನ್ನು ಒಂದು ದಿನ ಸರಳವಾಗಿ ಆಯೋಜಿಸಿ “ಬರ ನಿರ್ವಹಣೆ” ಕಾರ್ಯಾಗಾರ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ತೀವ್ರ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ...

2025ನೇ ಸಾಲಿನ ರಂಗಭೂಮಿ ಆಕರ ಗ್ರಂಥಗಳ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು(The Karnataka Nataka Academy) 2025ನೇ ಸಾಲಿನಲ್ಲಿ...

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 61ನೇ ಸಂಸ್ಥಾಪನಾ ದಿನಾಚರಣೆ ಮುಂದೂಡಿಕೆ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ(Bangalore Agricultural University) ವತಿಯಿಂದ ಅಕ್ಟೋಬರ್ 5...

ಶ್ರೀ ಗಣೇಶ್ ನಾಚಿಕೇತು ಎಂಬುವವರ ನೇಮಕಾತಿ ಕುರಿತಾದ ವರದಿಗಳ ಬಗ್ಗೆ ಸ್ಪಷ್ಟೀಕರಣ

ಬೆಂಗಳೂರು: ಶ್ರೀ ಗಣೇಶ್ ನಾಚಿಕೇತು(Shri Ganesh Nachiketu) ಎಂಬುವವರನ್ನು ಸರ್ಕಾರದಿಂದ "ರಾಜ್ಯ ಪಿ.ಆರ್....

Topics

ಇಂಜಿನಿಯರ್ ಎಂದರೆ ಕಟ್ಟಡ ಕಟ್ಟುವವರಲ್ಲ, ಭವಿಷ್ಯ ರೂಪಿಸುವ ಶಿಲ್ಪಿಗಳು: ಸಚಿವ ಚಲುವರಾಯಸ್ವಾಮಿ

ತಂತ್ರಜ್ಞಾನ ಸ್ಮಾರ್ಟ್ ಆಗಿರದೆ, ಸುಸ್ಥಿರವಾಗಿರಬೇಕು: ಸರ್ ಎಂ.ವಿ. ಅವರನ್ನು ಇಂದಿಗೂ ಮೀರಿಸಲು...

ರಾಜ್ಯದಲ್ಲೇ ಪ್ರಥಮ: ಪಶ್ಚಿಮ ಘಟ್ಟದ 10 ಜಿಲ್ಲೆಗಳನ್ನು ಪ್ರತಿನಿಧಿಸುವ ವಿಶೇಷ ಪೋಸ್ಟ್ ಕಾರ್ಡ್ ಸರಣಿ ಬಿಡುಗಡೆ

ಬೆಂಗಳೂರು: ಕರ್ನಾಟಕ ರಾಜ್ಯ(Karnataka State) ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ವತಿಯಿಂದ,...

Related Articles