ಬೆಂಗಳೂರು : ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉನ್ನತ ಉದ್ದೇಶದಿಂದ ‘ಭಾರತ್ ಜೋಡೋ ಯುವ ಸಂಘ’(Bharat Jodo Youth Association) ಎಂಬ ನೂತನ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯಡಿ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 6,000 ಹಾಗೂ ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸರಾಸರಿ 4,000 ಸಂಘಗಳು ಸೇರಿದಂತೆ, ಒಟ್ಟು 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.
ಸಮುದಾಯ ಅಭಿವೃದ್ಧಿಯಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪನೆಯಾಗುತ್ತಿರುವ ಈ ಸಂಘಗಳಿಗೆ ಆಕರ್ಷಕ ಹಾಗೂ ಅರ್ಥಪೂರ್ಣವಾದ ಅಧಿಕೃತ ಲೋಗೋ (Logo) ವಿನ್ಯಾಸಗೊಳಿಸಲು ಆಸಕ್ತ ಸಾರ್ವಜನಿಕರು ಮತ್ತು ಕಲಾವಿದರಿಂದ ವಿನ್ಯಾಸಗಳನ್ನು (Designs) ಆಹ್ವಾನಿಸಲಾಗಿದೆ.
ಆಸಕ್ತ ಕಲಾವಿದರು ಹಾಗೂ ಯುವಕ-ಯುವತಿಯರು ತಮ್ಮ ಸೃಜನಶೀಲ ವಿನ್ಯಾಸಗಳನ್ನು ಜಂಟಿ ನಿರ್ದೇಶಕರು (ಯು.ಸೇ), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೋಡಲ್ ಅಧಿಕಾರಿ, ಭಾರತ್ ಜೋಡೋ ಯುವ ಸಂಘ, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು – 560001 ಅಥವಾ ಇಮೇಲ್ ಐಡಿ dyesdept@gmail.com / sobh arathjodo@gmail.com ಗೆ 2026 ನೇ ಆಗಸ್ಟ್ 23 ರ ಒಳಗಾಗಿ ಒಳಗಾಗಿ ಸಲ್ಲಿಸುವುದು.
ಆಯ್ಕೆಯಾಗುವ ಅತ್ಯುತ್ತಮ ಲೋಗೋ ವಿನ್ಯಾಸಗಾರರಿಗೆ ಇಲಾಖೆಯ ವತಿಯಿಂದ ಸೂಕ್ತ ನಗದು ಬಹುಮಾನ ನೀಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
