ರಾಹುಲ್ ಗಾಂಧಿ ಮತ್ತು ಶ್ರೀಮತಿ ಸೋನಿಯಾ ಗಾಂಧಿ (Rahul Gandhi & Sonia Gandhi) ರವರ ರಾಜೀನಾಮೆ ಕೊಡಿಸಿ ನ್ಯಾಷನಲ್ ಹೆರಾಲ್ಡ್ (National Herald) ವಿಷಯದಲ್ಲಿ ಎಂದು ಹೇಳಿಕೆ ನೀಡಿದ್ದಾರೆ. ಅವರ ಹೆಸರು ಹೇಳುವ ನೈತಿಕತೆ ಅರ್ಹತೆ ವಿಜಯೇಂದ್ರ ನಿಮಗೆ ಇಲ್ಲ, ನಿಮ್ಮ ಪಕ್ಷದಲ್ಲಿರುವ ಲೂಟಿಕೋರರು ಶ್ರೀರಾಮನ ಹುಂಡಿಯನ್ನು ಕದ್ದಿರುವುದು ಇಡೀ ದೇಶಕ್ಕೆ ಪ್ರಪಂಚಕ್ಕೆ ತಿಳಿದಿದೆ. ಹುಂಡಿ ಹಣ ಕದ್ದವರನ್ನು ರಕ್ಷಣೆ ಮಾಡುತ್ತಿರುವವರ ರಾಜೀನಾಮೆ ಕೇಳಿರುವುದು ಹಾಗೂ ಕಳ್ಳರನ್ನು ರಕ್ಷಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಉತ್ತರ ಪ್ರದೇಶ CM ಯೋಗಿ ಆದಿತ್ಯನಾಥ ಎಂಬುದು ಈಗಾಗಲೇ ದೇಶಕ್ಕೆ ಈಗ ಬಹಿರಂಗವಾಗಿದೆ,
ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅತ್ಯಂತ ಕಳಪೆ ಅಧ್ಯಕ್ಷ ಎಂಬ ಪಟ್ಟಿಯನ್ನು ಬಿಜೆಪಿ ಪಕ್ಷದ ನಾಯಕರು ಈಗಾಗಲೇ ತಮಗೆ ನೀಡಿದ್ದಾರೆ. ಅದನ್ನ ಮೊದಲು ಅರ್ಥೈಸಿಕೊಂಡು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಹೆಸರನ್ನು ಬಳಸಬೇಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣ ನ್ಯಾಯಾಲಯದ ತೀರ್ಪು ಈಗಾಗಲೇ ಬಂದಿದೆ, ಕೇಂದ್ರ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯಕ್ಕೆ ನ್ಯಾಯಾಲಯ ಸೂಕ್ತ ತೀರ್ಪು ನೀಡಿದೆ ಹಾಗೂ ಈಗಾಗಲೇ ಪ್ರಕರಣ ಮುಕ್ತಾಯವಾಗಿದೆ.
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಆರ್ಟಿಜಿಎಸ್ ಮೂಲಕ ಹಣ ಪಡೆದಿದ್ದು ಹಾಗೂ ನಕಲಿ ಸಹಿ ಹಾಕಿದ್ದು ಯಾರು ಎಂದು ಬಿಜೆಪಿಯ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರಿಗೂ ತಿಳಿದಿದೆ ಅದರ ಬಗ್ಗೆ ಮಾಹಿತಿಯನ್ನು ನೀವು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರವರ ಬಳಿ ಮಾಹಿತಿ ಕೇಳಿ ಪಡೆಯಿರಿ ಅವರೇ ತಮಗೆ ತಿಳಿಸುತ್ತಾರೆ ನೀನೇ ವಿಜಯೇಂದ್ರ ಎಂದು,
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಸೋತಿರುವುದರಿಂದ ಅದನ್ನ ಅರಗಿಸಿಕೊಳ್ಳಲು ನಿಮಗೆ ಸಾಧ್ಯವಿಲ್ಲ ನಿಮ್ಮನ್ನ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಈಗಾಗಲೇ ಬಿಜೆಪಿ ನಿರ್ಧರಿಸಿದೆ ಅದಕ್ಕಾಗಿ ತಾವೇ ಸ್ವಯಂ ಪ್ರೇರಿತ ಭಾವಿ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡಿದ್ದೀರಾ ಅಲ್ಲವೇ ?
ಈ ತಂತ್ರಗಾರಿಕೆ ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತ ಎಂಬುದನ್ನು ಅರ್ಥೈಸಿಕೊಳ್ಳಿ,, ನಿಮ್ಮ ಸವಾಲು ನಿಮ್ಮ ಶಕ್ತಿ ಈಗಾಗಲೇ ಉಪಚುನಾವಣೆಗಳಲ್ಲಿ ಕರ್ನಾಟಕ ರಾಜ್ಯದ ಪ್ರಬುದ್ಧ ಮತದಾರರು ತಿರಸ್ಕರಿಸುವ ಮೂಲಕ ಜನರು ಉತ್ತರ ನೀಡಿದ್ದಾರೆ ಮೊದಲು ನಿಮ್ಮ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ನಿಮ್ಮ ತಂತ್ರಗಾರಿಕೆಯನ್ನು ಉಪಯೋಗಿಸಿಕೊಳ್ಳಿ ಕಾಂಗ್ರೆಸ್ ಬಗ್ಗೆ ಸವಾಲು ಹಾಕುವುದಾಗಲಿ ಅಥವಾ ನಮ್ಮ ಪಕ್ಷದ ನಾಯಕರ ಹೆಸರು ಹೇಳುವ ಯೋಗ್ಯತೆ ಅರ್ಹತೆ ನಿಮಗೆ ನಿಮ್ಮ ಪಕ್ಷಕ್ಕೆ ಇಲ್ಲ ಎಂಬುದನ್ನು ನೇರವಾಗಿ ನಿಮಗೆ ತಿಳಿಸುತ್ತಿದ್ದೇನೆ ವಿಜೇಂದ್ರ ರವರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ನಿಮ್ಮ ರಾಜಕೀಯ ಅನಾನುಭವವನ್ನು ಎತ್ತಿ ತೋರುತ್ತದೆ.
ಬೆಂಗಳೂರು | ಆರೇ ತಿಂಗಳಲ್ಲಿ 136 ಪಾದಚಾರಿಗಳು ಬಲಿ – 664 ಮಂದಿಗೆ ಗಾಯ

