ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ (GKVK) ಆವರಣದಲ್ಲಿನ ಗಣಪತಿ ದೇವಸ್ಥಾನದ ಹತ್ತಿರ ನವೆಂಬರ್ 28, ಶನಿವಾರದಂದು ಬೆಳಿಗ್ಗೆ 7.00 ರಿಂದ ಸಂಜೆ 4.00 ಗಂಟೆಯವರೆಗೆ “ರೈತ ಸಂತೆ”ಯನ್ನು(Farmer Fair) ಆಯೋಜಿಸಲಾಗಿದೆ.
ಈ ಬಾರಿಯ ರೈತ ಸಂತೆಯಲ್ಲಿ ತೆಂಗಿನಕಾಯಿ ಬರ್ಫಿ, ಸಾಮೆ ಲಡ್ಡು, ಟೊಮೆಟೊ ಹಪ್ಪಳ, ಹ್ಯಾಗನ್ ಫ್ರೂಟ್ ಕುಕೀಗಳು ಮತ್ತು ಕೇಕ್, ಸಾಂಪ್ರದಾಯಿಕ ಸಿಹಿತಿಂಡಿಗಳು, ದ್ರಾಕ್ಷಿ, ಬೇಲದ ಹಣ್ಣು, ಮರದ ಕರಕುಶಲ ವಸ್ತುಗಳು, ರಾಜಮುಡಿ ಅಕ್ಕಿ, ಅಣಬೆ, ಗಿಣ್ಣು, ಅಲಂಕಾರಿಕ ಮೀನುಗಳು, ಆರೋಗ್ಯಕರ ಸಿರಿಧಾನ್ಯ ಬೇಕರಿ ಉತ್ಪನ್ನಗಳು, ಉಪಕರಣಗಳು ಸೇರಿದಂತೆ ತಾಜಾ ಹಣ್ಣು, ತರಕಾರಿಗಳು ಮತ್ತು ಮೌಲ್ಯವರ್ಧಿತ ಸಿರಿಧಾನ್ಯ ಪದಾರ್ಥಗಳು ಲಭ್ಯವಿರಲಿವೆ.
ಇದರ ಜೊತೆಗೆ ಸುಗಂಧ ಮತ್ತು ಔಷಧೀಯ ಸಸ್ಯಗಳು, ಸಾವಯವ ಉತ್ಪನ್ನಗಳು ಹಾಗೂ ಅಲಂಕಾರಿಕ ಗಿಡಗಳು ಜೈವಿಕ ಗೊಬ್ಬರಗಳು, ಎರೆಹುಳು ಗೊಬ್ಬರ, ಕೃಷಿ ಯಂತ್ರೋಪಕರಣಗಳು ಮತ್ತು ಜೈವಿಕ ಕೀಟನಾಶಕಗಳು ಅಡಿಕೆ ಕರಕುಶಲ ವಸ್ತುಗಳು, ಜೇನು ಕೃಷಿ, ವಾಣಿಜ್ಯೀಕರಣ ಉತ್ಪನ್ನಗಳು ಮತ್ತು ಪಶು ಸಂಗೋಪನೆಗೆ ಸಂಬಂಧಿಸಿದ ವಸ್ತುಗಳು ಕೃಷಿ ಪ್ರಕಟಣೆಗಳು ಮತ್ತು ವಿಶ್ವವಿದ್ಯಾನಿಲಯದ ಮಾಹಿತಿ ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿನೂತನ ಸಂತೆಯ ಪ್ರಯೋಜನ ಪಡೆದುಕೊಳ್ಳುವಂತೆ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದ ಕೃಷಿ ಮಾಹಿತಿ ಘಟಕದ ಹಿರಿಯ ವಾರ್ತಾತಜ್ಞರು ಮತ್ತು ಮುಖ್ಯಸ್ಥರಾದ ಡಾ. ಕೆ.ಪಿ. ರಘುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

