ನ. 28ರಂದು ಬೆಳಗಾವಿಯಲ್ಲಿ ‘ವಿಶ್ವಕರ್ಮ ವೈಭವ ಉತ್ಸವ’

‘ಸದ್ವಿಚಾರ ದರ್ಶನ’ ಪುಸ್ತಕ ಲೋಕಾರ್ಪಣೆ, ಸಾಧಕರಿಗೆ ‘ಕರುನಾಡ ಶಿರೋಮಣಿ ರತ್ನ’ ಪ್ರಶಸ್ತಿ ಪ್ರದಾನ
ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜನೆ
ಬೆಳಗಾವಿ: ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ.) ವತಿಯಿಂದ ‘ವಿಶ್ವಕರ್ಮ ವೈಭವ ಉತ್ಸವ’,(‘Vishwakarma Vaibhava Utsav’) ಪುಸ್ತಕ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 28ರ ಶನಿವಾರ ಬೆಳಿಗ್ಗೆ 9.30ಕ್ಕೆ ಬೆಳಗಾವಿಯ ಸೆಂಟ್ರಲ್ ಹೋಟೆಲ್‌ನಲ್ಲಿ(Central Hotel) ಆಯೋಜಿಸಲಾಗಿದೆ.
ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ‘ಸದ್ವಿಚಾರ ದರ್ಶನ – ಅರಿವಿನಿಂದ ಅನುಭೂತಿಯೆಡೆಗೆ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಚೊಚ್ಚಲ ಹೆಮ್ಮೆಯ ಪ್ರಕಟಣೆಯಾಗಿರುವ ಈ ಕೃತಿಯು ಸದ್ವಿಚಾರ, ಜೀವನಮೌಲ್ಯ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡಿದೆ. ಕೊಲ್ಲಾಪುರದ ಅಧ್ಯಾತ್ಮ ಚಿಂತಕ ವೇ.ಮೂ. ಶಿವರಾಮ ಜೋಗಳೇಕರ್ ಅವರು ಕೃತಿಯನ್ನು ಪರಿಚಯಿಸಲಿದ್ದಾರೆ.
ಸಮಾಜದ ವಿವಿಧ ಸ್ತರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಯುವಪೀಳಿಗೆಗೆ ಪರಿಚಯಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಗಣ್ಯರ ಉಪಸ್ಥಿತಿ ಹಾಗೂ ಸಮಾರಂಭದ ವಿವರ
ಬೆಳಗಾವಿ ಭೂತರಾಮನಹಟ್ಟಿಯ ಶ್ರೀಕ್ಷೇತ್ರ ಮುಕ್ತಿಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಷ.ಬ್ರ. ಮಹರ್ಷಿ ತಪೋರತ್ನ ಶಿವಚಾರ್ಯರು, ಶಿವಸಿದ್ಧ ಸೋಮೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಹೀರೆ ಮುನವಳ್ಳಿಯ ಶಾಂಡಿಲೇಶ್ವರ ಮಠದ ಷ.ಬ್ರ. ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಕರ್ನಾಟಕ ಸರ್ಕಾರದ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಪಿ. ಸುಜ್ಞಾನಮೂರ್ತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಬೆಳಗಾವಿಯ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀ ಬಿ.ಆರ್. ಗಡೇಕರ್ ಅವರು ಜ್ಯೋತಿ ಬೆಳಗಿಸಲಿದ್ದಾರೆ. ಹೈಕೋರ್ಟ್ ವಕೀಲರು ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ಅನಂತನಾಯ್ಕ ಎನ್. ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿ.ಎಸ್. ಡೆವಲಪರ್ಸ್‌ನ ಶ್ರೀ ಚನ್ನಪ್ಪ ಈರಪ್ಪ ಬರಗಾಂವಿ, ಉದ್ಯಮಿ ಶ್ರೀಮತಿ ನಿವೇದತಾ ಸಿದ್ನಾಳ್, ರೇಮಾರ್ಕಬಲ್ ಎಂಟರ್ಟೈನ್ಮೆಂಟ್ ಪ್ರೈ.ಲಿ. ಮತ್ತು ನೇಟಿವ್ ಪ್ರೋಮೋಟರ್ಸ್ ಸಂಸ್ಥಾಪಕ ಶ್ರೀ ಮಿಥುನ್ ಆಚಾರ್, ಕರವೇ ಜಿಲ್ಲಾ ಉಪಾಧ್ಯಕ್ಷ ಶ್ರೀ ರಾಜು ನಾಶಿಪುಡಿ, ಹೋರಾಟಗಾರ ಶ್ರೀ ಬಾಳಸಾಹೇಬ ಕ. ಉದಗಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಡಾ. ಗುಣವಂತ ಮಂಜು ಎಂ.ಎ., ಪಿಎಚ್.ಡಿ (ಚಲನಚಿತ್ರ ನಿರ್ದೇಶಕರು, ಸಾಹಿತಿ ಹಾಗೂ ಅಧ್ಯಕ್ಷರು, ಕನ್ನಡಾಂಬೆ ಸಾಂಸ್ಕೃತಿಕ ಸಂಸ್ಥೆ).ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಸಾಧಕರಿಗೆ ಕರುನಾಡ ಶಿರೋಮಣಿ ರತ್ನ ಪ್ರಶಸ್ತಿ
ಸಮಾಜಸೇವೆ, ಶಿಕ್ಷಣ, ಉದ್ಯಮ, ಕೃಷಿ, ಸಂಗೀತ, ಮಾಧ್ಯಮ, ಕ್ರೀಡೆ ಹಾಗೂ ಅಧ್ಯಾತ್ಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ನಾಡಿನ ಹಲವು ಸಾಧಕರಿಗೆ ಪ್ರತಿಷ್ಠಿತ ‘ಕರುನಾಡ ಶಿರೋಮಣಿ ರತ್ನ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು.
ನೃತ್ಯ ಕ್ಷೇತ್ರದ ಸಾಧಕಿಯಾದ ಡಾ. ವಿದುಷಿ ಸ್ಫೂರ್ತಿ ಕೊಂಕಣಿ ಅವರಿಗೆ ‘ನಾಟ್ಯ ಗುರುವಂದನಾ ಪ್ರಶಸ್ತಿ’ ಹಾಗೂ ಯುವ ನೃತ್ಯ ಪ್ರತಿಭೆಗಳಾದ ಮಾನಸ್ಸಿ ರವಿಪ್ರಸಾದ್ ಕಲಗುಡಿ, ಸ್ನೇಹಾ ಮರಾಠ ಮತ್ತು ವೈಶಾಲಿ ಜಿ. ಅವರಿಗೆ ‘ನಾಟ್ಯ ಕಿಶೋರಿ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಗುವುದು.
ಇದೇ ಸಂದರ್ಭದಲ್ಲಿ ಯಮಕನಮರಡಿಯ ಬಾಸಿಂಗ ತಯಾರಕರಾದ ಶ್ರೀ ಸೋಮಶೇಖರ ಹೊರಕೇರಿ ಅವರು ತಮ್ಮ ಪುತ್ರ ದಿವಂಗತ ವಿನಾಯಕ ಹೊರಕೇರಿ ಅವರ ಪುಣ್ಯಸ್ಮರಣಾರ್ಥ ಗ್ರಂಥ ದಾಸೋಹಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ನಾಡಿನ ಸಾಂಸ್ಕೃತಿಕ ವೈಭವ, ಸಾಹಿತ್ಯ ಹಾಗೂ ಸಾಧಕರ ಸೇವೆಯನ್ನು ಗೌರವಿಸುವ ಈ ಉತ್ಸವಕ್ಕೆ ಕಲಾಸಕ್ತರು, ಸಾಹಿತ್ಯಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ.) ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ.) ಅಧ್ಯಕ್ಷರಾದ ಶ್ರೀಮತಿ ನಿತ್ಯಾ ಎಂ. ಆಚಾರ್ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ಶ್ರೀಮತಿ ನಿತ್ಯಾ ಎಂ. ಆಚಾರ್
ಅಧ್ಯಕ್ಷರು, ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ.)
ಅಧ್ಯಕ್ಷರು, ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ.)
ದೂರವಾಣಿ: 9535657253

