Gangammagudi Police: ಮದ್ಯಪಾನದ ಅಮಲಿನಲ್ಲಿ ಸ್ನೇಹಿತನ ಕೊ*ಲೆ: ವ್ಯಕ್ತಿಯ ಬಂಧನ

ಬೆ0ಗಳೂರು : ಗಂಗಮ್ಮಗುಡಿ ಪೊಲೀಸ್ ಠಾಣಾ (Gangammagudi Police Station Limits) ಸರಹದ್ದಿನ ಅಬ್ಬಿಗೆರೆಯ ನಿಸರ್ಗ ಲೇಔಟ್‌ನ  (Nisarga Layout) ಪರ‍್ಯಾದುದಾರರ ಪತ್ನಿಯು ಬೆಳಿಗ್ಗೆ ವಾಕಿಂಗ್‌ಗೆ ಹೋಗಿದ್ದು, ಆ ಸಮಯದಲ್ಲಿ ನಿಸರ್ಗ ಲೇಔಟ್‌ನ ಬಿಡಿಎ ಪಾರ್ಕ್ ಒಳಗೆ ಮೃತದೇಹವೊಂದು ಇರುವುದಾಗಿ ಪೋನ್ ಮಾಡಿ ತಿಳಿಸಿರುತ್ತಾರೆ. ಸ್ಥಳಕ್ಕೆ ಬಂದ ಪಾರ್ಕ್ ಒಳಗೆ ಹೋಗಿ ನೋಡಲಾಗಿ ಒಂದು ಚೀಲದಲ್ಲಿ ಮೃತ ದೇಹವೊಂದು ಕಂಡು 112ಗೆ ಕರೆ ಮಾಡಿ ತಿಳಿಸಿರುತ್ತಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಕೊ*ಲೆ (Mur*der) ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಮೃತನ ವಾರಸುದಾರರ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನ ಕೈಗೊಂಡು, ಮೃತನ ತಂಗಿ ಗಂಡನನ್ನು ಪತ್ತೆ ಮಾಡಿ ಠಾಣೆಗೆ ಕರೆಯಿಸಿ, ಮೃತನ ಚಹರೆಯನ್ನು ತೋರಿಸಲಾಗಿ, ವ್ಯಕ್ತಿಯು ಮೃತನನ್ನು ಗುರ್ತಿಸಿದ್ದು, ಆತನ ಹೆಸರು ವಿದ್ಯಾಪ್ರಸಾದ್ ಅಲಿಯಾಸ್ ವಿದ್ಯಾಭಾರತಿ ಎಂದು ತಿಳಿಸಿರುತ್ತಾರೆ.

ಮೇ. 20ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಮೃತನ ಸಹಪಾಟಿಯೋರ್ವನನ್ನು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿ, ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಸಹಚರರೊಂದಿಗೆ ಸೇರಿ ಕೃತ್ಯ ವೆಸಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಟ್ರಾನ್ಸಿಸ್ಟ್ ವಾರೆಂಟ್ ಮುಖಾಂತರ ಬೆಂಗಳೂರಿಗೆ ಕರೆತರಲಾಯಿತು. ದಿನಾಂಕ:25ರAದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಗಿರುತ್ತದೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಮೃತ ವ್ಯಕ್ತಿ ಹಾಗೂ ಆರೋಪಿಯು ಉತ್ತರ ಪ್ರದೇಶ ಮೂಲದವರಾಗಿದ್ದು, ಜೀವನೋಪಾಯಕ್ಕೆ ಬೆಂಗಳೂರಿಗೆ ಬಂದು ಬಾಡಿಗೆಗೆ ಮನೆ ಪಡೆದು ಒಟ್ಟಿಗೆ ವಾಸವಿದ್ದು ಪೈಂಟಿAಗ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಏಪ್ರಿಲ್ 20ರಂದು ರಾತ್ರಿ ಮನೆಯಲ್ಲಿರುವಾಗ್ಗೆ ಮದ್ಯಪಾನದ ಅಮಲಿನಲ್ಲಿ ಇಬ್ಬರಿಗೂ ಜಗಳವಾಗಿರುತ್ತದೆ. ಆ ಸಮಯದಲ್ಲಿ ಆರೋಪಿಯು ಮೃತನಿಗೆ ಕೈಗಳಿಂದ ಹೊಟ್ಟೆ, ಎದೆ, ತಲೆ, ಬೆನ್ನಿನ ಭಾಗಕ್ಕೆ ಹೊಡೆದಿದ್ದು, ಮೃತನು ಸುಸ್ತಾಗಿ ಮಲಗಿಕೊಂಡಿರುತ್ತಾನೆ. ಮರುದಿನ ಬೆಳಿಗ್ಗೆ ಆರೋಪಿ ಹಾಗೂ ಸಹಚರನು ಮೃತನನ್ನು ಕೆಲಸಕ್ಕೆ ಹೋಗುವಾಗ್ಗೆ ಮಾತನಾಡಿಸಿಕೊಂಡು ಹೋಗಿದ್ದು, ವಾಪಸ್ ಮದ್ಯಾಹ್ನ ಮನೆಗೆ ಬಂದು ನೋಡಲಾಗಿ, ವ್ಯಕ್ತಿಯು ಮೃತಪಟ್ಟಿರುವುದು ಕಂಡುಬAದಿರುತ್ತದೆ. ನಂತರ ಮತ್ತೋರ್ವ ಸಹಚರನನ್ನು ಕರೆಸಿಕೊಂಡು, ಮೂವರು ಸೇರಿ ಮೃತ ದೇಹವನ್ನು ಸಂಚು ರೂಪಿಸಿ, ಒಂದು ಚೀಲದಲ್ಲಿ ಹಾಕಿ ಸ್ಕೂಟರ್‌ನಲ್ಲಿ ಇಟ್ಟುಕೊಂಡು ನಿಸರ್ಗ ಲೇಔಟ್ ಬಿ.ಡಿ.ಎ ಪಾರ್ಕ್ನ ಕಾಂಪೌAಡ್ ಒಳಗೆ ಎಸದು ಹೋಗಿರುವುದಾಗಿ ತಿಳಿಸಿರುತ್ತಾನೆ.
ಮೇ 29ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಂಧನಕ್ಕೆ ಒಳಪಡಿಸಿರುತ್ತದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಸಹಚರರ ಪತ್ತೆ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ.
ಈ ಕಾರ್ಯಾಚರಣೆಯನ್ನು ವಾಯುವ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ನಾಗೇಶ್.ಡಿ.ಎಲ್, ಐ.ಪಿ.ಎಸ್ ಮಾರ್ಗದರ್ಶನದಲ್ಲಿ ಚಿಕ್ಕಬಾಣಾವರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿಕುಮಾರ್ ರವರ ನಿರ್ದೇಶನದಂತೆ ಗಂಗಮ್ಮಗುಡಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರಘುಪ್ರಸಾದ್.ಎನ್ ಇತರೆ ಸಿಬ್ಬಂದಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles