ಬಾಗ್ಮನೆ ಸೊಲೇರಿಯಂ ಸಿಟಿಯಲ್ಲಿ ಪಂಜಾಬ್ ಗ್ರಿಲ್ ನ 60ನೇ ಶಾಖೆ

BENGALURU : ತನ್ನ ಅಪ್ಪಟ ಉತ್ತರ ಭಾರತೀಯ ಶೈಲಿಯ ಸ್ವಾದಿಷ್ಟ ಖಾದ್ಯಗಳು ಹಾಗೂ ರಾಜಾತಿಥ್ಯದ ಭೋಜನದ ಅನುಭವಕ್ಕೆ ದೇಶಾದ್ಯಂತ ಖ್ಯಾತಿ ಗಳಿಸಿರುವ ಪ್ರಮುಖ ಫೈನ್-ಡೈನಿಂಗ್ ರೆಸ್ಟೋರೆಂಟ್ (Fine Dining Restaurant) ಸರಪಳಿ ಪಂಜಾಬ್ ಗ್ರಿಲ್ (Punjab Grill) ಇದೀಗ ಬೆಂಗಳೂರಿನ ಪ್ರಮುಖ ತಂತ್ರಜ್ಞಾನ ಮತ್ತು ವಾಣಿಜ್ಯ ಕೇಂದ್ರವಾದ ಬಾಗ್ಮನೆ ಸೊಲೇರಿಯಂ (Bagmane Solerium City) ಸಿಟಿಯಲ್ಲಿ ತನ್ನ 60ನೇ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸಿದೆ.

ಇದು ಬೆಂಗಳೂರು ನಗರದಲ್ಲಿರುವ ಪಂಜಾಬ್ ಗ್ರಿಲ್ ನ 10ನೇ ಶಾಖೆಯಾಗಿದೆ. ದೇಶದಾದ್ಯಂತ ಆಹಾರ ಪ್ರಿಯರಿಗೆ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ಉಣಬಡಿಸುವ ಸಂಸ್ಥೆಯ ಯಶಸ್ವಿ ಪಯಣದಲ್ಲಿ ಈ ನೂತನ ಶಾಖೆಯ ಉದ್ಘಾಟನೆಯು ಒಂದು ಮಹತ್ವದ ಮೈಲಿಗಲ್ಲಾಗಿದೆ. ಬೆಂಗಳೂರಿನ ಅತ್ಯಂತ ಜನನಿಬಿಡ ವಾಣಿಜ್ಯ ವಲಯದಲ್ಲಿ ಆಯಕಟ್ಟಿನ ಜಾಗದಲ್ಲಿ ಈ ಹೊಸ ರೆಸ್ಟೋರೆಂಟ್ ತಲೆಎತ್ತಿದೆ. ಇದು ಐಟಿ ಹಬ್ ನ ಉದ್ಯೋಗಿಗಳು, ಕಾರ್ಪೊರೇಟ್ ಗ್ರಾಹಕರು ಹಾಗೂ ವೈವಿಧ್ಯಮಯ ಆಹಾರ ಪ್ರೇಮಿಗಳನ್ನು ಸೆಳೆಯುವ ದೃಷ್ಟಿಯಿಂದ ವಿನ್ಯಾಸಗೊಂಡಿದೆ.
 ಉತ್ತರ ಭಾರತದ ಶ್ರೀಮಂತ ಪರಂಪರೆ ಮತ್ತು ಭವ್ಯತೆಯನ್ನು ನೆನಪಿಸುವ ರಾಜವೈಭೋಗದ ವಾತಾವರಣದೊಂದಿಗೆ, ಸಾಂಪ್ರದಾಯಿಕ ಪಂಜಾಬಿ ರೆಸಿಪಿಗಳಿಗೆ ಆಧುನಿಕ ಸ್ಪರ್ಶ ನೀಡಿ ತಯಾರಿಸಿದ ಪಂಜಾಬ್ ಗ್ರಿಲ್ ನ ವಿಶಿಷ್ಟ ಖಾದ್ಯಗಳು ಇಲ್ಲಿ ಲಭ್ಯವಿರಲಿವೆ.

ದೇಶದ ಪ್ರಮುಖ ಮೆಟ್ರೋ ನಗರಗಳು ಹಾಗೂ ಪ್ರಥಮ ದರ್ಜೆ ನಗರಗಳಲ್ಲಿ ಗುಣಮಟ್ಟ, ರುಚಿ ಮತ್ತು ಅತ್ಯುತ್ತಮ ಸೇವೆಗೆ ಹೆಸರಾಗಿರುವ ಪಂಜಾಬ್ ಗ್ರಿಲ್, ಭಾರತದಲ್ಲಿ ಫೈನ್-ಡೈನಿಂಗ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ.

ಈ ಯಶಸ್ಸಿನ ಕುರಿತು ಲೈಟ್ ಬೈಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಜಿತ್ ಪಾಲಿಯಾತ್ ಅವರು ಮಾತನಾಡಿ,”60ನೇ ಶಾಖೆಯ ಮೈಲಿಗಲ್ಲನ್ನು ತಲುಪಿರುವುದು ನಮ್ಮ ಇಡೀ ತಂಡಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಬೆಂಗಳೂರು ಯಾವಾಗಲೂ ಉತ್ತಮ ಆಹಾರ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮತ್ತು ಪ್ರೀತಿಸುವ ನಗರ. ಬಾಗ್ಮನೆ ಸೊಲೇರಿಯಂ ಸಿಟಿಯು ನಮಗೆ ನಗರದ ಕ್ರಿಯಾತ್ಮಕ ಮತ್ತು ವೈವಿಧ್ಯಮಯ ಗ್ರಾಹಕರನ್ನು ತಲುಪಲು ಉತ್ತಮ ವೇದಿಕೆ ಕಲ್ಪಿಸಿದೆ. ಇಷ್ಟು ವರ್ಷಗಳಿಂದ ಪಂಜಾಬ್ ಗ್ರಿಲ್ ಬ್ರ್ಯಾಂಡ್ ಕಾಯ್ದುಕೊಂಡು ಬಂದಿರುವ ಅದೇ ಪ್ರೀತಿ ಮತ್ತು ಅತ್ಯುನ್ನತ ರುಚಿಯೊಂದಿಗೆ ಗ್ರಾಹಕರನ್ನು ಸತ್ಕರಿಸಲು ನಾವು ಉತ್ಸುಕರಾಗಿದ್ದೇವೆ,” ಎಂದು ಸಂತಸ ಹಂಚಿಕೊಂಡರು.
ADVERTISEMENT
abhijna p kashyap

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles