ಬೆಂಗಳೂರು: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ‘ಕಾರ್ಗಿಲ್ ವಿಜಯ ದಿವಸ್’(Kargil Vijay Diwas) ದಿನಾಚರಣೆಯನ್ನು ಜುಲೈ 26 ಭಾನುವಾರದಂದು ಆಚರಿಸಲಾಗುತ್ತಿದೆ.
ಈ ವಿಶೇಷ ಸಮಾರಂಭವು ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಬೆಳಿಗ್ಗೆ 08.45 ಗಂಟೆಗೆ ಜರುಗಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು, ಅತಿಥಿಗಳು ಹಾಗೂ ಆಹ್ವಾನಿತರ ವಾಹನಗಳ ನಿಲುಗಡೆಗಾಗಿ ನೆಹರು ತಾರಾಲಯದಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಮಾರಂಭಕ್ಕೆ ಬರುವ ಎಲ್ಲಾ ನಾಗರಿಕರು ಹಾಗೂ ಅತಿಥಿಗಳು ಬೆಳಿಗ್ಗೆ 08.45 ಗಂಟೆಯ ಒಳಗಾಗಿ ಆಗಮಿಸಿ ತಮ್ಮ ಆಸನಗಳನ್ನು ಅಲಂಕರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಇಲಾಖೆಯ ದೂರವಾಣಿ ಸಂಖ್ಯೆ 080-25589459 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ನಿರ್ದೇಶಕರಾದ (ಪ್ರಭಾರ) ಫ್ಲೈಟ್ ಲೆಫ್ಟಿನೆಂಟ್ ಎಮ್ ಎಸ್ ಲೋಲಾಕ್ಷ (ನಿವೃತ್ತ) ಅವರು ತಿಳಿಸಿದ್ದಾರೆ.

