ನವೆಂಬರ್ 13, 2026 ರಂದು ಹೊರಡಿಸಲಾದ ಈ ಅಧಿಸೂಚನೆಯ ಪ್ರಕಾರ, ನಿಯೋಜನೆಗೆ ಒಳಪಡುವ ಹುದ್ದೆಗಳ ನಿಯೋಜನಾ ಸ್ಥಳ ಬೆಂಗಳೂರು ಆಗಿರುತ್ತದೆ.
ಖಾಲಿ ಇರುವ ಹುದ್ದೆಗಳು ಮತ್ತು ವೇತನ ಶ್ರೇಣಿ:
ಹಿರಿಯ ಲೆಕ್ಕಾಧಿಕಾರಿ 05 ಹುದ್ದೆ Level-6 (ರೂ. 35,400 – ರೂ. 1,12,400), ಕಿರಿಯ ವಿಭಾಗ ಗುಮಾಸ್ತ (LDC) 02 ಹುದ್ದೆ Level-2 (ರೂ. 19,900 – ರೂ. 63,200), ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)-02 ಹುದ್ದೆ, Level-1 (ರೂ. 18,000 – ರೂ. 56,900) ಹುದ್ದೆಗಳು.
ಪ್ರಮುಖ ನಿಯಮಗಳು ಮತ್ತು ಅರ್ಹತೆಗಳು:
ನಿಯೋಜನೆಯ ಅವಧಿಯು ಆರಂಭದಲ್ಲಿ ಮೂರು ವರ್ಷಗಳಾಗಿದ್ದು, ಆಡಳಿತಾತ್ಮಕ ಅಗತ್ಯತೆ ಮತ್ತು ಮೂಲ ಸಂಸ್ಥೆಯ ಒಪ್ಪಿಗೆಯ ಮೇರೆಗೆ ವಿಸ್ತರಿಸಬಹುದು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯೋಮಿತಿ 56 ವರ್ಷ ಮೀರಿರಬಾರದು. ಈಗಾಗಲೇ ನಿಯಮಿತ ಆಧಾರದ ಮೇಲೆ ಹೆಚ್ಚಿನ ವೇತನ ಮಟ್ಟದ ಹುದ್ದೆಯಲ್ಲಿರುವ ಅಧಿಕಾರಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
ನಿಗದಿತ ಅರ್ಜಿ ನಮೂನೆ, ಘೋಷಣೆ ಮತ್ತು ಕಚೇರಿ/ಇಲಾಖಾ ಮುಖ್ಯಸ್ಥರ ಪ್ರಮಾಣಪತ್ರ ಸೇರಿದಂತೆ ಕಳೆದ ಐದು ವರ್ಷಗಳ APAR ದೃಢೀಕೃತ ಪ್ರತಿಗಳು, ವಿಜಿಲೆನ್ಸ್ ಕ್ಲಿಯರೆನ್ಸ್ ಹಾಗೂ ಸಮಗ್ರತೆಯ ಪ್ರಮಾಣಪತ್ರದೊಂದಿಗೆ ಅರ್ಜಿಗಳನ್ನು 2026 ರ ಡಿಸೆಂಬರ್ 14 ರೊಳಗೆ ಬೆಂಗಳೂರಿನ ಕರ್ನಾಟಕ ವೃತ್ತದ ಸಂವಹನ ಲೆಕ್ಕ ನಿಯಂತ್ರಕರ ಕಚೇರಿಯ Sr. AO (Admin) ಅವರಿಗೆ ಸಲ್ಲಿಸಬೇಕು.
ಅಪೂರ್ಣ ಅರ್ಜಿಗಳು ಅಥವಾ ನಿಗದಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತ ಅಭ್ಯರ್ಥಿಗಳು ಮುಂಗಡ ಪ್ರತಿಯನ್ನು ನೇರವಾಗಿ ಕಚೇರಿಗೆ ಕಳುಹಿಸಬಹುದಾದರೂ, ಸೂಕ್ತ ಮಾರ್ಗದ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ತಲುಪಿದ ನಂತರವೇ ಅದನ್ನು ಪರಿಗಣಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

