ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ನವೆಂಬರ್ 20 ರಿಂದ ಬೆಂಗಳೂರು-ಹೊಸಪೇಟೆ ಮಾರ್ಗದಲ್ಲಿ ಹೊಸದಾಗಿ ವೋಲ್ವೋ ಮಲ್ಟಿ ಆಕ್ಸಲ್ ಸಾರಿಗೆಯನ್ನು(New Volvo Multi Axle Transport) ಕಾರ್ಯಾಚರಣೆ ಮಾಡಲಾಗುತ್ತಿದೆ.
ಈ ಬಸ್ ಸೇವೆಯು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (KBS) ಹೊರಟು ತುಮಕೂರು, ಸಿರಾ, ಚಿತ್ರದುರ್ಗ ಹಾಗೂ ಕೂಡ್ಲಿಗಿ ಮಾರ್ಗವಾಗಿ ಹೊಸಪೇಟೆಯನ್ನು ತಲುಪಲಿದೆ.
ವೇಳಾಪಟ್ಟಿ:
ಬೆಂಗಳೂರಿನಿಂದ ಹೊಸಪೇಟೆಗೆ: ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಜೆ 17:00 ಹೊರಟು ಕೂಡ್ಲಿಗಿ: ರಾತ್ರಿ 22:30 ಹೊಸಪೇಟೆ: ರಾತ್ರಿ 23:15 ತಲುಪಲಿದೆ.
ಹೊಸಪೇಟೆಯಿಂದ ಬೆಂಗಳೂರಿಗೆ: ಹೊಸಪೇಟೆಯಿಂದ ಬೆಳಗ್ಗೆ 06:15 ಹೊರಟು ಕೂಡ್ಲಿಗಿ ಬೆಳಗ್ಗೆ 07:00 ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮಧ್ಯಾಹ್ನ 12:45 ತಲುಪಲಿದೆ.
ಆನ್ಲೈನ್ ದರ ವಿವರಗಳು:
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಕೂಡ್ಲಿಗಿ ವರೆಗೆ ವಯಸ್ಕರಿಗೆ ರೂ. 740/-, ಮಕ್ಕಳಿಗೆ ರೂ. 580/-. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ದಿಂದ ಹೊಸಪೇಟೆ ವರೆಗೆ ವಯಸ್ಕರಿಗೆ ರೂ. 850/- ಮಕ್ಕಳಿಗೆ ರೂ. 670/- ನಿಗದಿಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

