ಭಾರತದ ಮಲೇರಿಯಾ ಲಸಿಕೆ ‘ಆಡ್‍ಫಾಲ್ಸಿವ್ಯಾಕ್ಸ್’: Plasmodium Falciparum ವಿರುದ್ಧ ನೂತನ ಹೋರಾಟ

ನವದೆಹಲಿ, ಜುಲೈ 21 – ಭಾರತವು ಔಷಧೋತ್ಪಾದನೆಯಲ್ಲಿ ತನ್ನನ್ನು ‘ವಿಶ್ವ ಔಷಧ ರಾಜಧಾನಿ’ ಎಂಬ ಹಿರಿಮೆಗೆ ತಂದುಕೊಂಡಿದೆ. ಇದೀಗ, ದೇಶದ ವೈದ್ಯಕೀಯ ಸಂಶೋಧನೆ ಮತ್ತೊಂದು ಮಹತ್ತರ ಸಾಧನೆ ದಾಖಲಿಸಿದೆ – ಭಾರತದ ಮೊದಲ ಮಲೇರಿಯಾ ಲಸಿಕೆ “ಆಡ್‍ಫಾಲ್ಸಿವ್ಯಾಕ್ಸ್” ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಘೋಷಿಸಿದೆ.ಈ ಲಸಿಕೆಯನ್ನು ICMR ನ ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ, ಜೊತೆಗೆ ಜೈವಿಕ ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ರೋಗನಿರೋಧಕ ಸಂಸ್ಥೆಯ ಸಹಭಾಗಿತ್ವದಲ್ಲಿ ರೂಪಿಸಲಾಗಿದೆ.

ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ವಿರುದ್ಧ ಲಸಿಕೆ:
ಆಡ್‍ಫಾಲ್ಸಿವ್ಯಾಕ್ಸ್ ಲಸಿಕೆ, ಮಲೇರಿಯಾದ ಪ್ರಮುಖ ಕಾರಣಕರವಾಗಿರುವ Plasmodium falciparum ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಲಸಿಕೆ ಎರಡು ಹಂತಗಳಲ್ಲಿ ಪರಾವಲಂಬಿಯನ್ನು ಗುರಿಯಾಗಿಸುತ್ತಿದ್ದು, ದೀರ್ಘಕಾಲ ದೇಹದಲ್ಲಿ ಇರುವುದು ಹಾಗೂ ಸಾಮಾನ್ಯ ಉಷ್ಣಾಂಶದಲ್ಲಿಯೇ 9 ತಿಂಗಳವರೆಗೆ ಸಂಗ್ರಹಿಸಬಹುದಾಗಿದೆ.

ಅನುಮೋದನೆಗೂ ಮುನ್ನ 7 ವರ್ಷಗಳು ಬೇಕಾಗಬಹುದು:
ಲಸಿಕೆ ಪ್ರಸ್ತುತ ಆರಂಭಿಕ ಪರೀಕ್ಷಾ ಹಂತದಲ್ಲಿದೆ. ಇದರ ಮೊದಲ ಫಲಿತಾಂಶಗಳು ಅತ್ಯಂತ ಹೃದಯಂಗಮವಾಗಿವೆ. ಆದರೆ ಮಾನವ ಬಳಕೆಗೆ ಮುನ್ನ ಎಲ್ಲಾ ಹಂತದ ಪರೀಕ್ಷೆ ಹಾಗೂ ಅನುಮೋದನೆಗಳಿಗಾಗಿ ಇನ್ನೂ ಸುಮಾರು 7 ವರ್ಷಗಳು ಬೇಕಾಗಬಹುದು.

ವಿದೇಶಿ ಲಸಿಕೆಗಳಿಗಿಂತ ಅಗ್ಗ ಮತ್ತು ಪರಿಣಾಮಕಾರಿ:
ಭಾರತದ ಈ ಲಸಿಕೆ ಅಸ್ತಿತ್ವದಲ್ಲಿರುವ ವಿದೇಶಿ ಲಸಿಕೆಗಳಿಗಿಂತ ಅಗ್ಗವಾಗಿದ್ದು, ಹೆಚ್ಚು ಪರಿಣಾಮಕಾರಿಯೂ ಆಗಬಹುದು. ಇದು ಮೇಕ್ ಇನ್ ಇಂಡಿಯಾ ಯ ಉದ್ದೇಶಗಳನ್ನು ನೆರವೇರಿಸುತ್ತದೆ ಮತ್ತು ಮಾಸ್ ಲೆವೆಲ್‌ನಲ್ಲಿ ಮಲೇರಿಯಾ ತಡೆಯುವಲ್ಲಿ ಪ್ರಮುಖ ಸಾಧನವಾಗಬಲ್ಲದು.

Hot this week

ಬಾಲಕನ ಶ್ವಾಸಕೋಶದಿಂದ ಪಿನ್ ಹೊರ ತೆಗೆದು ಜೀವ ಉಳಿಸಿದ ವೈದ್ಯರು

ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ...

ಅರ್ಥರ್ ಓಸ್ ಬರ್ನ್ ಅವರ ನಂಬಲಸಾಧ್ಯವಾದ ಸಾಯಿಬಾಬಾ

ಹಾಸನ:ಗೊರೂರು ಅನಂತ ರಾಜು(Gorur AnanthaRaju) ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ...

ಶ್ರೀಲಂಕಾದ ಉಪ ಹೈಕಮಿಷನರ್-ರಾಜ್ಯಪಾಲರ ಸೌಹಾರ್ದಯುತ ಭೇಟಿ

ಶ್ರೀ ಡಾ. ಗಣೇಶನಾಥನ್ ಗೀತೀಶ್ವರನ್,(Shri Dr. Ganesanathan Geathiswaran) ಶ್ರೀಲಂಕಾದ ಉಪ...

ನಿಯೋ ಫ್ರೆಶ್ ಸೂಪರ್ ಮಾರ್ಕೆಟ್‌ಗೆ ನಂಜಾವಧೂತ ಮಹಾಸ್ವಾಮೀಜಿ ಚಾಲನೆ

ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ...

ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 09.06.2026 TUESDAY.ಮಂಗಳವಾರ*ಸಂವತ್ಸರ:ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA: UTTARAYANA. ಋತು:...

Topics

ಲಲಿತಕಲಾ ಅಕಾಡೆಮಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ (Information Dept.) ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ...

ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 07.06.2026 SUNDAY.ಭಾನುವಾರ*ಸಂವತ್ಸರ: ಪರಾಭವ SAMVATSARA : PARABHAVA. ಆಯಣ: ಉತ್ತರಾಯಣ AYANA:...

Related Articles