ಕುಡಿಯುವ ನೀರಿನ ಮೀಸಲು ಹೊರತುಪಡಿಸಿ ಲಭ್ಯ ನೀರನ್ನು ರೈತರ ಬೆಳೆ ರಕ್ಷಣೆಗೆ ಬಳಸಲು ಸಿಎಂಗೆ ಮನವಿ
ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆಗಳು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವುದಾಗಿ ಸಚಿವರ ಗಮನ ಸೆಳೆತ
ಬೆಂಗಳೂರು: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ತೀವ್ರ ಬರ ಪರಿಸ್ಥಿತಿಯಿಂದ(Drought Situation) ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಜಲಾಶಯಗಳಲ್ಲಿ ಲಭ್ಯವಿರುವ ನೀರಿನಲ್ಲಿ ಕುಡಿಯುವ ನೀರಿನ ಅಗತ್ಯವನ್ನು ಕಾಯ್ದಿರಿಸಿ, ಉಳಿದ ನೀರನ್ನು ನವೆಂಬರ್ 30ರವರೆಗೆ ಕಾಲುವೆಗಳಿಗೆ ಹರಿಸಿ ಬೆಳೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್(Dr.Ajay Singh) ಅವರು ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್(CM.D.K.Shivakumar) ಅವರಿಗೆ ಮನವಿ ಮಾಡಿದ್ದಾರೆ.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಪ್ರಸ್ತುತ ಒಟ್ಟಾರೆ ಸುಮಾರು 53 ಟಿಎಂಸಿ ನೀರು ಲಭ್ಯವಿದ್ದು, ಅಕ್ಟೋಬರ್ 15ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್ 12ರವರೆಗೆ ವಾರಾಬಂದಿ ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು ಎಂದು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಹತ್ತಿ, ತೊಗರಿ ಮತ್ತು ಮೆಣಸಿನಕಾಯಿ ಬೆಳೆಗಳು ನಿರ್ಣಾಯಕ ಹಂತದಲ್ಲಿದ್ದು, ನೀರಿನ ಕೊರತೆಯಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
“ಕೈಗೆ ಬಂದ ಬೆಳೆ ನೀರಿನ ಕೊರತೆಯಿಂದ ಹಾಳಾದರೆ ರೈತರು ಮತ್ತಷ್ಟು ಸಾಲದ ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಲಭ್ಯವಿರುವ ನೀರನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಿ, ಕುಡಿಯುವ ನೀರಿನ ಅಗತ್ಯವನ್ನು ಸುರಕ್ಷಿತವಾಗಿರಿಸಿಕೊಂಡು ಬೆಳೆ ರಕ್ಷಣೆಗೆ ಸಾಧ್ಯವಾದಷ್ಟು ನೀರು ಒದಗಿಸಬೇಕು,” ಎಂದು  ತಿಳಿಸಿದ್ದಾರೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವಿವಿಧ ಭಾಗಗಳಲ್ಲಿ ರೈತರು ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಿ ಬೆಳೆಗಳನ್ನು ಉಳಿಸುವಂತೆ ಮನವಿ ಮಾಡುತ್ತಿದ್ದು, ರೈತರ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
“ಬರದ ಸಂದರ್ಭದಲ್ಲಿ ರೈತನನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ. ಕುಡಿಯುವ ನೀರಿನ ಭದ್ರತೆಗೆ ಯಾವುದೇ ಧಕ್ಕೆಯಾಗದಂತೆ, ಉಳಿದ ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ನವೆಂಬರ್ 30ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು,” ಎಂದು ಮುಖ್ಯಮಂತ್ರಿಗಳನ್ನು ಸಚಿವರು ಕೋರಿದ್ದಾರೆ.
ರಾಯಚೂರು ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳನ್ನು ರಕ್ಷಿಸಲು ತುರ್ತು ಕ್ರಮ ಅಗತ್ಯವಿದ್ದು, ನೀರಿನ ಲಭ್ಯತೆ ಮತ್ತು ಮುಂದಿನ ಬೇಸಿಗೆಯ ಕುಡಿಯುವ ನೀರಿನ ಅಗತ್ಯವನ್ನು ಸಮತೋಲನಗೊಳಿಸಿ ನಿರ್ಧಾರ ಕೈಗೊಳ್ಳುವಂತೆ ಡಾ. ಅಜಯ್ ಧರ್ಮಸಿಂಗ್ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗು ಶಹಾಪುರ ಶಾಸಕರಾದ ಶ್ರೀ ಶರಣಬಸಪ್ಪ ದರ್ಶನಾಪುರ ಹಾಗು ಸುರಪುರ ಶಾಸಕಕರಾದ ಶ್ರೀ ವೇಣುಗೋಪಾಲ್ ನಾಯಕ್ ಅವರು ಉಪಸ್ಥಿತರಿದ್ದರು.

Hot this week

ದೀಪಾವಳಿ ಸಂಭ್ರಮದ ನಡುವೆ ಷೇರುಪೇಟೆ ವಹಿವಾಟು; 80,999.40ಕ್ಕೆ ಕುಸಿದು ಮುಕ್ತಾಯಗೊಂಡ ಸೆನ್ಸೆಕ್ಸ್!

ಮುಂಬೈ: ದೇಶಾದ್ಯಂತ ದೀಪಾವಳಿ (Deepavali) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ...

BIG News : ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ; ನಕ್ಸಲಿಸಂ ಬಹುತೇಕ...

ವೈದ್ಯಕೀಯ ಉಪಕರಣಗಳಿಂದ ಗಂಭೀರ ಅನಾಹುತ ಪ್ರಕರಣ ಹೆಚ್ಚಳ: 2020ರಲ್ಲಿ 808 – 2025ರಲ್ಲಿ 2,176ಪ್ರಕರಣ

ನವದೆಹಲಿ: ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬಳಕೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳ...

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಆತಂಕ...

ವೋಲ್ಟಾಸ್ ಕಂಪನಿಯ ನೂತನ ಅಧ್ಯಕ್ಷರಾಗಿ ಸುನಿಲ್ ಡಿ’ಸೋಜಾ ನೇಮಕ: ಅಧ್ಯಕ್ಷ ಸ್ಥಾನದಿಂದ ನೋಯೆಲ್ ಟಾಟಾ ನಿರ್ಗಮನ!

ಮುಂಬೈ: ಟಾಟಾ ಸಮೂಹದ ಪ್ರಮುಖ ಕಂಪನಿಗಳಲ್ಲಿ ಒಂದಾದ ವೋಲ್ಟಾಸ್ (Voltas) ಸಂಸ್ಥೆಯಲ್ಲಿ...

Topics

ದೀಪಾವಳಿ ಸಂಭ್ರಮದ ನಡುವೆ ಷೇರುಪೇಟೆ ವಹಿವಾಟು; 80,999.40ಕ್ಕೆ ಕುಸಿದು ಮುಕ್ತಾಯಗೊಂಡ ಸೆನ್ಸೆಕ್ಸ್!

ಮುಂಬೈ: ದೇಶಾದ್ಯಂತ ದೀಪಾವಳಿ (Deepavali) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ...

BIG News : ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ; ನಕ್ಸಲಿಸಂ ಬಹುತೇಕ...

ವೈದ್ಯಕೀಯ ಉಪಕರಣಗಳಿಂದ ಗಂಭೀರ ಅನಾಹುತ ಪ್ರಕರಣ ಹೆಚ್ಚಳ: 2020ರಲ್ಲಿ 808 – 2025ರಲ್ಲಿ 2,176ಪ್ರಕರಣ

ನವದೆಹಲಿ: ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಬಳಕೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳ...

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಆತಂಕ...

ಜೆರುಸಲೇಂ: ಇಸ್ರೇಲ್‌ನಲ್ಲಿ(Isral) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ರಾಜಕೀಯ ಮೈತ್ರಿಕೂಟಕ್ಕೆ ಸ್ಪಷ್ಟ...

ಸ್ವಾಮಿ ವಿವೇಕಾನಂದರ ಪೋಸ್ಟರ್‌ಗೆ ಅವಹೇಳನ: ಇಬ್ಬರು ವಿದ್ಯಾರ್ಥಿನಿಯರನ್ನು ವಿಶ್ವವಿದ್ಯಾಲಯದಿಂದ ಹೊರಹಾಕಿದ ಪ್ರೆಸಿಡೆನ್ಸಿ!

ಕೋಲ್ಕತ್ತಾ: ಸ್ವಾಮಿ ವಿವೇಕಾನಂದರ(Swamy Vivekanand) ಭಾವಚಿತ್ರವಿರುವ ಪೋಸ್ಟರ್‌ಗೆ ಅವಹೇಳನಕಾರಿ ಬರಹಗಳನ್ನು ಬರೆದ...

Related Articles