ಮೈಸೂರಿನ ಪರಂಪರೆ ಗತ ವೈಭವ ಉಳಿದಿರುವುದು ಬೆಂಗಳೂರಿನ ಬಸವನಗುಡಿಯಲ್ಲಿ (Bsavanagudi) ಎಂದು ಹೇಳಲು ಹೆಮ್ಮೆ ಆಗುತ್ತದೆ. ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ (Srikantadatta Wodeyar) ಸಾಂಸ್ಕೃತಿಕ ಕಲಾಸಂಘ ನಗರದ ನರಸಿಂಹರಾಜ ಕಾಲೋನಿಯ ವೃತ್ತದ ಅಶ್ವಥ್ ಕಲಾಭವನದ ಮುಂಭಾಗ ಏರ್ಪಡಿಸಿದ್ದ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ (Sri Kanteerava Narasimharaj Wodeyar) ಅವರ ಹಾಗೂ ಕಂಚಿನ ಪುತ್ತಳಿಯ ಅನಾವರಣ ವನ್ನು ಅವರ 138ನೇ ಜಯಂತಿ ಉತ್ಸವ ಆಚರಣೆಯ ಕಾರ್ಯಕ್ರಮವನ್ನು ರಾಜ ವಂಶಸ್ತ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಶತವಾಧಾನಿ ಆರ್ ಗಣೇಶ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ಸಂತೋಷ ಉಂಟು ಮಾಡಿದೆ ನಮ್ಮ ಮುತ್ತಾತನವರ ಪುತ್ತಳಿ (Satue) ಅನಾವರಣ ಮಾಡುವ ಸೌಭಾಗ್ಯ ನನಗೆ ಬಂದಿದೆ ಹಾಗಾಗಿ ಅರಮನೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಮೈಸೂರು ರಾಜವಂಶೋತ್ಸವ ಮನೆತನ ಬೆಂಗಳೂರಿನಲ್ಲಿ ಎಸ್ ಕೆ ಸಿ ಸಿ ಐ ಕನ್ನಡ ಸಾಹಿತ್ಯ ಪರಿಷತ್ ಮಿಥಿಕ್ ಸೊಸೈಟಿ ಯಂತ ಹಲವಾರು ಇತಿಹಾಸ ಪ್ರಸಿದ್ಧ ಕೊಡುಗೆ ಕೊಟ್ಟಿದೆ.

ಬೆಂಗಳೂರಿನ ಬಸವನಗುಡಿ ನಮ್ಮ ಮೈಸೂರು ಮನೆತನದ ಹಳೆಯ ಪರಂಪರೆ ಉಳಿಸಿಕೊಳ್ಳುವುದರಲ್ಲಿ ಪ್ರಸಿದ್ಧವಾಗಿದೆ ಹಾಗಾಗಿ ಈ ಜಾಗದಲ್ಲಿ ನಮ್ಮ ಮುತ್ತಾತನವರ ಪುತ್ತಳಿ ಅನಾವರಣ ಮಾಡಿದ್ದು ನನಗೆ ಸಂತೋಷ ತಂದಿದೆ ಈ ಪರಂಪರೆ ಮುಂದಿನ ಪೀಳಿಗೆಗೂ ಸಿಗಲಿ ಎಂದು ಆಶಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಪದ್ಮಭೂಷಣ ಶತಾವಧಾನಿ ಆರ್ ಗಣೇಶ್ ಮಾತನಾಡಿ ಮೈಸೂರು ರಾಜರ ಮನೆತನದ ಬಗ್ಗೆ ಒಂದು ವಸ್ತು ಸಂಗ್ರಹಾಲಯದ ಅವಶ್ಯಕತೆ ಇದೆ ಜಯಚಾಮರಾಜೇಂದ್ರ ಅವರ ಗ್ರಂಥಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಿಂದೆ ಮರು ಮುದ್ರಣ ಮಾಡಿ ಅವರ ಸಾಧನೆಗಳನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದ್ದರು.
ಮೈಸೂರು ಪರಂಪರೆಗೆ ಇನ್ನೊಂದಷ್ಟು ಕೊಡಗೆಗಳು ಸೇರ್ಪಡೆ ಎಂದರೆ ಸ್ಕೌಟ್ಸ್ ಪದ್ದತಿ ಅಳವಡಿಸಿದ್ದು ಮೈಸೂರು ಮನೆತನ, ಚಾಣಕ್ಯನ ಅರ್ಥಶಾಸ್ತ್ರ ಮೊದಲಿಗೆ ತಂದಿದ್ದೆ ಮೈಸೂರು ಮನೆತನ ಇಂಥ ಪರಂಪರೆಯಲ್ಲಿ ಬಂದ ಕಂಠೀರವ ನರಸಿಂಹರಾಜ ವಡೆಯರ್ ಪುತಳಿ ಅನಾವರಣ ಮಾಡಿದ್ದು ಖುಷಿ ತಂದಿದೆ ಎಂದರು.

