ಕಾಸರಗೋಡು ಕನ್ನಡ ಗ್ರಾಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ

ಕಾಸರಗೋಡು: (Kasaragod) ಅನ್ನಪೂರ್ಣ ಪ್ರಕಾಶನ, (Annapoorna Prakashana) ಸಿರಿಗೇರಿ, (Sirigeri) ಸಿರುಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ (Bellary) ಇವರ ನೇತೃತ್ವದಲ್ಲಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇವರ ಸಹಯೋಗದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ (GS Shivarudrappa) ಜನ್ಮಶತಮಾನೋತ್ಸವ ಸಾಹಿತ್ಯೋತ್ಸವ, ಭಾವಗೀತೆಗಳ ಗಾಯನ ಹಾಗೂ ಕವಿಗೋಷ್ಠಿಯನ್ನು ಕಾಸರಗೋಡು ಕನ್ನಡ ಗ್ರಾಮ (Kannada Grama) ದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.

ಗಡಿನಾಡು ಕಾಸರಗೋಡಿನಲ್ಲಿ ನಡೆದ ಈ ಸಮಾರಂಭವನ್ನು ಪತ್ರಕರ್ತ ಮಹಾನುಭಾವಿ ಮಠ ಉದ್ಘಾಟಿಸಿದರು. ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೇರಳ-ಕರ್ನಾಟಕ ಭವನಕ್ಕೆ ಕರ್ನಾಟಕ ಸರ್ಕಾರವು ಮುಂದಿನ ಬಜೆಟ್‌ನಲ್ಲಿ 10 ಕೋಟಿ ರೂ. ಮೊತ್ತವನ್ನು ಕಾಯ್ದಿರಿಸಬೇಕೆಂದು ಅವರು ಆಗ್ರಹಿಸಿದರು.

2026ರ ನವೆಂಬರ್ 28 ಮತ್ತು 29ರಂದು ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವಕ್ಕೆ ಬೆಂಗಳೂರು ಹಾಗೂ ಇತರ ಜಿಲ್ಲೆಗಳಿಂದ ಪತ್ರಕರ್ತರು ಮತ್ತು ಮಾಧ್ಯಮದವರ ನಿಯೋಗವು ಎರಡು ದಿನಗಳ ಕಾಲ ಭಾಗವಹಿಸಲಿದ್ದು, ಸಮ್ಮೇಳನಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲಾಗುವುದು ಎಂದು ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಪ್ರಕಾಶನದ ಪ್ರಕಾಶಕ, ಲೇಖಕ, ಪತ್ರಕರ್ತ ಸಿರಿಗೇರಿ ಯರಿಸ್ವಾಮಿ ಬೆಂಗಳೂರು ಅವರು ಪ್ರಸ್ತಾವನೆಗೈದು, ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನಕ್ಕೆ ಇಂದಿನಿಂದಲೇ ಪತ್ರಿಕಾ ಹಾಗೂ ಮಾಧ್ಯಮಗಳ ಮೂಲಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪತ್ರಕರ್ತ ಶಿವಯೋಗಿ ಮಹಾನುಭಾವಿ ಮಠ ಅವರು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿರುವ ಪತ್ರಿಕಾ ಸಂಪಾದಕರ ಸಂಘಟಣೆಗಳ ಮೂಲಕ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನಕ್ಕೆ ಪ್ರಚಾರ ನೀಡಲಾಗುವುದು ಎಂದು ಹೇಳಿದರು.

ವಿಶೇಷ ಆಹ್ವಾನಿತರು

ವಿಶೇಷ ಆಹ್ವಾನಿತರಾಗಿ ಉಪನ್ಯಾಸಕಿ ಪವಿತ್ರಾ ಕಾಮತ್ ಮಂಗಳೂರು, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ., ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸುಭಾಷ್ ಪೆರ್ಲ, ವೆಂಕಟ್ ಭಟ್ ಎಡನೀರು, ಜಯಾನಂದ ಕುಮಾರ್ ಕಾಸರಗೋಡು, ಕೆ.ಎನ್. ವೆಂಕಟ್ರಮಣ ಹೊಳ್ಳ, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಪ್ರಧಾನ ಸಂಚಾಲಕ ಉನೈಸ್ ಪೆರಾಜೆ ಸುಳ್ಯ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಕೆ. ಗುರುಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್ ಶಂಕರ್ ಕೆ. ಜೆ.ಪಿ. ನಗರ, ಗುರುರಾಜ ಕಾಸರಗೋಡು, ಜೆ.ಪಿ. ಮಣಿಯಂಪಾರೆ, ರವೀಂದ್ರ ಕುತ್ತಿಕೋಲು ಅವರು ಭಾಗವಹಿಸಿದ್ದರು.

ಭಾವಗೀತೆ ಗಾಯನ ಸಂಭ್ರಮ
ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಭಾವಗೀತಾ ಗಾಯನ ಸಂಭ್ರಮದಲ್ಲಿ ವಸಂತ ಬಾರಡ್ಕ, ದಿವಾಕರ ಪಿ. ಕಾಸರಗೋಡು, ಕಾವ್ಯ ಕುಶಲಕುಮಾರ ಕನ್ನಡ ಗ್ರಾಮ, ಗ್ರೀಷ್ಮ ಜಯರಾಮ ಕನ್ನಡ ಗ್ರಾಮ, ಜೆ.ಪಿ. ಮಣಿಯಂಪಾರೆ, ಪವಿತ್ರ ಜೆ.ಪಿ. ಮಣಿಯಂಪಾರೆ, ಶ್ರೀ ದುರ್ಗಾ ಮೆಲೋಡಿಸ್ ಮಣಿಯಂಪಾರೆ, ಗುರುರಾಜ ಕಾಸರಗೋಡು, ಸ್ವರಗಾನ ಸಂಗೀತ ಬಳಗ ಕಾಸರಗೋಡು ತಂಡದವರು ಪಾಲ್ಗೊಂಡಿದ್ದರು.

ಭಾವಪೂರ್ಣ ಕವಿಗೋಷ್ಠಿ ಅಧ್ಯಕ್ಷತೆ:
ಆಲ್ಬೂರು ಶಿವರಾಜ

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ, ಲೇಖಕ, ಕವಿಗಳಾದ ಆಲ್ಬೂರು ಶಿವರಾಜ ಅವರು ವಹಿಸಿದ್ದರು. 25ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದ ಈ ಗೋಷ್ಠಿಯಲ್ಲಿ ಕನ್ನಡ, ಬಂಧುತ್ವ, ಪರಿಸರ.ಮಾನವೀಯತೆ ಮತ್ತು ಹೆಣ್ಣಿನ ಗೌರವದ ಬಗ್ಗೆ ಮನಮುಟ್ಟುವ ಕವನಗಳು ಮೊಳಗಿದವು.

ಅಧ್ಯಕ್ಷೀಯ ನುಡಿಯಲ್ಲಿ ಆಲ್ಬೂರು ಶಿವರಾಜ ಅವರ ಮುಖ್ಯಾಂಶ:
ದೇವರು ಗುಡಿಯೊಳಗೆ ಇಲ್ಲ, ಹೃದಯದೊಳಗೆ ಇದ್ದಾನೆ. ದೇವರು ಕಲ್ಲಿನೊಳಗಿಲ್ಲ, ಕರ್ಮದೊಳಗೆ ಇದ್ದಾನೆ.
ಮಕ್ಕಳ, ಅಣ್ಣ-ತಮ್ಮ, ಅಕ್ಕ-ತಂಗಿ, ತಾಯಿ-ತಂದೆಯ ಪ್ರೀತಿ, ಪ್ರೇಮ, ಸಂತೋಷದೊಳಗಿದ್ದಾನೆ.
ದೇವರು ದೂರದಲ್ಲಿ ಇಲ್ಲ, ಬಂಧುತ್ವದಲ್ಲಿ ಇದ್ದಾನೆ.
ಹೆಣ್ಣನ್ನು ಗೌರವಿಸುವುದೇ, ನಿಜವಾದ ಕವಿತೆ.
ಹೆಣ್ಣನ್ನು ರಕ್ಷಿಸುವುದೇ ನಿಜವಾದ ಬಂಧುತ್ವ.
ಹೆಣ್ಣು ಮನೆಯಲ್ಲಿ ನಕ್ಕರೆ ಸಂತಸದ ಸತ್ವ.
ಹೆಣ್ಣು ಸಂತೋಷವಾಗಿದ್ದರೆ ದೇಶದಲ್ಲಿ ಸಂತಸ. ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪನವರ ಸಾಹಿತ್ಯದ ಅರ್ಥವನ್ನು ತಿಳಿಸುತ್ತಾ..

ಕಾ.. ಸ.. ರ.. ಗೋ.. ಡು..
ಕಾಸರಗೋಡು – ಕನ್ನಡಿಗರಿಗೆ ಒಂದು ಭಾವನಾತ್ಮಕ ಯಾತ್ರೆ

ಕವಿಗೋಷ್ಠಿಯಲ್ಲಿ 25 ಜನಕ್ಕೂ ಹೆಚ್ಚು ಕವಿಗಳು ಕವನ ವಾಚನ ವಾಚಿಸಿದವರ ಕವನಗಳ ಅರ್ಥವನ್ನು ಕಾಸರಗೋಡಿನ ಅರ್ಥದಲ್ಲಿ ಕವಿಗೋಷ್ಠಿ ಅಧ್ಯಕ್ಷರಾದ ಎ.ಬಿ. ಶಿವರಾಜ ಅವರು ತಮ್ಮ ಭಾಷಣದಲ್ಲಿ ಸಂದೇಶದ ಮೂಲಕ ವಿವರಿಸಿ ಅರ್ಥ ನೀಡಿದರು.

ಕಾ – ಕಾಣದ ಕಡಲಿಗೆ ಹಂಬಲಿಸಿದ ಮನ
ಕಾಸರಗೋಡು ಅಂದರೆ ಕಣ್ಣಿಗೆ ಕಾಣದ, ಮನಸ್ಸಿಗೆ ಮಾತ್ರ ಕಾಣುವ ಕಡಲು. ಇಲ್ಲಿ ಬದುಕು ಅಂದರೆ ಕಡಲನ್ನು ಹುಡುಕುವ ಹಂಬಲ.
ಸಾ – ಸಾಗರದ ಅಲೆಗಳಲ್ಲಿ ಸಾಹಿತ್ಯ
ಇಲ್ಲಿ ಅಲೆ ಬರುವುದು ಕೇವಲ ನೀರಾಗಿ ಅಲ್ಲ, ಕವಿತೆಯಾಗಿ. ಜಿ.ಎಸ್. ಶಿವರುದ್ರಪ್ಪನವರ ಕಾವ್ಯ ಇಲ್ಲಿ ಹುಟ್ಟಿದ್ದು ಹೀಗೆಯೇ.
ರಾ – ರಾಗ – ತಾಳ – ಭಾವದ ರಸಧಾರೆ
ಕಾಸರಗೋಡು ಅಂದರೆ ಯಕ್ಷಗಾನದ ರಾಗ, ತುಳು-ಕನ್ನಡ-ಮಲಯಾಳಂ ಬೆರೆತ ರಸದ ಹೊಳೆ. ಭಾಷೆ ಬೇರೆ ಆದರೂ ಭಾವ ಒಂದೇ.

ಗೋ – ಗೋಧೂಳಿಯ ಬೆಳಕಿನಲ್ಲಿ ಗೌರವ

ಸಂಜೆಯ ಗೋಧೂಳಿಯಲ್ಲಿ ಕಡಲತೀರದಲ್ಲಿ ನಿಂತರೆ, ಇಲ್ಲಿನ ಮಣ್ಣಿನ ಗೌರವ, ಹಿರಿಯರ ಆಶೀರ್ವಾದ ಅರ್ಥವಾಗುತ್ತದೆ. ಇದು ಗೋವುಗಳಂತೆ ಶಾಂತ, ಗೋಧೂಳಿಯಂತೆ ಪವಿತ್ರ ನೆಲ.
ಡು – ಡುಬ್ಬವಿಲ್ಲದ ಡುಮ್ಮಿಕ್ಕುವ ಪ್ರೀತಿ
ಇಲ್ಲಿ ಡುಬ್ಬವಿಲ್ಲ, ಮೋಸವಿಲ್ಲ. ಎದೆಯಲ್ಲಿ ಡುಮ್ಮಿಕ್ಕುವಷ್ಟು ಪ್ರೀತಿ ಇದೆ. ಅಪರಿಚಿತನನ್ನೂ “ಬನ್ನಿ, ಊಟ ಮಾಡಿ” ಎನ್ನುವ ಡುಮ್ಮಿಕ್ಕುವ ಬಂಧುತ್ವ ಇದೆ.

ಕೋಟೆ ಬೇಡ, ಬಂಧುತ್ವ ಬೇಕು ಗೋಡೆ ಬೇಡ, ಪ್ರೀತಿ ಬೇಕು!ಅದೇ ಕಾಸರಗೋಡು!
ಕಾಸರಗೋಡು ಎಂದರೆ
ಕಾಸಾರ = ಸರೋವರ,
ಕ್ರೋಡ = ನಿಧಿಯನ್ನು ಇಡುವ ಸ್ಥಳ.
ಕಾಸರ ಕಾಡು = ಕಂಜಿರಂ ಮರಗಳ ಕಾಡು.
ಸಪ್ತ ಭಾಷಾ ಸಂಗಮ ಭೂಮಿ.
ಕನ್ನಡ, ಮಲಯಾಳಂ, ತುಳು, ಕೊಂಕಣಿ, ಬ್ಯಾರಿ, ಮರಾಠಿ, ಉರ್ದು ಬೆರೆತ ಕಾಸರಗೂಡಾಗಿದೆ. ಕಾಸರಗೋಡಿನ ಅರ್ಥ ತಿಳಿಸುವುದರ ಮುಖಾಂತರ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಕವನಗಳ ಅರ್ಥಪೂರ್ಣತೆ ಭಾಷಣ ನುಡಿದರು.

ಗಡಿನಾಡಿನ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಕವಿಗೋಷ್ಠಿಯು ಕೇವಲ ಕವನ ಓದುವ ವೇದಿಕೆಯಾಗದೆ, ಕನ್ನಡಿಗರ ಬಂಧುತ್ವವನ್ನು ಬೆಸೆಯುವ ಹಬ್ಬವಾಯಿತು.

ಕವನ ವಾಚಿಸಿದ ಕವಿಗಳು

ದೇವರಾಜ್ ಆಚಾರ್ಯ ಸೂರಂಬೈಲು, ಕು. ದೀಕ್ಷಾ ಪಾಂಡಿಗಾಯ, ಕು. ಗ್ರೀಷ್ಮ ಬಳ್ಳ, ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ, ಜೋಷ್ನಾ ಕಡೆಂದೇಲು, ಸುಮನ ಕರಿಂಬಿಲ, ಕು. ಅವನಿ ವಿಜಯಕಾನ, ತೇಜಸ್ವಿನಿ ಮನೀಶ್ ಪುಚ್ಚೆಕಾಡು, ಸುಂದರ ಭಟ್ಟ ಕಾನ, ಶಶಿಕಲಾ ಟೀಚರ್ ಕುಂಬಳೆ, ಬಾಲಕೃಷ್ಣ ನಾಯ್ಕ ಎಳ್ಕಾನ, ನಿರ್ಮಲಾ ಸೇಸಪ್ಪ ಖಂಡಿಗೆ, ಸುಮಿತ್ರ ಎರ್ಪಕಟ್ಟೆ, ಚಿತ್ರಕಲಾ ದೇವರಾಜ್ ಸೂರಂಬೈಲು, ಮಾ. ದರ್ಶೀನ್ ಚಿರಾಲ್ ಡಿ. ಆಚಾರ್ಯ, ಕು. ನೀತಿಕಾ ಚೌಕಿ, ಮಲ್ಲಿಕಾ ರೆಂಜತಮೂಲೆ, ನಿವೇದಿತ ವಳಮಲೆ ಬದಿಯಡ್ಕ, ಮಾ. ಕೃಪೇಶ್ ಕಲ್ಲಕಟ್ಟ, ರಾಧಾಕೃಷ್ಣ ಕುರುಮುಜ್ಜಿ, ಶ್ರುತಿ ಮೀಪುಗುರಿ ಅವರು ಕವಿತಾ ವಾಚನ ಮಾಡಿದರು.

ವೆಂಕಟಭಟ್ ಎಡನೀರು, ಸುಶೀಲಾ ಕೆ. ಪದ್ಯಾಣ, ಸುಭಾಷ್ ಪೆರ್ಲ, ಕಾವ್ಯ ಕುಶಲ, ಉದಯ ಕುಮಾರ್ ಕೆ., ಶಶಿಕುಮಾರ ಕೂಡ್ಲು, ಕುಶಲ ಕುಮಾರ್ ಕೆ. ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

ಕಾಸರಗೋಡು ಕನ್ನಡ ಗ್ರಾಮದಲ್ಲಿ 2026ರ ನವೆಂಬರ್ 28 ಮತ್ತು 29ರಂದು ನಡೆಯುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಅತ್ಯುತ್ತಮ ಕವನ ವಾಚನ ಮಾಡಿದವರಿಗೆ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ತಿಳಿಸಿದರು.

ವರದಿ – ಎಬಿಎಸ್

Hot this week

BIG NEWS : ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ವಿಶ್ವದ ಖ್ಯಾತ ಟೆನಿಸ್ ಆಟಗಾರರು ಭಾಗಿ!

ಬೆಂಗಳೂರು : ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಐದನೇ ಸೀಸನ್‌ಗೆ...

BIG NEWS : 80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಆದೇಶ

ರಾಜ್ಯ ಸರ್ಕಾರದ ವಿವಿಧ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ(Delhi) ಸಮೀಪದ ನೋಯ್ಡಾ(Noida) ಮತ್ತು ಗ್ರೇಟರ್ ನೋಯ್ಡಾ(Greater...

ನವದೆಹಲಿ: ಭಾರತದ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಕಲೆ ಮತ್ತು ನಾಗರಿಕತೆಯ ಸಾವಿರಾರು...

Topics

BIG NEWS : ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ವಿಶ್ವದ ಖ್ಯಾತ ಟೆನಿಸ್ ಆಟಗಾರರು ಭಾಗಿ!

ಬೆಂಗಳೂರು : ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಐದನೇ ಸೀಸನ್‌ಗೆ...

BIG NEWS : 80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಆದೇಶ

ರಾಜ್ಯ ಸರ್ಕಾರದ ವಿವಿಧ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ(Delhi) ಸಮೀಪದ ನೋಯ್ಡಾ(Noida) ಮತ್ತು ಗ್ರೇಟರ್ ನೋಯ್ಡಾ(Greater...

ನವದೆಹಲಿ: ಭಾರತದ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಕಲೆ ಮತ್ತು ನಾಗರಿಕತೆಯ ಸಾವಿರಾರು...

ಗ್ರಾಹಕರಿಗೆ ಹಾಲಿನ ದರ ಏರಿಕೆ ಬಿಸಿ: ಮದರ್ ಡೈರಿ ಹಾಲಿನ ಬೆಲೆ ಲೀಟರ್‌ಗೆ ₹2ರಿಂದ ₹4 ಹೆಚ್ಚಳ!

ನವದೆಹಲಿ: ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ...

Related Articles