ಬೆಂಗಳೂರು: ಜ್ಯೋತಿ ತಾಂತ್ರಿಕ (Jyothi Institute of Technology) ಮಹಾವಿದ್ಯಾಲಯದಲ್ಲಿ *‘ವೇದಾಂತ ಮೇಕಥಾನ್ – ದಕ್ಷಿಣಾಸ್ಯ ದರ್ಶಿನಿ’ Vedantha Makathon Dakshinasya Darshini ಎಂಬ 50 ಗಂಟೆಗಳ ಸುದೀರ್ಘ ಮೇಕಥಾನ್ನ್ನು ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಉತ್ಸಾಹಿ ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೇಕಥಾನ್ನಲ್ಲಿ ಭಾಗವಹಿಸಿದ್ದಾರೆ.

ಕಾರ್ಯಕ್ರಮಕ್ಕೆ ಮಿಥಿಕ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಮುಖ್ಯ ಅತಿಥಿಗಳಾಗಿ, ಪರಂ ಫೌಂಡೇಶನ್ನ ಮಾನವ ಸಂಪನ್ಮೂಲ ವಿಭಾಗದ ಶ್ರೀ ಮಣಿಕಂಠ ಪಿ. ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯದ ಟ್ರಸ್ಟಿಗಳಾದ ಶ್ರೀ ಎಂ. ನರಸಿಂಹನ್, ಟ್ರಸ್ಟಿ ಹಾಗೂ ಸಿಐಐಆರ್ಸಿ ನಿರ್ದೇಶಕರಾದ ಡಾ. ಕೃಷ್ಣ ವೆಂಕಟೇಶ್, ಪ್ರಾಂಶುಪಾಲರಾದ ಡಾ. ಕೆ. ಗೋಪಾಲಕೃಷ್ಣ ಉಪಸ್ಥಿತರಿದ್ದರು.
ವೇದಾಂತದ ಚಿಂತನೆಗಳು, ಭಾರತೀಯ ಜ್ಞಾನಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿ ವಿದ್ಯಾರ್ಥಿಗಳು ತಮ್ಮ ನವೀನ ಆಲೋಚನೆಗಳು ಮತ್ತು ಪರಿಹಾರಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮದ ಆಯೋಜಕರಾಗಿ ಸಿಎಸ್ಇ ವಿಭಾಗದ ಪ್ರಾಧ್ಯಾಪಕರಾದ ಡಾ. ಅಶುತೋಷ್ ಸಿಂಹ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ SIR ವಿರುದ್ಧ ಬೃಹತ್ ಪ್ರತಿಭಟನೆ: ಫ್ರೀಡಂ ಪಾರ್ಕ್ನಲ್ಲಿ ‘People’s Tribunal’

