ಪುಸ್ತಕದ ಪರಿಚಯ – ಕನ್ನಡ ಕಿಟ್

ಕನ್ನಡ ಕಿಟ್ (Kannada Kit) ಪೋಷಕರು ಮತ್ತು ಕನ್ನಡ ಶಿಕ್ಷಕರಿಗಾಗಿ ಇರುವ ಒಂದು ಪುಸ್ತಕವಾಗಿದೆ. ಇದು 10 ರಿಂದ 16 ವರ್ಷ ವಯಸ್ಸಿನ ಮಕ್ಕಳ ಪೋಷಕರಿಗೆ ಸೂಕ್ತವಾಗಿದೆ. ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ (Teachers) ಶಿಕ್ಷಕರು ಈ ಚಟುವಟಿಕೆಗಳನ್ನು ಬಳಸಿಕೊಳ್ಳಬಹುದು. ಈ ಚಟುವಟಿಕೆಗಳು ಬರವಣಿಗೆಗಿಂತ ಹೆಚ್ಚಾಗಿ ಮೌಖಿಕವಾಗಿರುತ್ತವೆ. ಚಟುವಟಿಕೆಗಳು ಸಂವಾದಾತ್ಮಕವಾಗಿವೆ (interactive). ಇವುಗಳನ್ನು ವೈಯಕ್ತಿಕವಾಗಿ ನಡೆಸುವುದಕ್ಕಿಂತ ವಿದ್ಯಾರ್ಥಿಗಳ ಗುಂಪಿಗೆ ನಡೆಸಿದಾಗ ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಈ ಚಟುವಟಿಕೆಗಳನ್ನು ಕಲಿಯಲು ಮೋಜಿನ ಪರಿಕಲ್ಪನೆಗಳು ಮತ್ತು ಆಟ ಆಧಾರಿತ ವಿಧಾನಗಳಲ್ಲಿ ವಿನ್ಯಾಸ (Designed)ಗೊಳಿಸಲಾಗಿದೆ. ಖರೀದಿಸುವಾಗ ಹೇಗೂ ಸೂಚನೆಗಳನ್ನು ನೀಡಲಾಗುತ್ತದೆ.

ಬೆಲೆ 300 ರೂಪಾಯಿಗಳು
ಈ ಪುಸ್ತಕವನ್ನು ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ಬರೆಯಲಾಗಿದೆ, ವ್ಯಾಕರಣ ಅಥವಾ ಆಡುಭಾಷೆಯ ಕನ್ನಡಕ್ಕಾಗಿ ಅಲ್ಲ.
ಈ ಪುಸ್ತಕಕ್ಕೆ ಯಾವುದೇ ಪಠ್ಯಕ್ರಮವಿಲ್ಲ.
ಕನ್ನಡ ಕಲಿಯಲು ಬಯಸುವ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನದೊಂದಿಗೆ ಈ ಪುಸ್ತಕವನ್ನು ಬಳಸಬಹುದು.
ತಮ್ಮ ವಿದ್ಯಾರ್ಥಿಗಳಿಗೆ ಹೊಸ ವಿಧಾನದಲ್ಲಿ ಕನ್ನಡ ಕಲಿಸಲು ಬಯಸುವ ಕನ್ನಡ ಶಿಕ್ಷಕರು ಈ ಪುಸ್ತಕವನ್ನು ಖರೀದಿಸಬಹುದು.

ಮುದ್ರಕರು :- ಬ್ರಾಹ್ಮಿ ಅಕೆಡಮಿಕ್ ಟ್ರಸ್ಟ್

ಈ ಕನ್ನಡ ಕಿಟ್ ಕನ್ನಡದಲ್ಲಿರುವ ಚಟುವಟಿಕೆ ಆಧಾರಿತ ಪುಸ್ತಕವಾಗಿದೆ. ಕೆಲವು ಚಟುವಟಿಕೆಗಳ ಮೂಲಕ ಕನ್ನಡ ಭಾಷಾ ಬೋಧನೆಗೆ ಈ ಪುಸ್ತಕ ಉಪಯುಕ್ತವಾಗಿದೆ. ಈ ಪುಸ್ತಕವು ಶಿಕ್ಷಕರು, ಪೋಷಕರು ಮತ್ತು ಉನ್ನತ ತರಗತಿಯ ಕನ್ನಡ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.

ಲೇಖಕರು : ರಾಧಿಕಾ ಜಿ ಎನ್

ಪುಸ್ತಕ ಪರಿಚಯ ಹೃಷಿಕೇಶ್ ಎಂ ಎನ್ ಆರ್

ಪುಸ್ತಕಕ್ಕಾಗಿ ಸಂಪರ್ಕಿಸಿ 9900322338

Hot this week

ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪರಿಸರ ಸ್ನೇಹಿ...

ಬೆಂಗಳೂರಿನ ಬ್ಲೂ ಲೈನ್ ಮೆಟ್ರೋಗೆ ಟ್ರಯಲ್ ರನ್ ಆರಂಭ: ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿವರೆಗೆ ರೈಲು ಸಂಚಾರ ಪರೀಕ್ಷೆ

 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಪ್ರತಿನಿತ್ಯ ಪರದಾಡುತ್ತಿರುವ ಲಕ್ಷಾಂತರ...

Topics

ಬೆಂಗಳೂರು: ಗುಜರಾತಿನ ಆನಂದ್‍ನಲ್ಲಿರುವ ‘ಕೃಷಿ ಹವಾಮಾನ ಶಾಸ್ತ್ರಜ್ಞರ ಸಂಘ’ (Association of...

Related Articles