ವಿಧಾನಪರಿಷತ್ ಸಭಾಪತಿಗಳಾಗಿ ಸಲೀಂ ಅಹ್ಮದ್ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‍ನ(Legislative Council) ನೂತನ ಸಭಾಪತಿಗಳಾಗಿ ಸಲೀಂ ಅಹ್ಮದ್(Saleem Ahamed) ಅವರು ಆಯ್ಕೆಯಾದರು. ಇಂದು ವಿಧಾನಪರಿಷತ್‍ನ ಅಧಿವೇಶನದಲ್ಲಿ ಸಭಾಪತಿಗಳ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಲೀಂ ಅಹ್ಮದ್ ಅವರು 38 ಮತಗಳನ್ನು ಹಾಗೂ ಪಿ.ಹೆಚ್. ಪೂಜಾರ್(P.H.Poojar) ಅವರು 30 ಮತಗಳನ್ನು ಪಡೆದರು.

ಹಂಗಾಮಿ ಸಭಾಪತಿಗಳಾದ  ಪುಟ್ಟಣ್ಣ  ಅವರು 38 ಮತಗಳನ್ನು ಪಡೆದ ಸಲೀಂ ಅಹ್ಮದ್ ಅವರನ್ನು ವಿಧಾನಪರಿಷತ್ತಿನ ಸಭಾಪತಿಗಳನ್ನಾಗಿ ಆಯ್ಕೆ ಮಾಡಿ, ಅಭಿನಂದನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭಾಪತಿ ಅವರಿಗೆ ಅಭಿನಂದನೆ ಸಲ್ಲಿಸಿ ಸದನಕ್ಕೆ ನೂತನ ಸಚಿರುಗಳನ್ನು ಪರಿಚಯಿಸಿದರು. ಸಭಾ ನಾಯಕರಾದ ಡಾ. ಯತೀಂದ್ರ ಎಸ್., ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ಸದಸ್ಯರುಗಳು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರುಗಳು ಶುಭ ಕೋರಿ, ಅಭಿನಂದನೆ ಸಲ್ಲಿಸಿದರು.

ನೂತನ ಸಭಾಪತಿ ಸಲೀಂ ಅಹ್ಮದ್ ಅವರು ಮಾತನಾಡಿ,  ಸಭಾಪತಿಯ ಸ್ಥಾನವು ಯಾವುದೇ ಒಂದು ಪಕ್ಷಕ್ಕೆ ಸೇರಿದ ಸ್ತಾನವಲ್ಲ ಇದು ಇಡೀ ಸದನದ ಸ್ಥಾನ.  ಈ ಸದನದ ಪ್ರತಿಯೊಬ್ಬ ಸದಸ್ಯರೂ ನನಗೆ ಸಮಾನರು, ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ಪ್ರತಿಯೊಬ್ಬ ಸದಸ್ಯರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ ನೀಡುವುದು ನನ್ನ ಕರ್ತವ್ಯ ಎಂದರು.

ಸದನದಲ್ಲಿ ಒಬ್ಬರ ಮಾತನ್ನು ಒಬ್ಬರು ಕೇಳಬೇಕು. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು.  ಸರ್ಕಾರವನ್ನು ಪ್ರಶ್ನಿಸಬೇಕು. ಅಗತ್ಯವಿದ್ದಾಗ ಸರ್ಕಾರದ ಉತ್ತಮ ಕಾರ್ಯಗಳನ್ನು ಮೆಚ್ಚಬೇಕು ಎಂದರು.

ಸಭಾಪತಿಯಾಗಿ ನನ್ನ ಮುಂದೆ ಇರುವ ಅತ್ಯಂತ ದೊಡ್ಡ ಜವಾಬಾರಿ ಈ ಸದನದ ಘನತೆಯನ್ನು ಕಾಪಾಡುವುದು. ನಿಯಮಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವುದು. ಪ್ರತಿಯೊಬ್ಬ ಸದಸ್ಯರ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ  ಗೌರವ ನೀಡುವುದು.
ಈ ಸದನದ ಗೌರವವನ್ನು ಕಾಪಾಡಲು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಕರ್ನಾಟಕದ ಜನರ ಆಶೋತ್ರಗಳಿಗೆ ಈ ಸದನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವೇದಿಕೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರ ಸಹಕಾರವನ್ನು ಕೋರುತ್ತೇನೆ  ಎಂದರು.

ನನ್ನನ್ನು ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷರು ಹಾಗೂ ರಾಜಸ್ಯಸಭಾ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಶ್ರೀಮತಿ ಸೋನಿಯಾ ಗಾಂಧಿ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್‍ಸಿಂಗ್ ಸುರ್ಜೇವಾಲ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಧನ್ಯವಾದ ಅರ್ಪಿಸಿದರು.

Hot this week

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಭಾರತ್ ಜೋಡೋ ಯುವ ಸಂಘ’ಕ್ಕೆ ಆಕರ್ಷಕ ಲೋಗೋ ವಿನ್ಯಾಸ ಸ್ಪರ್ಧೆ: ಸಾರ್ವಜನಿಕರು, ಕಲಾವಿದರಿಂದ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು...

ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ‘ರಾಷ್ಟ್ರಪತಿಗಳ ಅಗ್ನಿಶಾಮಕ ಶ್ಲಾಘನೀಯ ಸೇವಾ ಪದಕ’ ಗೌರವ

ಬೆಂಗಳೂರು: 2026ನೇ ಸಾಲಿನ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿಷ್ಠಿತ “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ...

Topics

ಮುಂದಿನ ದಿನಗಳಲ್ಲಿ ವಿಧಾನಸಭೆ ಕಾರ್ಯಕಲಾಪವನ್ನು ಕಾಗದ ರಹಿತ ಮಾಡಲಾಗುವುದು: ಜಿ.ಎಸ್.ಪಾಟೀಲ

ಬೆಂಗಳೂರು: ಆದಷ್ಟು ಬೇಗ ವಿಧಾನಸಭೆಯ ಕಾರ್ಯಕಲಾಪವನ್ನು(Proceeding/Activites) ಕಾಗದ ರಹಿತವನ್ನಾಗಿ ಮಾಡಲು ಇ-ಸಂವಿಧಾನ...

ವಿಧಾನಸಭೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಜರುಗಿನ ಸಭಾಧ್ಯಕ್ಷರ ಚುನಾವಣೆಯಲ್ಲಿ ರೋಣ ವಿಧಾನಸಭಾ...

ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ‘ರಾಷ್ಟ್ರಪತಿಗಳ ಅಗ್ನಿಶಾಮಕ ಶ್ಲಾಘನೀಯ ಸೇವಾ ಪದಕ’ ಗೌರವ

ಬೆಂಗಳೂರು: 2026ನೇ ಸಾಲಿನ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿಷ್ಠಿತ “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ...

ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರೆ

224 ಶಾಸಕರೂ ನನಗೆ ಒಂದೇ, ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಕೆಲಸ...

ತಂತ್ರಜ್ಞಾನ ಎಷ್ಟೇ ಬೆಳೆದರು ರಕ್ತ ತಯಾರಿಸಲು ಸಾಧ್ಯವಿಲ್ಲ – ನ್ಯಾಯಮೂರ್ತಿ ಎಸ್.ಜಿ. ಪಂಡಿತ್

ದಿವಂಗತ ನಿರ್ಮಲಾ ಬಾಳಿಗಾ ನೆನಪಿನಲ್ಲಿ ರಕ್ತದಾನ ಶಿಬಿರ ಸಂಪನ್ನಬೆಂಗಳೂರು: ರಕ್ತದಾನವನ್ನು(Blood Donation) "ಮಹಾದಾನ"...

2026 ಆಗಸ್ಟ್ 17 ರಂದು ನಾಗರಪಂಚಮಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ತಿಥಿ : ಶ್ರಾವಣ ಶುಕ್ಲ ಪಂಚಮಿ ಇತಿಹಾಸ : ಆಸ್ತಿಕ ಋಷಿಯು ಸರ್ಪಯಜ್ಞ...

Related Articles