ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯು(The Bangalore Water Supply and Sewerage Board) ತನ್ನ ವ್ಯಾಪ್ತಿಯ ವಿವಿಧ ಉಪವಿಭಾಗಗಳಲ್ಲಿ ನಾಳೆ, ಅಂದರೆ 2026ರ ನವೆಂಬರ್ 12ರ ಗುರುವಾರದಂದು ಬೆಳಿಗ್ಗೆ 9.30 ರಿಂದ 11.00 ಗಂಟೆಯವರೆಗೆ ‘ನೀರಿನ ಅದಾಲತ್'(Water Adalat) ಆಯೋಜಿಸಿದೆ.
ಈ ಅದಾಲತ್‌ನಲ್ಲಿ ಸಾರ್ವಜನಿಕರ ನೀರಿನ ಬಿಲ್ಲುಗಳ ಸಮಸ್ಯೆಗಳು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯ ಸಂಪರ್ಕವನ್ನು ಗೃಹೇತರ ಬಳಕೆಯ ಸಂಪರ್ಕಕ್ಕೆ ಪರಿವರ್ತಿಸುವಲ್ಲಿನ ವಿಳಂಬ ಹಾಗೂ ಇತರೆ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುತ್ತದೆ.
ಅದಾಲತ್ ನಡೆಯುವ ಪ್ರಮುಖ ಉಪವಿಭಾಗಗಳು ಮತ್ತು ವ್ಯಾಪ್ತಿಯ ಸೇವಾಠಾಣೆಗಳ ವಿವರ:
ದಕ್ಷಿಣ ಉಪವಿಭಾಗಗಳು:
ದಕ್ಷಿಣ-1-1 ಜೆ.ಪಿ.ನಗರ 8ನೇ ಘಟ್ಟ, ಜಂಬೂಸವಾರಿ ದಿಣ್ಣೆ ಮುಖ್ಯರಸ್ತೆ – ಜೆ.ಪಿ.ನಗರ-2, ಕೊತ್ತನೂರು ದಿಣ್ಣೆ, ಜಂಬೂಸವಾರಿ ದಿಣ್ಣೆ, ವಿಜಯಬ್ಯಾಂಕ್ ಕಾಲೋನಿ, ಅರಕೆರೆ ಮತ್ತು ಮೈಕೋ ಲೇಔಟ್ ವ್ಯಾಪ್ತಿ – ಸಂಪರ್ಕ ಸಂಖ್ಯೆ: 9900983569.
ದಕ್ಷಿಣ-2-1 ಕೋಡಿಚಿಕ್ಕನಹಳ್ಳಿ ಜಿ.ಎಲ್.ಆರ್ ಆವರಣ: ಬೇಗೂರು, ಕೋಡಿಚಿಕ್ಕನಹಳ್ಳಿ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿ- ಸಂಪರ್ಕ ಸಂಖ್ಯೆ: 9845444037.
ದಕ್ಷಿಣ-3-1 ಕೋರಮಂಗಲ 3ನೇ ಬ್ಲಾಕ್ : ಕೋರಮಂಗಲ 1, 2 ಮತ್ತು 3ನೇ ಹಂತಗಳ ವ್ಯಾಪ್ತಿ- ಸಂಪರ್ಕ ಸಂಖ್ಯೆ: 9972001265.
ದಕ್ಷಿಣ-4-1 ಬನಗಿರಿನಗರ, ಬನಶಂಕರಿ 3ನೇ ಹಂತ : ಬನಶಂಕರಿ, ಪದ್ಮನಾಭನಗರ, ಕೆ.ಎಸ್. ಲೇಔಟ್ ಹಾಗೂ ಯಲಚೇನಹಳ್ಳಿ ವ್ಯಾಪ್ತಿ – ಸಂಪರ್ಕ ಸಂಖ್ಯೆ: 9845444036.
ಕೇಂದ್ರ ಉಪವಿಭಾಗಗಳು:
ಕೇಂದ್ರ-1-1 ಮಿಲ್ಲರ್ಸ್ ರಸ್ತೆ, ಹೈಗ್ರೌಂಡ್ಸ್ : ಹೈಗ್ರೌಂಡ್ಸ್, ಜಯಮಹಲ್ ಮತ್ತು ಕೋಲ್ಸ್ ಪಾರ್ಕ್ ವ್ಯಾಪ್ತಿ – ಸಂಪರ್ಕ ಸಂಖ್ಯೆ: 9900944041
ಕೇಂದ್ರ-2-1 ಸ್ವಾಮಿ ವಿವೇಕಾನಂದ ರಸ್ತೆ, ಹಲಸೂರು : ಹಲಸೂರು, ದೊಮ್ಮಲೂರು ಮತ್ತು ಮಾರತ್‌ಹಳ್ಳಿ ವ್ಯಾಪ್ತಿ – ಸಂಪರ್ಕ ಸಂಖ್ಯೆ: 9686572469.
ಕೇಂದ್ರ-3-1 ತುಳಸಿ ತೋಟ, ಚಿಕ್ಕ ಲಾಲ್‌ಬಾಗ್ : ಎಲ್.ಎಲ್.ಆರ್, ಚಿಕ್ಕಲಾಲ್‌ಬಾಗ್, ಬನ್ನಪ್ಪ ಪಾರ್ಕ್ ಹಾಗೂ ಸುಧಾಮನಗರ-1 ವ್ಯಾಪ್ತಿ – ಸಂಪರ್ಕ ಸಂಖ್ಯೆ: 9845444081.
ಕೇಂದ್ರ-4-1 ಕಪಿಲ ಭವನ, ಜಯನಗರ : ಹೊಂಬೇಗೌಡನಗರ, ಭೈರಸಂದ್ರ ಮತ್ತು ವಿ.ವಿ.ಪುರಂ ವ್ಯಾಪ್ತಿ – ಸಂಪರ್ಕ ಸಂಖ್ಯೆ: 9008380605.
ಪೂರ್ವ ಉಪವಿಭಾಗಗಳು:
ಪೂರ್ವ-1-2 ಎನ್‌ಆರ್‌ಐ ಲೇಔಟ್ ಮುಖ್ಯರಸ್ತೆ, ಕಲ್ಕೆರೆ): ಕಲ್ಕೆರೆ ಮತ್ತು ಚಲ್ಕೆರೆ ವ್ಯಾಪ್ತಿ – ಸಂಪರ್ಕ ಸಂಖ್ಯೆ: 9980410376.
ಪೂರ್ವ-2-2 ಎ.ನಾರಾಯಣಪುರ : ಎ.ನಾರಾಯಣಪುರ ಮತ್ತು ವಿಜ್ಞಾನನಗರ ವ್ಯಾಪ್ತಿ – ಸಂಪರ್ಕ ಸಂಖ್ಯೆ: 8197382595.
ಪೂರ್ವ-3-2 ಬಿಇಎಂಎಲ್ ಲೇಔಟ್, ತೂಬರಹಳ್ಳಿ : ಚನ್ನಸಂದ್ರ ಮತ್ತು ವರ್ತೂರು ವ್ಯಾಪ್ತಿ – ಸಂಪರ್ಕ ಸಂಖ್ಯೆ: 9535544974.
ಪೂರ್ವ-4-2 ವೇಮನ ಮೈದಾನ, ದೊಡ್ಡಕಣ್ಣಹಳ್ಳಿ : ಗುಂಜೂರು ಮತ್ತು ದೊಡ್ಡಕಣ್ಣಹಳ್ಳಿ ವ್ಯಾಪ್ತಿ – ಸಂಪರ್ಕ ಸಂಖ್ಯೆ: 9632861112.
ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮಂಡಳಿಯ 24 ಗಂಟೆಗಳ ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 1916 ಕ್ಕೆ ಕರೆ ಮಾಡಬಹುದು ಅಥವಾ ವಾಟ್ಸ್ಆಪ್ ಸಂಖ್ಯೆ 8762228888 ಗೆ ಸಂದೇಶ ರವಾನಿಸುವ ಮೂಲಕ ದೂರು ದಾಖಲಿಸಬಹುದಾಗಿದೆ. ಸಂಬಂಧಪಟ್ಟ ಪ್ರದೇಶಗಳ ಸಾರ್ವಜನಿಕರು ಈ ನೀರಿನ ಅದಾಲತ್‌ನ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗಿ ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Hot this week

ಕರ್ನಾಟಕ ತಿಗಳ ಸಮುದಾಯಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ...

ಬೆಂಗಳೂರು: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಐಸಿಟಿಇ(AICTE)ಯಿಂದ ಅನುಮೋದನೆಗೊಂಡು...

ಬೆಂಗಳೂರು: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ...

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ...

ಕಾಸರಗೋಡು ಕನ್ನಡ ಗ್ರಾಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ

ಕಾಸರಗೋಡು: (Kasaragod) ಅನ್ನಪೂರ್ಣ ಪ್ರಕಾಶನ, (Annapoorna Prakashana) ಸಿರಿಗೇರಿ, (Sirigeri) ಸಿರುಗುಪ್ಪ...

Topics

ಕರ್ನಾಟಕ ತಿಗಳ ಸಮುದಾಯಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ...

ಬೆಂಗಳೂರು: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಐಸಿಟಿಇ(AICTE)ಯಿಂದ ಅನುಮೋದನೆಗೊಂಡು...

ಬೆಂಗಳೂರು: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ...

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ...

ಕಾಸರಗೋಡು ಕನ್ನಡ ಗ್ರಾಮದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ

ಕಾಸರಗೋಡು: (Kasaragod) ಅನ್ನಪೂರ್ಣ ಪ್ರಕಾಶನ, (Annapoorna Prakashana) ಸಿರಿಗೇರಿ, (Sirigeri) ಸಿರುಗುಪ್ಪ...

BIG NEWS : ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ವಿಶ್ವದ ಖ್ಯಾತ ಟೆನಿಸ್ ಆಟಗಾರರು ಭಾಗಿ!

ಬೆಂಗಳೂರು : ವರ್ಲ್ಡ್ ಟೆನಿಸ್ ಲೀಗ್ (WTL) ತನ್ನ ಐದನೇ ಸೀಸನ್‌ಗೆ...

BIG NEWS : 80 ಕ್ಕೂ ಹೆಚ್ಚು ನಿಗಮ-ಮಂಡಳಿಗಳಿಗೆ 428 ನೇಮಕಾತಿ; ಸರ್ಕಾರದಿಂದ ಆದೇಶ

ರಾಜ್ಯ ಸರ್ಕಾರದ ವಿವಿಧ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ನಿರ್ದೇಶಕರು ಮತ್ತು...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ(Delhi) ಸಮೀಪದ ನೋಯ್ಡಾ(Noida) ಮತ್ತು ಗ್ರೇಟರ್ ನೋಯ್ಡಾ(Greater...

Related Articles