ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಕರ್ನಾಟಕ ವಿಧಾನಸಭಾ ಸಚಿವಾಲಯದ ವತಿಯಿಂದ ದಿನಾಂಕ: 07.12.2026 ರಿಂದ 10.12.2026ರ ವರೆಗೆ “ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಪುಸ್ತಕೋತ್ಸವ-ಪುಟಗಳತ್ತ ಪಯಣ”(Book Festival-Pages Journey to the premises of Suvarna Vidhana Soudha, Belgaum) ಉತ್ಸವವನ್ನು ಏರ್ಪಡಿಸಲಾಗುವುದು.
ಉತ್ಸವದಲ್ಲಿ ನಾಡಿನ ಪ್ರಕಾಶಕರು/ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ.1,000/-ಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು ಇವರ ಹೆಸರಿನಲ್ಲಿ ಸಲ್ಲಿಸುವುದು. ಉತ್ಸವದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರಕಾಶಕರು/ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಮುಖ್ಯ ಗ್ರಂಥಪಾಲಕರು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು, ಇವರಿಂದ ಅಥವಾ ವಿಧಾನಸಭೆ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಂದರೆ www.kla.kar.nic.in ಇಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ದಿನಾಂಕ: 30.11.2026 ರಂದು ಸಂಜೆ 5.00 ಗಂಟೆಯೊಳಗೆ ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು ಇವರಿಗೆ ಸಲ್ಲಿಸುವುದು. ನಿರ್ಮಿಸಲಾಗುವ 75 ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಗ್ರಂಥಪಾಲಕರು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು-560001 ದೂ:080-22381350 ಅನ್ನು ಸಂಪರ್ಕಿಸಬಹುದಾಗಿದೆ ಎಂದು ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

JPMorgan, HSBC ಮತ್ತು StoneX ಇತಿಹಾಸ ಸೃಷ್ಟಿ: ಭೌತಿಕ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿ, ಮಾರಾಟ ಮತ್ತು ಅಡಮಾನ ಇಡುವ ಹೊಸ ವ್ಯವಸ್ಥೆ ಆರಂಭ!

ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದೆ. ವಿಶ್ವದ ಪ್ರಮುಖ ಹಣಕಾಸು...

IBM ಅಮೆರಿಕದಲ್ಲಿ ಹೆಚ್ಚಿನ ಉದ್ಯೋಗಗಳಿಗೆ H-1B ವೀಸಾ ಮತ್ತು ಗ್ರೀನ್ ಕಾರ್ಡ್ ಪ್ರಾಯೋಜಕತ್ವ ನಿಲ್ಲಿಸಿದೆ – ಭಾರತೀಯ ಉದ್ಯೋಗಿಗಳಿಗೆ ದೊಡ್ಡ ಆಘಾತ!

ಅಮೆರಿಕದಲ್ಲಿ(America) ಕೆಲಸ ಮಾಡುತ್ತಿರುವ ಸಾವಿರಾರು ವಿದೇಶಿ ಉದ್ಯೋಗಿಗಳಿಗೆ(Foreign Employees), ಅದರಲ್ಲೂ ಭಾರತೀಯ...

ನಕಲಿ ಐಟಿ ಉದ್ಯೋಗದ ಆಮಿಷವೊಡ್ಡಿ ವಿದೇಶಿಯರ ಮಾನವ ಕಳ್ಳಸಾಗಣೆ

ನಕಲಿ ಐಟಿ ಉದ್ಯೋಗದ ಆಮಿಷವೊಡ್ಡಿ ವಿದೇಶಿಯರ ಮಾನವ ಕಳ್ಳಸಾಗಣೆ: ಸೈಬರ್ ವಂಚನೆ...

Topics

ನಕಲಿ ಐಟಿ ಉದ್ಯೋಗದ ಆಮಿಷವೊಡ್ಡಿ ವಿದೇಶಿಯರ ಮಾನವ ಕಳ್ಳಸಾಗಣೆ

ನಕಲಿ ಐಟಿ ಉದ್ಯೋಗದ ಆಮಿಷವೊಡ್ಡಿ ವಿದೇಶಿಯರ ಮಾನವ ಕಳ್ಳಸಾಗಣೆ: ಸೈಬರ್ ವಂಚನೆ...

ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ

ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ: ಲೋಕಸಭೆ, ವಿಧಾನಸಭೆಗಳಲ್ಲಿ...

ಗಾಂಧಿನಗರ(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸದ...

Related Articles