ರಾಜಕಾರಣಿಗಳ ಜೊತೆ ಪತ್ರಕರ್ತರಿಗೂ ಸಾಮಾಜಿಕ ಜವಾಬ್ದಾರಿ ಇದೆ: ಬೊಮ್ಮಾಯಿ

ರಾಜಕಾರಣಿ ಹಾಗೂ ಅಧಿಕಾರದಲ್ಲಿರುವವರಿಗೆ ಸಾರ್ವಜನಿಕವಾಗಿರುವ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಪತ್ರಕರ್ತರಿಗೂ ಇದೆ. ನಾವು ತೆಗೆದುಕೊಳ್ಳುವ ತೀರ್ಮಾನ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ತಾವು ಬರೆಯುವ ವರದಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಬುದ್ದಿವಂತಿಕೆ (Intelligence) ಸಮಾಜದ ಒಳಿತಿಗೆ ಬಳಕೆ ಆಗಬೇಕು. ಸಮಾಜದಲ್ಲಿನ ದೃಷ್ಕೃತ್ಯ (Social perception)  ಮುಚ್ಚುವುದಕ್ಕೆ ಬಳಕೆ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. ಪತ್ರಕರ್ತರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸುವ ಸದುದ್ದೇಶಿತ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ. ಅದಕ್ಕಾಗಿ ಕೆಯುಡಬ್ಲ್ಯೂಜೆ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ನಾನು ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
 ತಾವು ಸಿಎಂ ಆಗಿದ್ದ ಸಂದರ್ಭದಲ್ಲಿ ಜಾಹಿರಾತುಗಳು ಸೇರಿದಂತೆ ಹಲವು ರೀತಿಯಲ್ಲಿ ಸಹಕಾರ ನೀಡಿದ್ದನ್ನು ಸ್ಮರಿಸಿಕೊಂಡರು. ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ ಕರೆಯುವುದು ಬಹಳ ಸಹಜ.ಆದರೆ ಅಧಿಕಾರದಲ್ಲಿ ಇಲ್ಲದಿರುವಾಗ ನನ್ನನ್ನು ನೆನಪು ಮಾಡಿಕೊಂಡು ಕರೆದಿರುವುದು ನಿಮ್ಮದೊಡ್ಡ ಗುಣ. ಇದು ನಿಮ್ಮ ಕೃತಜ್ಞತಾ ಗುಣ. ಬೈಬಲ್‌ನಲ್ಲಿ ಹೇಳುತ್ತಾರೆ ಕೃತಜ್ಞತೆ ಇಲ್ಲದವರು ಮನುಷ್ಯರು ಅಲ್ಲವೇ ಅಲ್ಲ ಎಂದರು. ಜಾಗತೀಕರಣ, ಖಾಸಗೀಕರಣದ ನಡುವೆ ನಾವು ಅಂತಕರಣವನ್ನು ಮರೆಯುತ್ತಿದ್ದೇವೆ. ಅಂತಕರಣ ಇಲ್ಲದಿರುವ ಮನುಷ್ಯರ ಸಂಬಂಧವೇ ಇರುವುದಿಲ್ಲ. ಅಂತದರಲಿ ತಾವು ಅಂತಕರಣವನ್ನು ಪುನರ್ ಸ್ಥಾಪನೆ ಮಾಡಿದ್ದೀರಿ ಎಂದು ಹೇಳಿದರು.
*ಪ್ರಶ್ನಿಸುವ ಅಧಿಕಾರ* ಯಾವುದಾದರೂ ಒಂದು ಶಕ್ತಿ ಬೆಳೆಯಬೇಕೆಂದರೆ ಅದನ್ನು ಪ್ರಶ್ನೆ ಮಾಡಲೇಬೇಕು. ನಂಬಿಕೆಗೆ ಯಾವುದೇ ಆಧಾರ ಇಲ್ಲ. ಆದರೆ, ವಿಜ್ಞಾನಕ್ಕೆ ಆಧಾರ ಬೇಕು. ವಿಜ್ಞಾನಕ್ಕೆ ತರ್ಕಬದ್ಧ ಚಿಂತನೆ ಬೇಕಾದರೆ ಹೊಸ ಚಿಂತನೆ ಹುಟ್ಟು ಹಾಕುತ್ತದೆ. ಪ್ರಜಾಪಭುತ್ತದಲ್ಲಿ ಪಶ್ನೆ ಕೇಳುವ ಅಧಿಕಾರ ಕೊಟ್ಟಿರುವುದು ಪತ್ರಕರ್ತರಿಗೆ ನೀವು ಎಷ್ಟು ಅರ್ಥಗರ್ಭವಾದ ಪ್ರಶ್ನೆಗಳನ್ನು ಕೇಳುತ್ತಿರೋ ಅಷ್ಟು ಒಳ್ಳೆಯ ವಿಚಾರಗಳು ಸಮಾಜಕಷ್ಟೇ ಅಲ್ಲದೇ ರಾಜಕಾರಣಕ್ಕೂ ಬರುತ್ತದೆ. ನೀವು ಕೇಳುವ ಪಶ್ನೆ ಸರಳವಾಗಿದ್ದರೆ ಸರಿಯಾದ ಉತ್ತರ ಬರುವುದಿಲ್ಲ. ಪಶ್ನೆ ಕೇಳುವ ಹಕ್ಕು ಪತ್ರಕರ್ತರಿಗಿದೆ ಎಂದರು.
ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಒಳ್ಳೆಯ ಸಂಬಂಧ ಇದ್ದರೆ ಕಳ್ಳರು ಪೊಲೀಸರ ನಡುವಿನ ಸಂಬಂಧ ಇದ್ದಂಗೆ ಆಗಿದೆ. ಎಲ್ಲಿವರೆಗೂ ಕಠಿಣ ಪಶ್ನೆ ಕೇಳುವುದಿಲ್ಲವೋ ಅಲ್ಲಿಯವರೆಗೂ ರಾಜಕಾರಣಿಗಳಿಂದ ಒಳ್ಳೆಯ ಆಡಳಿತ ನಿರೀಕ್ಷೆ ಮಾಡಬೇಡಿ ಎಂದು ಹೇಳಿದರು.
 ಆಡಳಿತಗಾರರಿಗೆ ಒಳ್ಳೆಯ ಪಶ್ನೆ ಕೇಳಿದರೆ ಆಡಳಿತಗಾರರಿಗೂ ಉತ್ತಮ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಎಲ್ಲರ ಮನೆಯಲ್ಲಿಯೂ ಇಡ್ಲಿ ದೋಸೆ ಇದ್ದೇ ಇರುತ್ತದೆ. ಅದರ ಬಗ್ಗೆ ಎಷ್ಟು ದಿನ ಬರೆಯುತ್ತೀರಿ ಎಂದು ಪಶ್ನಿಸಿದರು. *ಗಂಡ ಹೆಂಡತಿ ಸಂಬಂಧ* ಈಗ ಡಿಜಿಟಲ್ ಪತ್ತಿಕೋದ್ಯಮ ಬಂದಿದೆ. ಅದರಲ್ಲಿ ಸತ್ಯ ಎಷ್ಟು ಸುಳ್ಳು ಎಷ್ಟು ಅನ್ನುವುದು ಗೊತ್ತಿಲ್ಲ. ರಾಜಕಾರಣಿಗಳಿಗೆ ಪತಕರ್ತರಿಗೆ ಅವಿನಾಭಾವ ಸಂಬಂಧ. ಗಂಡ ಹೆಂಡತಿ ಸಂಬಂಧ ಇದ್ದಹಾಗೆ. ಪತ್ರಿಕೆ ಇಲ್ಲದಿದ್ದರೆ ರಾಜಕಾರಣಿಗಳ ಪರಿಸ್ಥಿತಿ ಏನಾಗುತ್ತಿತ್ತು. ಅವರು ಮಾಡಿರುವ ಕೆಲಸ, ಅವರ ಸರ್ಕಾರಕ್ಕೆ ಬೇಕಾಗಿರುವ ಪ್ರಚಾರ ಸಿಗದಿದ್ದರೆ ರಾಜಕಾರಣಿಗೆ ಯಾವುದೇ ಪ್ರಯೋಜನ ಇಲ್ಲ. ಪತ್ರಿಕೆಗಳಿಗೂ ರಾಜಕಾರಣಿಯ ಸುದ್ದಿ ಬರೆಯದಿದ್ದರೆ ಅವರ ಪತ್ರಿಕೆಯನ್ನೂ ಓದುವುದಿಲ್ಲ. ಇದೊಂದು ರೀತಿ ಗಂಡ ಹೆಂಡತಿ ಸಂಬಂಧ ಇದ್ದಹಾಗೆ ಎಂದರು.
ರಾಜಕಾರಣಿಗೆ ನಿವೃತ್ತಿ ಇಲ್ಲ. ರಾಜಕಾರಣಕ್ಕೆ ಬರಲು ಅರ್ಹತೆಯೂ ಇಲ್ಲ. ಹಾಗೇ ಪತ್ರಕರ್ತರಿಗೆ ಎಲ್ಲಿಯವರೆಗೂ ಬರೆಯುವ ಶಕ್ತಿ ಇರುತ್ತದೆಯೋ ಅವರು ಪತ್ರಕರ್ತರೇ ಆಗಿರುತ್ತಾರೆ. ಸೇವಕರೆ ಜನಪರ ಇರುವ ರಾಜಕಾರಣಿ. ಪತ್ರಕರ್ತರೂ ಅಷ್ಟೇ ಎಲ್ಲಿಯವರೆಗೂ ಬರೆಯುವ ಇಚ್ಚಾಶಕ್ತಿ ಇದೆಯೋ ಅಲ್ಲಿವರೆಗೂ ನಿಮ್ಮ ವೃತ್ತಿ ಮುಂದುವರೆಸಬಹುದು ಎಂದರು. ತಾವು ಬರೆಯುವ ವರದಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ರೀತಿಯಲ್ಲಿ ನೀವೂ ಕೂಡ ರಾಜಕಾರಣಿಗಳು, ನಾವು ಪತ್ರಕರ್ತರು. ನಿಮಗೆ ಏನು ಉತ್ತರ ಬೇಕೊ ಅದನ್ನು ಪಶ್ನೆ ಕೇಳುತ್ತೀರಿ. ನಾವೂ ಬುದ್ದಿವಂತರಿದ್ದೇವೆ. ಪತ್ರಿಕೆಯಲ್ಲಿ ಏನು ಬರಬೇಕೊ ಅದನ್ನು ಹೇಳುತ್ತೇವೆ. ಈ ಬುದ್ಧಿವಂತಿಕೆ ಸಮಾಜದ ಒಳಿತಿಗೆ ಬಳಕೆ ಆಗಬೇಕು. ಸಮಾಜದ ದೃಷ್ಕೃತ ಮುಚ್ಚುವುದಕ್ಕೆ ಬಳಕೆ ಆಗಬಾರದು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಸುಧಾಕರ್, ಸಂಸದ ಡಾ. ಕೆ. ಸುಧಾಕರ, ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ಬಿ.ಕೆ. ರವಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು, ಕೆಯುಡಬ್ಲ್ಯೂಜೆ ಪದಾಧಿಕಾರಿಗಳು, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾಧ್ಯಕ್ಷ ರವಿಕುಮಾರ್ ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು.

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles