ಕ್ರೀಡೆಗಳಲ್ಲಿ ಭಾಗವಹಿಸಬೇಕು, ಸೋಲು-ಗೆಲುವು ಮುಖ್ಯವಲ್ಲ, ಕ್ರೀಡೆಯಿಂದ ಆರೋಗ್ಯವಂತರಾಗಿ ಇರಬುಹುದು: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರ: ರಾಜ್ಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಿ.ಎಂ.ಕಪ್-2026 ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಮೂರನೇಯ ದಿನದ ಪಂದ್ಯಾವಳಿ.
ಸಚಿವರಾದ ರಾಮಲಿಂಗಾರೆಡ್ಡಿರವರು (Ramalinga Reddy) ಬ್ಯಾಟಿಂಗ್ ಮಾಡುವ ಮೂಲಕ ಮೂರನೇಯ ದಿನದ ಆಟಕ್ಕೆ ಚಾಲನೆ ನೀಡಿದರು. ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥಗೌಡ, (KPCC) ನಿಕಟಪೂರ್ವ ಬಿಬಿಎಂಪಿ ಸದಸ್ಯ ಎಸ್.ಕೇಶವಮೂರ್ತಿ, ಎಂ.ಇ.ಐ.ಅಧ್ಯಕ್ಷ ಎಸ್.ಮನೋಹರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪರಿಸರ ರಾಮಕೃಷ್ಣರವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿರವರು ಮಾತನಾಡಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಯುವಕರ ಸಂಘಟನೆ ಜೊತೆಯಲ್ಲಿ ಸಾಮಾಜಿಕ ಮುಖಿ ಉತ್ತಮ ಕಾರ್ಯಗಳು ಮಾಡುತ್ತಿದೆ.
ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ, ಪ್ರತಿದಿನ ಕ್ರೀಡೆಗಳನ್ನು ಆಡುವುದರಿಂದ ದೃಹಿಕ ಮತ್ತು ಮಾನಸಿಕ ಆರೋಗ್ಯವಂತರಾಗಿ ಇರಬಹುದು. ಆರೋಗ್ಯವಂತರಾಗಿ ಇದ್ದಾಗ ಬುದ್ಧಿವಂತರಾಗಬಹುದು ಇದರಿಂದ ವಿದ್ಯೆ ಕಲಿಯಲು ಸುಲಭವಾಗುತ್ತದೆ.
ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ, ಸೋಲು-ಗೆಲುವು ಮುಖ್ಯವಲ್ಲ. ಪ್ರತಿ ಜಿಲ್ಲೆಗಳಲ್ಲಿ ಕ್ರೀಡಾಕೂಟ ಆಯೋಜಿಸಬೇಕು ಯುವಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
32ಕಾಲೇಜು ತಂಡಗಳು ಭಾಗವಹಿಸಿತ್ತು. ಅಕ್ಟೋಬರ್ 4ರಂದು ಭಾನುವಾರ ಫೈನಲ್ ಪಂದ್ಯ ಜರುಗಲಿದೆ. ಪ್ರಥಮ ಬಹುಮಾನ 2ಲಕ್ಷ , ದ್ವೀತಿಯ ಬಹುಮಾನ 1ಲಕ್ಷ ರೂಪಾಯಿ ಹಾಗೂ ಪಂದ್ಯ ಪುರುಷೋತ್ತಮ, ಸರಣಿ ಆಟಗಾರ, ಬೆಸ್ಟ್ ಬೌಲರ್ ಪ್ರಶಸ್ತಿ ವಿತರಣೆ ಕಾರ್ಯಕ್ರಮವಿದೆ.