Hot this week

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು...

ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

  ಬೆಂಗಳೂರು: ಬೆಂಗಳೂರಿನ ಎಂ.ಎಸ್. ಎಂಜಿನಿಯರಿಂಗ್(M.S.Engineering) ಕಾಲೇಜಿನಲ್ಲಿ ಇಂದು ಸಂವಿಧಾನ ದಿನವನ್ನು ಅತ್ಯಂತ...

ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪರಿಸರ ಸ್ನೇಹಿ...

Topics

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ನಾಡಿನ ಜನತೆಗೆ ಅತೀ ಅಮೂಲ್ಯವಾದ ಪುಸ್ತಕಗಳನ್ನು...

ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

  ಬೆಂಗಳೂರು: ಬೆಂಗಳೂರಿನ ಎಂ.ಎಸ್. ಎಂಜಿನಿಯರಿಂಗ್(M.S.Engineering) ಕಾಲೇಜಿನಲ್ಲಿ ಇಂದು ಸಂವಿಧಾನ ದಿನವನ್ನು ಅತ್ಯಂತ...

ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪರಿಸರ ಸ್ನೇಹಿ...

ಬೆಂಗಳೂರಿನ ಬ್ಲೂ ಲೈನ್ ಮೆಟ್ರೋಗೆ ಟ್ರಯಲ್ ರನ್ ಆರಂಭ: ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿವರೆಗೆ ರೈಲು ಸಂಚಾರ ಪರೀಕ್ಷೆ

 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಪ್ರತಿನಿತ್ಯ ಪರದಾಡುತ್ತಿರುವ ಲಕ್ಷಾಂತರ...

Related Articles